My Blog List

Friday, November 6, 2020

ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಗುರಾಣಿ

 ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಗುರಾಣಿ

ನವದೆಹಲಿ: ಹಕ್ಕುಚ್ಯುತಿ ನೋಟಿಸ್ ವಿರುದ್ಧ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ಸದನದ ಗೌಪ್ಯತೆಯ ಉಲ್ಲಂಘನೆ ಮಾಡಿದ್ದಕ್ಕಾಗಿ ಅಕ್ಟೋಬರ್ ೧೨ರಂದು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಪತ್ರ ಬರೆದುದಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ 2020 ನವೆಂಬರ್ 06ರ ಶುಕ್ರವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತು.

ಎರಡು ವಾರಗಳ ಬಳಿಕ ಪತ್ರಕ್ಕೆ ಸಂಬಂಧಿಸಿದಂತೆ ನಡೆಯಲಿರುವ ವಿಚಾರಣೆಯ ಕಾಲದಲ್ಲಿ ಖುದ್ದು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ಆಜ್ಞಾಪಿಸಿತು. ಅಲ್ಲಿಯವರೆಗೆ ಹಕ್ಕುಚ್ಯುತಿ ವಿಷಯಕ್ಕೆ ಸಂಬಂಧಿಸಿದಂತೆ ಗೋಸ್ವಾಮಿ ಅವರನ್ನು ಬಂಧಿಸುವಂತಿಲ್ಲ ಎಂದೂ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.. ಬೋಬ್ಡೆ ನೇತೃತ್ವದ ಪೀಠ ಆದೇಶ ನೀಡಿತು.

ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ವಕೀಲ ಅರವಿಂದ ದಾತಾರ್ ಅವರನ್ನು ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರಿ) ಪೀಠ ನೇಮಿಸಿತು.

ಮಹಾರಾಷ್ಟ್ರ ವಿಧಾನಸಭೆಯ ಕಾರ್‍ಯದರ್ಶಿ ಅವರು ಬರೆದಿರುವ ಪತ್ರವು ನ್ಯಾಯಾಲಯವನ್ನು ಸಂಪರ್ಕಿಸಿರುವುದಕ್ಕಾಗಿ ಗೋಸ್ವಾಮಿ ಅವರನ್ನು ಬೆದರಿಸಿರುವುದರಿಂದ ಅದು ನ್ಯಾಯದಾನದಲ್ಲಿ ಗಂಭೀರ ಹಸ್ತಕ್ಷೇಪ ಮಾಡಿದೆ ಎಂದು ಸುಪ್ರೀಂಕೋರ್ಟ್ ಹೇಳಿತು. ನ್ಯಾಯಮೂರ್ತಿಗಳಾದ .ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡಿರುವ ಪೀಠವು ವಿಧಾನಸಭೆ ಕಾರ್‍ಯದರ್ಶಿಯ ಪತ್ರವನ್ನು ಅಭೂತಪೂರ್ವ ಮತ್ತು ಆಘಾತಕಾರಿ ಎಂದು ಬಣ್ಣಿಸಿತು.

ನ್ಯಾಯಾಲಯವನ್ನು ಸಂಪರ್ಕಿಸಿರುವುದಕ್ಕಾಗಿ ಅರ್ಜಿದಾರರನ್ನು ಬೆದರಿಸುವುದು ಪತ್ರ ಬರೆದಿರುವವರ ಸ್ಪಷ್ಟ ಉದ್ದೇಶವಾಗಿರುವಂತೆ ಕಾಣುತ್ತದೆ. ನ್ಯಾಯಾಲಯಕ್ಕೆ ಹೋಗಿರುವುದಕ್ಕಾಗಿ ದಂಡ ವಿಧಿಸಲಾಗುವುದು ಎಂಬ ಬೆದರಿಕೆಯನ್ನು ಪತ್ರವು ಅರ್ಜಿದಾರರಿಗೆ ಒಡ್ಡಿದೆ ಎಂದು ಪೀಠ ಹೇಳಿತು.

ಸಂವಿಧಾನದ ೩೨ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಲು ಇರುವ ಹಕ್ಕನ್ನು ಅರ್ಥ ಮಾಡಿಕೊಳ್ಳುವಂತೆ ವಿಧಾನಸಭೆಗೆ ಕಿವಿ ಮಾತು ಹೇಳುತ್ತೇವೆ, ಇದು ಮೂಲಭೂತ ಹಕ್ಕು ಕೂಡಾ ಎಂದು ಪೀಠ ಹೇಳಿತು.

ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನೆರವಾಗುವಂತೆ ಸುಪ್ರೀಂಕೋರ್ಟ್ ಪೀಠವು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೂ ನೋಟಿಸ್ ನೀಡಿತು.

ವಿಧಾನಸಭೆಯ ಕಾರ್‍ಯದರ್ಶಿ ಬರೆದ ಅಕ್ಟೋಬರ್ ೧೩ರ ಪತ್ರವನ್ನು ಗೋಸ್ವಾಮಿ ಅವರ ಪರ ವಕೀಲ ಹರೀಶ ಸಾಳ್ವೆ ಅವರು ೪೭ರ ಹರೆಯದ ಪತ್ರಕರ್ತನ ಪತ್ನಿ ಪ್ರಮಾಣಪತ್ರ ಸಹಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಜೊತೆಗೆ ಲಗತ್ತಿಸಿದ್ದರು. ಗೋಸ್ವಾಮಿ ಅವರು ಸೆರೆಮನೆಯಲ್ಲಿ ಇರುವುದರಿಂದ ಅವರ ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅರ್ನಬ್ ಗೋಸ್ವಾಮಿ ಅವರನ್ನು ಅವರ ಮುಂಬೈ ನಿವಾಸದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ೨೦೧೮ರ ಹಳೆಯ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬುಧವಾರ ಬಂಧಿಸಿ ಬಳಿಕ ಅಲಿಬಾಗ್‌ಗೆ ಒಯ್ಯಲಾಗಿದೆ. ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಮತ್ತು ಅವರ ತಾಯಿ ಕುಮುದ ನಾಯ್ಕ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ತಮಗೆ . ಕೋಟಿ ರೂಪಾಯಿ ಪಾವತಿ ಮಾಡಬೇಕಾದ ಮೂವರ ಹೆಸರುಗಳಲ್ಲಿ ಅರ್ನಬ್ ಹೆಸರನ್ನೂ ಸೇರಿಸಿದ್ದರು. 

No comments:

Advertisement