My Blog List

Wednesday, November 11, 2020

ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಶೇ.೯೨ರಷ್ಟು ಪರಿಣಾಮಕಾರಿ: ರಷ್ಯಾ

 ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಶೇ.೯೨ರಷ್ಟು ಪರಿಣಾಮಕಾರಿ: ರಷ್ಯಾ

ಮಾಸ್ಕೋ: ಮಧ್ಯಂತರ ಪ್ರಯೋಗಗಳ ಫಲಿತಾಂಶ ಪ್ರಕಾರ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಕೋವಿಡ್-೧೯ ಸೋಂಕಿನಿಂದ  ಜನರನ್ನು ರಕ್ಷಿಸುವಲ್ಲಿ ಶೇಕಡಾ ೯೨ರಷ್ಟು ಪರಿಣಾಮಕಾರಿಯಾಗಿದೆ ಎಂದು ದೇಶದ ಸಾರ್ವಭೌಮ ಸಂಪತ್ತು ನಿಧಿ 2020 ನವೆಂಬರ್ 11ರ ಬುಧವಾರ ಪ್ರಕಟಿಸಿತು.

ಸೋಂಕಿನ ವಿರುದ್ಧ ಲಸಿಕೆ ಕಂಡು ಹಿಡಿಯಲು ನಡೆಯುತ್ತಿರುವ ಜಾಗತಿಕ ಯತ್ನಗಳಿಗೆ ಸಂಬಂಧಿಸಿದಂತೆ ಕೊನೆಯ ಹಂತದ ಮಾನವ ಪ್ರಯೋಗದ ಬಳಿಕ ಪ್ರಕಟವಾದ ಎರಡನೇ ಲಸಿಕೆ ಇದಾಗಿದೆ. ಇದು . ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡು ವಿಶ್ವ ಆರ್ಥಿಕತೆಯನ್ನು ಧ್ವಂಸಗೊಳಿಸಿದ ಸಾಂಕ್ರಾಮಿಕ ರೋಗವನ್ನು ತಡೆಯುವಂತಹ ಲಸಿಕೆಯಾಗಿದೆ.

ಸೆಪ್ಟೆಂಬರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮನುಷ್ಯರ ಮೇಲೆ ಪ್ರಯೋಗಕ್ಕೆ ಅನುಮತಿ ನೀಡಿದರೂ, ರಷ್ಯಾವು ಸ್ಪುಟ್ನಿಕ್ ವಿಯನ್ನು ಸಾರ್ವಜನಿಕ ಬಳಕೆಗಾಗಿ ಆಗಸ್ಟ್ ತಿಂಗಳಲ್ಲೇ ನೋಂದಾಯಿಸಿತ್ತು.

ಪ್ರಯೋಗದಲ್ಲಿ ಭಾಗವಹಿಸಿ ಎರಡು-ಡೋಸ್ ಲಸಿಕಾ ಚುಚ್ಚುಮದ್ದು ಸ್ವೀಕರಿಸಿದ ಮೊದಲ ೧೬,೦೦೦ ಮಂದಿಯ ದತ್ತಾಂಶವನ್ನು ಮಧ್ಯಂತರ ಫಲಿತಾಂಶಗಳು ಆಧರಿಸಿವೆ. ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್), ಲಸಿಕೆ ತಯಾರಿಯನ್ನು ಬೆಂಬಲಿಸುತ್ತಿದೆ ಮತ್ತು ಅದನ್ನು ಜಾಗತಿಕವಾಗಿ ಮಾರಾಟ ಮಾಡುತ್ತದೆ.

ಗಮಲೇಯ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಲಸಿಕೆಯ ಮೂರನೇ ಹಂತದ ಪ್ರಯೋಗವು ಮಾಸ್ಕೋದಾದ್ಯಂತ ೨೯ ಚಿಕಿತ್ಸಾಲಯಗಳಲ್ಲಿ ನಡೆಯುತ್ತಿದೆ ಮತ್ತು ಒಟ್ಟು ೪೦,೦೦೦ ಸ್ವಯಂಸೇವಕರನ್ನು ಒಳಗೊಂಡಿರುವ ಪ್ರಯೋಗದಲ್ಲಿ ಕಾಲು ಭಾಗದಷ್ಟು ಮಂದಿ ಪ್ಲೇಸ್‌ಬೊ ಶಾಟ್ ಪಡೆಯುತ್ತಾರೆ.

ಪ್ಲೇಸ್‌ಬೊ ಪಡೆದವರಿಗಿಂತ ಸ್ಪುಟ್ನಿಕ್ ವಿ ಲಸಿಕೆ ಹಾಕಿದ ಜನರಲ್ಲಿ  ಕೋವಿಡ್-೧೯ ಸೋಂಕು ತಟ್ಟುವ    ಸಾಧ್ಯತೆಗಳು ಶೇಕಡಾ ೯೨ರಷ್ಟು ಕಡಿಮೆ ಎಂದು ಆರ್‌ಡಿಐಎಫ್ ತಿಳಿಸಿದೆ.

ಇದು ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ನಿಗದಿಪಡಿಸಿದ ಕೋವಿಡ್-೧೯ ಲಸಿಕೆಗಳ ಶೇಕಡಾ ೫೦ರಷ್ಟು ಪರಿಣಾಮಕಾರಿತ್ವದ ಮಿತಿಗಿಂತ ಹೆಚ್ಚಾಗಿದೆ.

"ನಾವು ಬಹಳ ಪರಿಣಾಮಕಾರಿಯಾದ ಲಸಿಕೆ ಹೊಂದಿದ್ದೇವೆ ಎಂದು ನಾವು ದತ್ತಾಂಶವನ್ನು ಆಧರಿಸಿ ತೋರಿಸುತ್ತಿದ್ದೇವೆಎಂದು ಆರ್‌ಡಿಐಎಫ್ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಹೇಳಿದರು.

ಲಸಿಕೆ ತಯಾರಕರಾದ ಫಿಜರ್ ಇಂಕ್ ಮತ್ತು ಬಯೋಎನ್ಟೆಕ್ ಸೋಮವಾರ ಪ್ರಕಟಿಸಿದ ಕೋವಿಡ್ ಲಸಿಕೆಯ ಫಲಿತಾಂಶಗಳ ಬೆನ್ನಲ್ಲೇ ರಷ್ಯಾದ ಪ್ರಕಟಣೆಯು ಹೊರಬಿದ್ದಿದೆ. ಫಿಜರ್ ಇಂಕ್ ಮತ್ತು ಬಯೋ ಎನ್ಟೆಕ್ ಪ್ರಕಟಿಸಿದ ಔಷಧವು ಶೇಕಡಾ ೯೦ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿತ್ತು.

ಫಿಜರ್ ಮತ್ತು ಬಯೋಟೆಕ್, ಲಸಿಕೆಗೆ ಆರ್‌ಎನ್‌ಎ (ಎಮ್‌ಆರ್‌ಎನ್‌ಎ) ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು ನಿಜವಾದ ವೈರಸ್ ಕಣಗಳಂತಹ ರೋಗಕಾರಕಗಳನ್ನು ಬಳಸದೆ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸಲು ವಿನ್ಯಾಸಗೊಳಿಸಲಾಗಿದೆ.

ಸಾಮಾನ್ಯವಾಗಿ ನೆಗಡಿಯನ್ನು ಉಂಟುಮಾಡುವ ವಿಭಿನ್ನ ವೈರಲ್ ವಾಹಕಗಳ ಆಧಾರದ ಮೇಲೆ ೨೧ ದಿನಗಳ ಅಂತರದಲ್ಲಿ ಎರಡು ಚುಚ್ಚುಮದ್ದುಗಳಿಂದ ಪ್ರತಿಕ್ರಿಯೆಯನ್ನು ಪ್ರಚೋದಿಸಲು ಸ್ಪುಟ್ನಿಕ್ ವಿ ಲಸಿಕೆಯನ್ನು ವಿನ್ಯಾಸಗೊಳಿಸಲಾಗಿದೆ.

No comments:

Advertisement