Monday, November 30, 2020

‘ನಿವಾರ್’ ಬೆನ್ನಿಗೇ ’ಬುರೆವಿ’ ಚಂಡಮಾರುತ, ಎಚ್ಚರಿಕೆ

 ‘ನಿವಾರ್ ಬೆನ್ನಿಗೇ ಬುರೆವಿ ಚಂಡಮಾರುತ, ಎಚ್ಚರಿಕೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ 2020 ನವೆಂಬರ 30ರ ಸೋಮವಾರ ವಾಯುಭಾರ ಕುಸಿತ ಉಂಟಾಗಿದ್ದು, ತೀವ್ರವಾದ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ ಇದೆ ಮತ್ತು ಪರಿಣಾಮವಾಗಿ ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳದಲ್ಲಿ ಡಿಸೆಂಬರ್ ಮತ್ತು ೩ರ ನಡುವೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತು.

ಚಂಡಮಾರುತವು ಡಿಸೆಂಬರ್ ಸಂಜೆ ಅಥವಾ ರಾತ್ರಿ ಶ್ರೀಲಂಕಾ ಕರಾವಳಿಯನ್ನು ದಾಟಿ ನಂತರ ತಮಿಳುನಾಡಿನ ಕನ್ಯಾಕುಮಾರಿಯ ಸುತ್ತ ಮರುದಿನ ಬೆಳಗ್ಗ್ಗೆ ಕೊಮೋರಿನ್ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಐಎಂಡಿ ತಿಳಿಸಿದೆ.

ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಕೇರಳ, ಪುದುಚೇರಿ, ಕಾರೈಕಲ್, ಮಹೇ, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಲಕ್ಷದ್ವೀಪಗಳಲ್ಲಿ ಡಿಸೆಂಬರ್ ರಿಂದ ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತನ್ನ ಇತ್ತೀಚಿನ ಬುಲೆಟಿನ್ನಲ್ಲಿ ತಿಳಿಸಿದೆ. ಡಿಸೆಂಬರ್ 1ರ ಸೋಮವಾರ, ಪ್ರದೇಶಗಳಲ್ಲಿ ಕೆಲವಡೆ ಮತ್ತು ಇತರ ಸ್ಥಳಗಳಲ್ಲಿ ಮಳೆ ಬೀಳುವ ಸಾಧ್ಯತೆಯಿದೆ.

ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳದಲ್ಲಿ, ಡಿಸೆಂಬರ್ ರಂದು ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಮತ್ತು ಬೇರೆ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಬಹುದು. ಹಿಂದಿನ ಮತ್ತು ಮರುದಿನ ಕನ್ಯಾಕುಮಾರಿ ಮತ್ತು ತಿರುವನಂತಪುರಂ ಸೇರಿದಂತೆ ಎರಡೂ ರಾಜ್ಯಗಳ ದಕ್ಷಿಣ ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ನಿರೀಕ್ಷಿಸಬಹುದು ಎಂದು ಐಎಂಡಿ ಹೇಳಿದೆ.

"ಸೋಮವಾರ ಮುಂಜಾನೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಪಶ್ಚಿಮ-ವಾಯುವ್ಯ ದಿಕ್ಕಿಗೆ ಸಾಗಿ ಶ್ರೀಲಂಕೆಯ ತ್ರಿಕೋನಮಲೀಯ ಪೂರ್ವ-ಆಗ್ನೇಯಕ್ಕೆ ಸಾಗಲಿದೆ.

ಮುಂದಿನ ೧೨ ಗಂಟೆಗಳಲ್ಲಿ ತೀವ್ರವಾದ ವಾಯುಭಾರ ಕುಸಿತ ಬಳಿಕ ೨೪ ಗಂಟೆಗಳ ಅವಧಿಯಲ್ಲಿ ತೀವ್ರ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ.

ಚಂಡಮಾರುತವನ್ನು ಬುರೆವಿ ಎಂದು ಕರೆಯಲಾಗುತ್ತದೆ.

ಚಂಡಮಾರುತ ಪ್ರಭಾವಕ್ಕೆ ಒಳಪಡುವ ಎಲ್ಲ ಪ್ರದೇಶಗಳಲ್ಲಿ ಸೋಮವಾರದಿಂದ ಡಿಸೆಂಬರ್ ರವರೆಗೆ ಮೀನುಗಾರಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಇಲಾಖೆ ಸಲಹೆ ನೀಡಿತು.

ನಿವಾರ್ ಚಂಡಮಾರುತವು ಕೆಲ ದಿನಗಳ ಹಿಂದೆ ಪುದುಚೇರಿಯ ಕರಾವಳಿಯನ್ನು ದಾಟಿ ತಮಿಳುನಾಡು, ಪುದುಚೇರಿ, ಮತ್ತು ಕಾರೈಕಲ್ ಹಲವಾರು ಭಾಗಗಳಲ್ಲಿ ಭಾರಿ ಮಳೆಯನ್ನುಂಟು ಮಾಡಿತ್ತು.

ಕೇರಳ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಹವಾಮಾನ ವೈಪರೀತ್ಯದ ಮುನ್ಸೂಚನೆಯಿಂದಾಗಿ ಕೇರಳದ ದಕ್ಷಿಣ ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಅಲಪ್ಪುಳದಲ್ಲಿ ರೆಡ್ ಅಲರ್ಟ್ ಮತ್ತು ಕೊಟ್ಟಾಯಂ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.

ಮುಂದಿನ ಸೂಚನೆ ಬರುವವರೆಗೂ ಸೋಮವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗುವ ಎಲ್ಲಾ ಮೀನುಗಾರಿಕೆ ಚಟುವಟಿಕೆಗಳನ್ನು ಕೇರಳ ನಿಷೇಧಿಸಿದೆ. ಸಮುದ್ರದಲ್ಲಿ ಮೀನು ಹಿಡಿಯುವ ಎಲ್ಲರಿಗೂ ಹತ್ತಿರದ ಕರಾವಳಿ ವಲಯಕ್ಕೆ ಹಿಂತಿರುಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

No comments:

Advertisement