Wednesday, November 11, 2020

ತೆರಿಗೆ ಭಯೋತ್ಪಾದನೆಯಿಂದ ಪಾರದರ್ಶಕತೆಗೆ ಭಾರತದ ಚಲನೆ: ಪ್ರಧಾನಿ

 ತೆರಿಗೆ ಭಯೋತ್ಪಾದನೆಯಿಂದ ಪಾರದರ್ಶಕತೆಗೆ ಭಾರತದ ಚಲನೆ: ಪ್ರಧಾನಿ

ನವದೆಹಲಿ: ಭಾರತವು ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯ ಕಡೆಗೆ ಚಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 11ರ ಬುಧವಾರ ಇಲ್ಲಿ ಹೇಳಿದರು.

ಒಡಿಶಾದ ಕಟಕ್‌ನಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ (ಐಟಿಎಟಿ) ಕಚೇರಿ ಮತ್ತು ವಸತಿ ಸಮುಚ್ಚಯವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಪ್ರಧಾನಿ ಮಾತನಾಡಿದರು.

ಉದ್ಘಾಟನಾ ಸಂದರ್ಭದಲ್ಲಿ ಮೋದಿ ಅವರು ಇತ್ತೀಚೆಗೆ ಪರಿಚಯಿಸಿದ ತೆರಿಗೆ ಸುಧಾರಣೆಗಳತ್ತ ಬೊಟ್ಟು ಮಾಡಿದರು ಮತ್ತು "ತೆರಿಗೆ ಸಂಗ್ರಹಿಸುವಾಗ ಸಾರ್ವಜನಿಕರನ್ನು ಅಸಮಾಧಾನಗೊಳಿಸಬಾರದುಎಂದು ಹೇಳಿದರು.

"ತೆರಿಗೆ ಪಾವತಿದಾರನು ಈಗ ತೆರಿಗೆ ಮರುಪಾವತಿಗಾಗಿ ವರ್ಷಗಳವರೆಗೆ ಕಾಯಬೇಕಾಗಿಲ್ಲಎಂದು ಪ್ರಧಾನಿ ಹೇಳಿದರು.

"ಭಾರತವು ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆ ಕಡೆಗೆ ಚಲಿಸುತ್ತಿದೆಎಂದು ಮೋದಿ ಅವರು ಖುದ್ದು ಹಾಜರಾಗಿ ಸಲ್ಲಿಸದ (ಮುಖರಹಿತ) ಮನವಿಗಳನ್ನು ಹಾಗೂ ವಿವಾದ ಪರಿಹಾರದ ಕಾರ್ಯವಿಧಾನವನ್ನು ಉಲ್ಲೇಖಿಸಿ ಹೇಳಿದರು.

ತೆರಿಗೆ ಸುಧಾರಣೆಗಳನ್ನು ಒತ್ತಿಹೇಳುತ್ತಾ, " ಲಕ್ಷ ರೂ.ಗಳ ಆದಾಯದ ಮೇಲಿನ ತೆರಿಗೆ ಕಡಿಮೆ ಆದಾಯದ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿದೆಎಂದು ಪ್ರಧಾನಿ ಹೇಳಿದರು, "ಕಾರ್ಪೊರೇಟ್ ತೆರಿಗೆಯೂ ಐತಿಹಾಸಿಕ ಕಡಿತವನ್ನು ಕಂಡಿದೆ" ಎಂದು ಅವರು ನುಡಿದರು.

"ತೆರಿಗೆದಾರರ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಗುರುತಿಸುವ ಹಾಗೂ ತೆರಿಗೆ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಮೂಡಿಸುವತ್ತ ಹೆಜ್ಜೆ ಹಾಕಿರುವ ಆಯ್ದ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆಎಂದು ಅವರು ಉದ್ಘಾಟನೆಯ  ಸಂದರ್ಭದಲ್ಲಿ ಹೇಳಿದರು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಟಕ್‌ನ ಐಟಿಎಟಿಯ ಹೊಸದಾಗಿ ನಿರ್ಮಿಸಲಾದ ಆಫೀಸ್-ಕಮ್-ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್, ಒಡಿಶಾ ಸರ್ಕಾರವು ೨೦೧೫ ರಲ್ಲಿ ಉಚಿತವಾಗಿ ನೀಡಿದ್ದ .೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.

ಕಚೇರಿ ಸಂಕೀರ್ಣದ ಒಟ್ಟು ಅಂತರ್ನಿರ್ಮಿತ ವಿಸ್ತೀರ್ಣ ,೯೩೮ ಚದರ ಮೀಟರ್, ಮೂರು ಮಹಡಿಗಳಲ್ಲಿ, ವಿಶಾಲವಾದ ನ್ಯಾಯಾಲಯ ಕೊಠಡಿ, ಅತ್ಯಾಧುನಿಕ ರೆಕಾರ್ಡ್ ರೂಮ್, ನ್ಯಾಯಪೀಠದ ಸದಸ್ಯರಿಗೆ ಸುಸಜ್ಜಿತ ಕೋಣೆಗಳು, ಗ್ರಂಥಾಲಯ ಕೊಠಡಿ, ಸುಸಜ್ಜಿತ ಆಧುನಿಕ ಸಮ್ಮೇಳನ ಸಭಾಂಗಣ, ದಾವೆ ಹೂಡುವವರಿಗೆ ಸಾಕಷ್ಟು ಸ್ಥಳಾವಕಾಶ, ಚಾರ್ಟರ್ಡ್ ಅಕೌಂಟೆಂಟ್, ವಕೀಲರಿಗೆ ಬಾರ್ ರೂಮ್ ಇತ್ಯಾದಿ ವ್ಯವಸ್ಥೆಗಳಿವೆ.

ಐಟಿಎಟಿ ಕಟಕ್ ೧೯೭೦ ರಿಂದ ಬಾಡಿಗೆ ಆವರಣದಲ್ಲಿ ಸುಮಾರು ೫೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಒಡಿಶಾ ರಾಜ್ಯದಿಂದ ದಾಖಲಾಗುವ ಮೇಲ್ಮನವಿಗಳಿಗೆ ನ್ಯಾಯವ್ಯಾಪ್ತಿಯನ್ನು ಹೊಂದಿದೆ.

No comments:

Advertisement