My Blog List

Saturday, November 7, 2020

ಬಿಹಾರ: ಅಂತಿಮ ಹಂತ, ಶೇಕಡಾ ೫೫.೨೨ ಮತದಾನ

 ಬಿಹಾರ: ಅಂತಿಮ ಹಂತ, ಶೇಕಡಾ ೫೫.೨೨ ಮತದಾನ

ನವದೆಹಲಿ: ಸಣ್ಣ ಪುಟ್ಟ ಅಹಿತಕರ ಘಟನೆಗಳ ಮಧ್ಯೆ 2020ರ ನವೆಂಬರ್ 07ರ ಶನಿವಾರ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದಲ್ಲಿ ಸಂಜೆ ಗಂಟೆಯವರೆಗೆ ಶೇಕಡಾ ೫೫.೨೨ರಷ್ಟು ಮತದಾನವಾಗಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿತು.

ಏತನ್ಮಧ್ಯೆ, ಮಧುಬಾನಿಯ ಬೆನಿಪಟ್ಟಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನೀರಜ್ ಕುಮಾರ್ ಝಾ ಅವರು ಶನಿವಾರ ಕೋವಿಡ್ -೧೯ ರೋಗಕ್ಕೆ ಬಲಿಯಾಗಿ ಅಸು ನೀಗಿದರು. ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದ ಅವರನ್ನು ಹತ್ತು ದಿನಗಳ ಹಿಂದೆ ಪಾಟ್ನಾದ ಏಮ್ಸ್ಗೆ ದಾಖಲಿಸಲಾಗಿತ್ತು.

ಬಿಹಾರದ ಅಭಿವೃದ್ಧಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜನರಿಗೆ ಮನವಿ ಮಾಡಿದಂತೆ ರಾಜ್ಯದಲ್ಲಿ ಮಧ್ಯಾಹ್ನ ಗಂಟೆಯವೇಳೆಗೆ ಶೇಕಡಾ ೩೪.೮೨ರಷ್ಟು ಮತದಾನವಾಗಿತ್ತು. "ಬಿಹಾರ ವಿಧಾನಸಭಾ ಚುನಾವಣೆಗೆ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಬಿಹಾರದ ಅಭಿವೃದ್ಧಿಗೆ ಮತ ಚಲಾಯಿಸುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ. ಜನರು ಕೋವಿಡ್ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಜಾಪ್ರಭುತ್ವದ ಭವ್ಯ ಉತ್ಸವದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಡ್ಡಾ ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದರು.

ಬಿಎಸ್ ಎಫ್ ಜೊತೆ ಘರ್ಷಣೆ: ಸ್ಥಳೀಯರು ಕಾಸ್ಬಾದಲ್ಲಿ ಬಿಎಸ್ಎಫ್ ಯೋಧರೊಂದಿಗೆ ಘರ್ಷಣೆ ನಡೆಸಿದ ಘಟನೆ ಘಟಿಸಿತು. ಪೂರ್ಣಿಯಾದ ಕಸ್ಬಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಯನ್ನು ಥಳಿಸಿದ ಬಿಎಸ್ಎಫ್ ಯೋಧರ ವಿರುದ್ಧ ಜನರು ಕೋಪಗೊಂಡು ಆಕ್ರೋಶ ವ್ಯಕ್ತ ಪಡಿಸಲು ಆರಂಭಿಸಿದರು.

ಇದು ಮತದಾನದಲ್ಲಿ ಎರಡು ಗಂಟೆಗಳ ವಿಳಂಬಕ್ಕೆ ಕಾರಣವಾಯಿತು. ನಂತರ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು ಸ್ಥಳಕ್ಕೆ ತಲುಪಿ ಪ್ರದೇಶದಲ್ಲಿ ಮತದಾನವನ್ನು ಪುನಾರಂಭಕ್ಕೆ ಅವಕಾಶ ಮಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು.

ಪೂರ್ಣಿಯಾದ ಧಮದಾದಲ್ಲಿ, ದುಷ್ಕರ್ಮಿಗಳನ್ನು ನಿಯಂತ್ರಿಸುವ ಸಲುವಾಗಿ ಮತಗಟ್ಟೆ ಸಂಖ್ಯೆ ೨೮೨ ಬಳಿ ಪೊಲೀಸರು ಗುಂಡು ಹಾರಿಸಿದ ಘಟನೆ ಘಟಿಸಿದೆ. ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ಪ್ರದೇಶದಲ್ಲಿ ಭದ್ರತೆಯನ್ನು ಕಾಪಾಡುವ ಸಲುವಾಗಿ ನಡೆದ ಗುಂಡು ಹಾರಿಸಿದ್ದನ್ನು ಖಚಿತ ಪಡಿಸಿದರು.

ತಾತ್ಕಾಲಿಕ ಸೇತುವೆ: ಮತದಾರರು ಮತದಾನ ಕೇಂದ್ರವನ್ನು ತಲುಪಲು ಸಾಧ್ಯವಾಗುವಂತೆ ಮಾಡಲು ಸ್ಥಳೀಯರು ಮುಜಾಫರಪುರದಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದರು.

"ನೀರಿನ ಹರಿವನ್ನು ದಾಟಲು ಯಾವುದೇ ಸೇತುವೆ ಇರಲಿಲ್ಲ. ಜನರ ಸುಲಭ ಚಲನೆಗಾಗಿ ನಾವು ಸೇತುವೆಯನ್ನು ನಿರ್ಮಿಸಿದ್ದೇವೆ. ಗರಿಷ್ಠ ಜನರು ಮತ ಚಲಾಯಿಸಬೇಕೆಂದು ನಾವು ಬಯಸಿದ್ದೇವೆ ಎಂದು ಸ್ಥಳೀಯರು ಹೇಳಿದರು.

ಶನಿವಾರ ನಡೆದ ಮೂರನೇ ಮತ್ತು ಅಂತಿಮ ಹಂತದ ರಾಜ್ಯ ಚುನಾವಣೆಯಲ್ಲಿ ಬಿಹಾರದ ೭೮ ವಿಧಾನಸಭಾ ಕ್ಷೇತ್ರಗಳಲ್ಲಿ .೩೫ ಕೋಟಿ ಮತದಾರರು ,೨೦೪ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಅರ್ಹರಾಗಿದ್ದಾರೆ. ಎಲ್ಲಾ ೩೩,೭೮೨ ಮತಗಟ್ಟೆಗಳಲ್ಲಿ ಬೆಳಿಗ್ಗೆ ಗಂಟೆಗೆ ಮತ ಚಲಾವಣೆ ಪ್ರಾರಂಭವಾಯಿತು, ಮತದಾನಕ್ಕಾಗಿ ಅಲ್ಲಿ ಅನೇಕ ಇವಿಎಂ ಸೆಟ್ಗಳು ಮತ್ತು ವಿವಿಪಿಎಟಿ ಯಂತ್ರಗಳನ್ನು ಅಳವಡಿಸಲಾಗಿತ್ತು. ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆಗಾಗಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿತ್ತು.

ಪಶ್ಚಿಮ ಚಂಪಾರನ್ ಜಿಲ್ಲೆಯ ವಾಲ್ಮೀಕಿ ನಗರ ಲೋಕಸಭಾ ಸ್ಥಾನಕ್ಕೆ ಏಕಕಾಲದಲ್ಲಿ ಮತದಾನ ನಡೆಯಿತು. ಅಲ್ಲಿ ಹಾಲಿ ಜೆಡಿಯು ಸಂಸದ ಬೈದ್ಯನಾಥ್ ಮಹತೋ ಅವರ ನಿಧನದಿಂದ ಉಪಚುನಾವಣೆ ಅಗತ್ಯವಾಗಿತ್ತು.

ಮೊದಲ ಹಂತದ ಮತದಾನ ಅಕ್ಟೋಬರ್ ೨೮ ರಂದು ಮತ್ತು ಎರಡನೇ ಹಂತಕ್ಕೆ ನವೆಂಬರ್ ರಂದು ನಡೆಯಿತು. ನವೆಂಬರ್ ೧೦ ರಂದು ಫಲಿತಾಂಶಗಳು ಹೊರಬರಲಿವೆ.

No comments:

Advertisement