My Blog List

Saturday, November 7, 2020

ಇಸ್ರೋದಿಂದ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ

 ಇಸ್ರೋದಿಂದ ಕೋವಿಡ್ ಲಾಕ್ಡೌನ್ ನಂತರ

ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ

ಬೆಂಗಳೂರು/ ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋತನ್ನ ಇತ್ತೀಚಿನ ಭೂ ವೀಕ್ಷಣಾ ಉಪಗ್ರಹ (ಇಒಎಸ್ -೦೧) ಮತ್ತು ಗ್ರಾಹಕ ರಾಷ್ಟ್ರಗಳ ಒಂಬತ್ತು ಉಪಗ್ರಹಗಳನ್ನು (ಒಟ್ಟು ೧೦ ಉಪಗ್ರಹಗಳು) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ ೪೯ ಉಡಾವಣಾ ವಾಹನದಲ್ಲಿ 2020 ನವೆಂಬರ್ 07ರ ಶನಿವಾರ ಸಂಜೆ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಿತು.

ಮಾರ್ಚ್ ೨೩ ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಕೊರೋನಾವೈರಸ್ ದಿಗ್ಬಂಧನ (ಲಾಕ್ಡೌನ್) ಜಾರಿಗೊಳಿಸಿದ ಬಳಿಕ ಇದು ಬಾಹ್ಯಾಕಾಶ ಸಂಸ್ಥೆಯು ನಡೆಸಿದ ಮೊದಲ ಉಡಾವಣೆಯಾಗಿದೆ. ಜಿಎಸ್ಎಟಿ -೩೦ ದೂರಸಂಪರ್ಕ ಉಪಗ್ರಹದ ಹಿಂದಿನ ಉಡಾವಣೆಯನ್ನು ಜನವರಿಯಲ್ಲಿ ನಡೆಸಲಾಗಿತ್ತು, ಆದರೆ ಫ್ರೆಂಚ್ ಗಿನಿಯಾದ ನೆಲೆಯಿಂದ ಅದನ್ನು ಹಾರಿಸಲಾಗಿತ್ತು.

ಉಡಾವಣೆಯು ೨೬ ಕ್ಷಣಗಣನೆ ಬಳಿಕ ಮಧ್ಯಾಹ್ನ .೧೨ ಕ್ಕೆ ನಡೆಯಿತು. ಪ್ರತಿಕೂಲ ಹವಾಮಾನ ಮತ್ತು ಹಾರಾಟದ ಹಾದಿಯಲ್ಲಿನ ಭಗ್ನಾವಶೇಷದಿಂದಾಗಿ ಉಡಾವಣೆಯು ೧೦ ನಿಮಿಷ ವಿಳಂಬವಾಗಿದೆ ಎಂದು ಇಸ್ರೋ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ಮಧ್ಯಾಹ್ನ .೩೪ ಕ್ಕೆ ಇಸ್ರೋ ಗ್ರಾಹಕರ ಉಪಗ್ರಹಗಳು ಬೇರ್ಪಟ್ಟವು ಮತ್ತು ಅವುಗಳ ಉದ್ದೇಶಿತ ಕಕ್ಷೆಗಳಲ್ಲಿ ಸೇರ್ಪಡೆಗೊಂಡವು ಎಂದು ಹೇಳಿದರು. ಬಳಿಕ ಭಾರತದ ಇಒಎಸ್ -೦೧ ಉಪಗ್ರಹವು ಪಿಎಸ್ಎಲ್ವಿಯು (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ನಾಲ್ಕನೇ ಹಂತದಿಂದ ಬೇರ್ಪಟಿತು ಮತ್ತು ಕಕ್ಷೆಗೆ ಸೇರ್ಪಡೆಯಾಯಿತು ಎಂದು ಇಸ್ರೋ ತಿಳಿಸಿದೆ.

ಪಿಎಸ್ಎಲ್ವಿಯನ್ನು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ವರ್ಕ್ಹಾರ್ಸ್ ಎಂದು ಕರೆಯಲಾಗುತ್ತದೆ ಮತ್ತು ಈಗ ಅದರ ೫೧ ನೇ ಉಡಾವಣೆಯನ್ನು ಪೂರ್ಣಗೊಳಿಸಲಾಗಿದೆ. ಶನಿವಾರದ ಉಡಾವಣೆಯು ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ನಡೆಸಲಾಗಿರುವ ೭೭ ನೇ ಉಡಾವಣಾ ಕಾರ್ಯಾಚರಣೆಯಾಗಿದೆ. ಈದಿನದ ಉಡಾವಣೆಯೊಂದಿಗೆ ಸಂಸ್ಥೆಯು ಒಟ್ಟು ೩೩ ರಾಷ್ಟ್ರಗಳ ೩೨೮ ವಿದೇಶಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದಂತಾಗಿದೆ.

ಇಸ್ರೋ ಪ್ರಕಾರ, ಇಒಎಸ್ -೦೧ ಅತ್ಯಂತ ಸುಧಾರಿತ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣಾ ಯೋಜನೆಯನ್ನು ಬೆಂಬಲಿಸುವಲ್ಲಿ ಅದನ್ನು ಬಳಸಲು ಉದ್ದೇಶಿಸಲಾಗಿದೆ.

ಇತರ ಒಂಬತ್ತು ಗ್ರಾಹಕ ಉಪಗ್ರಹಗಳು ಲಿಥುವೇನಿಯಾ (), ಲಕ್ಸೆಂಬರ್ಗ್ () ಮತ್ತು ಅಮೆರಿಕ ().

೨೦೨೦ ರಲ್ಲಿ ಇಸ್ರೋ ನಡೆಸಿದ ಮೊದಲ ಕಾರ್ಯಾಚರಣೆ ಇದಾಗಿದೆ.

ಇದಕ್ಕೂ ಮುನ್ನ, ನವೆಂಬರ್ ೦೭ ರಂದು ಉಡಾವಣೆಗೆ ಮುನ್ನ ಶ್ರೀಹರಿಕೋಟಾದ ಮೊದಲ ಉಡಾವಣಾ ವೇದಿಕೆಯಲ್ಲಿನ ಐಒಎಸ್-೦೧ ಮತ್ತು ಒಂಬತ್ತು ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳನ್ನು ಹೊತ್ತ  ಪಿಎಸ್ಎಲ್ವಿಸಿ ೪೯ ಚಿತ್ರವನ್ನು ಇಸ್ರೋ ಟ್ವೀಟ್ ಮಾಡಿತ್ತು.

ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ನೊಂದಿಗೆ ವಾಣಿಜ್ಯ ಒಪ್ಪಂದದಡಿಯಲ್ಲಿ ಗ್ರಾಹಕರ ಉಪಗ್ರಹಗಳನ್ನು ಉಡಾಯಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಎರಡನೇ ಹಂತಕ್ಕೆ (ಪಿಎಸ್ ), ನಾಲ್ಕನೇ ಹಂತಕ್ಕೆ (ಪಿಎಸ್ ) ಮತ್ತು ಪಿಎಸ್ಎಲ್ವಿ-ಸಿ ೪೯ ಪಿಎಸ್ ಗಾಗಿ ಆಕ್ಸಿಡೈಸರ್ ತುಂಬುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಇಸ್ರೋ ಟ್ವೀಟ್ ತಿಳಿಸಿತ್ತು.

ದೇಶದಲ್ಲಿ .೪೬ ದಶಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿರುವ ಕೊರೋನವೈರಸ್ (ಕೋವಿಡ್ -೧೯) ಮಧ್ಯೆ, ಉಡಾವಣೆಯ ಸಮಯದಲ್ಲಿ ವೀಕ್ಷಣಾ ಗ್ಯಾಲರಿಯನ್ನು ಮುಚ್ಚಲಾಗಿತ್ತು ಮತ್ತು ಬಾಹ್ಯಾಕಾಶ ಕೇಂದ್ರಕ್ಕೆ  ಮಾಧ್ಯಮ ಸಿಬ್ಬಂದಿಯನ್ನು ಕರೆಸಲು ಯೋಜಿಸಿರಲಿಲ್ಲ ಎಂದು ಸಂಸ್ಥೆ ತಿಳಿಸಿದೆ.

No comments:

Advertisement