Monday, November 9, 2020

ಕೊರೋನಾ: ಫಿಜ್ಜರ್, ಬಯೋಟೆಕ್ ಲಸಿಕೆ ಪರಿಣಾಮಕಾರಿ

 ಕೊರೋನಾ: ಫಿಜ್ಜರ್, ಬಯೋಟೆಕ್ ಲಸಿಕೆ ಪರಿಣಾಮಕಾರಿ

ಪ್ಯಾರಿಸ್: ಫಿಜ್ಜರ್ ಮತ್ತು ಬಯೋಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಸಿಕೆಯು ಕೋವಿಡ್-೧೯ ಸೋಂಕುಗಳನ್ನು ತಡೆಗಟ್ಟುವಲ್ಲಿ ಶೇಕಡಾ ೯೦ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪೆನಿಗಳು 2020 ನವೆಂಬರ್ 09ರ ಸೋಮವಾರ ಪ್ರಕಟಿಸಿದವು.

ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಎರಡು ಡೋಸ್‌ಗಳಲ್ಲಿ ಎರಡನೆಯ ಡೋಸ್ ಕೊಟ್ಟ ಬಳಿಕ ಏಳು ದಿನಗಳಲ್ಲಿ ಮತ್ತು ಮೊದಲನೆಯ ಡೋಸ್ ಕೊಟ್ಟ ೨೮ ದಿನಗಳ ನಂತರ ರೋಗಿಗಳ ರಕ್ಷಣೆಯನ್ನು ಮಾಡಲು ಸಾಧ್ಯವಾಯಿತು.

"ನಮ್ಮ ಕೋವಿಡ್ -೧೯ ಲಸಿಕೆಯ ಹಂತ ೩ರ ಪ್ರಯೋಗದ ಮೊದಲ ಫಲಿತಾಂಶವು ಕೋವಿಡ್ -೧೯ನ್ನು  ತಡೆಗಟ್ಟುವ ನಮ್ಮ ಲಸಿಕೆಯ ಸಾಮರ್ಥ್ಯದ ಆರಂಭಿಕ ಸಾಕ್ಷ್ಯವನ್ನು ಒದಗಿಸಿದೆ ಎಂದು ಫಿಜರ್ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿಕೆಯಲ್ಲಿ ತಿಳಿಸಿದರು.

No comments:

Advertisement