My Blog List

Thursday, November 5, 2020

ಸೌದಿ ಪಿಐಎಫ್ ನಿಂದ ರಿಲಯನ್ಸ್ ರಿಟೇಲ್ಸ್ ನಲ್ಲಿ ೯,೫೫೫ ಕೋಟಿ ರೂ ಹೂಡಿಕೆ

 ಸೌದಿ ಪಿಐಎಫ್ ನಿಂದ ರಿಲಯನ್ಸ್ ರಿಟೇಲ್ಸ್ ನಲ್ಲಿ ,೫೫೫ ಕೋಟಿ ರೂ ಹೂಡಿಕೆ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಗುರುವಾರ ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತು ನಿಧಿ, ಸಾರ್ವಜನಿಕ ಹೂಡಿಕೆ ನಿಧಿ (ಪಿಐಎಫ್) ರಿಲಯನ್ಸ್ ರಿಟೇಲ್ಸ್ ಶೇಕಡಾ .೦೪ ಪಾಲನ್ನು (ಷೇರು) ಖರೀದಿಸಲು ,೫೫೫ ಕೋಟಿ ರೂ. ಅಥವಾ . ಬಿಲಿಯನ್ ಹೂಡಿಕೆ ಮಾಡುವುದಾಗಿ 2020 ನವೆಂಬರ್ 05ರ ಗುರುವಾರ ಪ್ರಕಟಿಸಿತು.

ಹೂಡಿಕೆಯು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಹೂಡಿಕೆ ಮೌಲ್ಯವನ್ನು .೫೮೭ ಲಕ್ಷ ಕೋಟಿ ರೂ.ಗಳಿಗೆ ಏರಿಸುತ್ತದೆ.

ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿಯು ಆರ್‌ಆರ್‌ವಿಎಲ್‌ನಲ್ಲಿನ ಹಿಂದಿನ ಆರ್‌ಐಎಲ್‌ನ ಡಿಜಿಟಲ್ ಸೇವೆಗಳ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇಕಾ .೩೨ ಪಾಲನ್ನು ಈಗಾಗಲೇ ಖರೀದಿಸಿದೆ. . ಇದು ಭಾರತದ ಕ್ರಿಯಾತ್ಮಕ ಆರ್ಥಿಕತೆಯಲ್ಲಿ ಪಿಐಎಫ್ ಇರುವಿಕೆಯನ್ನು ಮತ್ತಷ್ಟು ಬಲಪಡಿಸಿದೆ ಮತ್ತು ಚಿಲ್ಲರೆ ಮಾರುಕಟ್ಟೆ ವಿಭಾಗದ ಭರವಸೆಯನ್ನು ನೀಡುತ್ತದೆ. ಆರ್‌ಐಎಲ್ ಇದುವರೆಗೆ ಆರ್‌ಆರ್‌ವಿಎಲ್‌ನಲ್ಲಿ ಶೇಕಡಾ ೧೦.೦೯ ರಷ್ಟು ಒಟ್ಟು ೪೭,೨೬೫ ಕೋಟಿ ರೂ.ಗೆ ಮಾರಾಟ ಮಾಡಿದೆ.

ಸಿಂಗಾಪುರದ ಸಾರ್ವಭೌಮ ಸಂಪತ್ತು ನಿಧಿ ಜಿಐಸಿ, ಜಾಗತಿಕ ಪರ್ಯಾಯ ಆಸ್ತಿ ಸಂಸ್ಥೆ ಟಿಪಿಜಿ ಅಬುಧಾಬಿ ಹೂಡಿಕೆ ಪ್ರಾಧಿಕಾರ, ಮುಬಡಾಲಾ ಇನ್ವೆಸ್ಟ್‌ಮೆಂಟ್ ಕೋ, ಜನರಲ್ ಅಟ್ಲಾಂಟಿಕ್, ಕೆಕೆಆರ್ ಮತ್ತು ಸಿಲ್ವರ್ ಲೇಕ್ (ಎರಡು ಬಾರಿ) ಇವು ಕಂಪೆನಿಯಲ್ಲಿ ಷೇರುಗಳನ್ನು ಖರೀದಿಸಿವೆ.

"ನಾನು ಪಿಐಎಫ್ ಅನ್ನು ರಿಲಯನ್ಸ್ ರಿಟೇಲ್ಸ್ ವ್ಯಾಪಾರದಲ್ಲಿ ಮೌಲ್ಯಯುತ ಪಾಲುದಾರನಾಗಿ ಸ್ವಾಗತಿಸುತ್ತೇನೆ ಮತ್ತು . ಬಿಲಿಯನ್ ಭಾರತೀಯರು ಮತ್ತು ಲಕ್ಷಾಂತರ ಸಣ್ಣ ವ್ಯಾಪಾರಿಗಳ ಜೀವನವನ್ನು ಶ್ರೀಮಂತಗೊಳಿಸಲು ಭಾರತದ ಚಿಲ್ಲರೆ ಕ್ಷೇತ್ರವನ್ನು ಪರಿವರ್ತಿಸುವ ನಮ್ಮ ಮಹತ್ವಾಕಾಂಕ್ಷೆಯ ಪಯಣವನ್ನು ನಾವು ಮುಂದುವರಿಸುತ್ತಿರುವಾಗ ಅವರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದರು.

ಆರ್‌ಆರ್‌ವಿಎಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ಲಿಮಿಟೆಡ್ ಭಾರತದ ಅತಿದೊಡ್ಡ, ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಲಾಭದಾಯಕ ಚಿಲ್ಲರೆ ವ್ಯಾಪಾರವನ್ನು ದೇಶಾದ್ಯಂತ ತನ್ನ ೧೨,೦೦೦ ಮಳಿಗೆಗಳಲ್ಲಿ ೬೪೦ ಮಿಲಿಯನ್ ಫುಟ್‌ಫಾಲ್‌ಗಳಿಗೆ ಒದಗಿಸುತ್ತಿದೆ.

೧೯೭೧ ರಲ್ಲಿ ಸ್ಥಾಪನೆಯಾದ ಪಿಐಎಫ್ ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತು ನಿಧಿಯಾಗಿದೆ. ಇದು ಕ್ಷೇತ್ರಗಳು, ಭೌಗೋಳಿಕತೆಗಳು ಮತ್ತು ಆಸ್ತಿ ವರ್ಗಗಳಲ್ಲಿ ವೈವಿಧ್ಯಮಯವಾದ ಉತ್ತಮ ಗುಣಮಟ್ಟದ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆಗಳ ಬಂಡವಾಳವನ್ನು ಅಭಿವೃದ್ಧಿಪಡಿಸುತ್ತಿದೆ.

No comments:

Advertisement