Tuesday, November 24, 2020

ಲವ್ ಜಿಹಾದ್‌ಗಾಗಿ ಮತಾಂತರ ನಿಷೇಧ: ಸುಗ್ರೀವಾಜ್ಞೆಗೆ ಉ.ಪ್ರ.ಅಸ್ತು

 ಲವ್ ಜಿಹಾದ್ಗಾಗಿ ಮತಾಂತರ ನಿಷೇಧ: ಸುಗ್ರೀವಾಜ್ಞೆಗೆ .ಪ್ರ.ಅಸ್ತು

ಲಕ್ನೋ:  ಬಿಜೆಪಿ ನಾಯಕರು "ಲವ್ ಜಿಹಾದ್" ಎಂದು ಕರೆಯುವ ವಿವಾಹದ ಸಲುವಾಗಿ ನಡೆಸುವ ಧಾರ್ಮಿಕ ಮತಾಂತರವನ್ನು ನಿಭಾಯಿಸಲು ಕಠಿಣ ಕಾನೂನಿನ ಕರಡನ್ನು ಉತ್ತರ ಪ್ರದೇಶ ಸರ್ಕಾರ 2020 ನವೆಂಬರ್  24ರ ಮಂಗಳವಾರ ಅಂಗೀಕರಿಸಿತು.

ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದರು.

"ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ವಿರುದ್ಧ ಸುಗ್ರೀವಾಜ್ಞೆಯನ್ನು ತರಲು ಉತ್ತರ ಪ್ರದೇಶ ಸಚಿವ ಸಂಪುಟವು ನಿರ್ಧರಿಸಿದೆ" ಎಂದು ರಾಜ್ಯ ಸಂಪುಟ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದರು.

"ವಂಚನೆ, ಸುಳ್ಳು, ಬಲ ಮತ್ತು ಅಪ್ರಾಮಾಣಿಕತೆಯನ್ನು ಬಳಸಿಕೊಂಡು ಧಾರ್ಮಿಕ ಮತಾಂತರಗಳನ್ನು ಮಾಡುವ ವಿಧಾನವು ಹೃದಯ ವಿದ್ರಾವಕವಾಗಿದೆ ಮತ್ತು ನಿಟ್ಟಿನಲ್ಲಿ ಕಾನೂನನ್ನು ಹೊಂದಿರುವುದು ಅಗತ್ಯವಾಗಿತ್ತು." ಎಂದು ಸಿಂಗ್ ನುಡಿದರು.

ಹೊಸ ಕಾನೂನಿನಡಿಯಲ್ಲಿ ಅಪರಾಧಕ್ಕೆ ಶಿಕ್ಷೆ ಒಂದರಿಂದ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ಮತ್ತು ೧೫ ಸಾವಿರ ರೂ.ದಂಡ. ಆದರೆ ಭಾಗಿಯಾಗಿರುವ ಮಹಿಳೆ ಅಪ್ರಾಪ್ತ ವಯಸ್ಕ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ, ಜೈಲು ಶಿಕ್ಷೆ ಮೂರರಿಂದ ರಿಂದ ೧೦ ವರ್ಷಗಳವರೆಗೆ ಇರುತ್ತದೆ ಮತ್ತು ೨೫,೦೦೦ ರೂ.ಗಳಿಗೆ ಏರುತ್ತದೆ  ಎಂದು ಅವರು ಹೇಳಿದರು.

"ಸಾಮೂಹಿಕ ಮತಾಂತರದ ಸಂದರ್ಭದಲ್ಲಿ, ಮೂರು ವರ್ಷದಿಂದ ೧೦ ವರ್ಷಗಳವರೆಗೆ ಶಿಕ್ಷೆ ಮತ್ತು ಅದರಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳಿಗೆ ೫೦,೦೦೦ ರೂ.ಗಳ ದಂಡ" ಎಂದು ಅವರು ಹೇಳಿದರು.

ಮದುವೆಯ ನಂತರ ಯಾರಾದರೂ ತಮ್ಮ ಧರ್ಮವನ್ನು ಬದಲಾಯಿಸಲು ಬಯಸಿದರೆ, ಅವರು ಹಾಗೆ ಮಾಡಬಹುದು . ಆದರೆ ಜಿಲ್ಲಾಧಿಕಾರಿಗೆ ಎರಡು ತಿಂಗಳು ಮುಂಚಿತವಾಗಿ ನಿಗದಿತ ರೂಪದಲ್ಲಿ ತಿಳಿಸಬೇಕಾಗಿದ್ದು, ಅನುಮತಿ ದೊರೆತ ನಂತರ ವ್ಯಕ್ತಿಯು ಮತಾಂತರಗೊಳ್ಳಬಹುದು. ಇದು ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.

No comments:

Advertisement