ಗ್ರಾಹಕರ ಸುಖ-ದುಃಖ

My Blog List

Thursday, November 19, 2020

ಕುನಾಲ್ ಕಮ್ರಾ ಟ್ವೀಟ್: ಟ್ವಿಟ್ಟರಿಗೆ ಸಂಸದೀಯ ಸಮಿತಿ ನೋಟಿಸ್

 ಕುನಾಲ್ ಕಮ್ರಾ ಟ್ವೀಟ್: ಟ್ವಿಟ್ಟರಿಗೆ   ಸಂಸದೀಯ ಸಮಿತಿ  ನೋಟಿಸ್

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಹಾಸ್ಯನಟ ಕುನಾಲ್ ಕಮ್ರಾ ಅವರು ಪ್ರಕಟಿಸಿದ ಟ್ವೀಟ್ಗಳ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಡೇಟಾ ಸಂರಕ್ಷಣೆಗೆ ಸಂಬಂಧಿಸಿದ  ಸಂಸತ್ತಿನ ಜಂಟಿ ಸಮಿತಿಯು 2020 ನವೆಂಬರ್ 19ರ  ಗುರುವಾರ ಟ್ವಿಟ್ಟರ್ ಮೈಕ್ರೋ ಬ್ಲಾಗಿಂಗ್ ಸಂಸ್ಥೆಯನ್ನು ಪ್ರಶ್ನಿಸಿತು.

ಟ್ವಿಟ್ಟರಿನ ನೀತಿ ಮುಖ್ಯಸ್ಥರನ್ನು ಬಿಜೆಪಿ ಸಂಸದ ಮೀನಾಕ್ಷಿ ಲೇಖಿ ಮತ್ತು ಕಾಂಗ್ರೆಸ್ ಸಂಸದ ವಿವೇಕ್ ತಂಖ ವಿಚಾರಣೆ ನಡೆಸಿ, ಕುನಾಲ್ ಕಮ್ರಾ ಟ್ವೀಟ್ಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಟ್ವಿಟ್ಟರನ್ನು ಕೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯ ವರದಿಯೊಂದು ತಿಳಿಸಿದೆ..

ಇದಕ್ಕೆ ಪ್ರತಿಕ್ರಿಯಿಸಿದ ಕಮ್ರಾ, "ವೈಯಕ್ತಿಕ ಸ್ವಾತಂತ್ರ್ಯವು ಕಾರ್ಪೊರೇಟ್ ಭಾರತದಲ್ಲಿ ಪ್ರಚಾರಗಳಂತಿದೆ ..." ಎಂದು ಹೇಳಿದ್ದಾರೆ.

ಏತನ್ಮಧ್ಯೆ, ನ್ಯಾಯಾಲಯವು ಅಂತಹ ಆದೇಶಗಳನ್ನು ನೀಡದ ಹೊರತು ಪೋಸ್ಟ್ನ್ನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂಬುದಾಗಿ ಟ್ವಿಟ್ಟರ್ ಹೇಳಿದೆ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.

ನಾವು ದಿನಗಳಲ್ಲಿ ಉತ್ತರ ನೀಡುವಂತೆ ಕೇಳಿದ್ದೇವೆ. ಇವುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಯಾವುದೇ ಕಾನೂನುಗಳಿಲ್ಲದ ಕಾರಣ, ನಾವು ಅಂತಹ ಸೇವಾ ಪೂರೈಕೆದಾರರ ಉನ್ನತ ಅಧಿಕಾರಿಗಳೊಂದಿಗೆ ನಾವು ಮಾತನಾಡಬೇಕಾಗಿದೆಎಂದು ಮೀನಾಕ್ಷಿ ಲೇಖಿ ಹೇಳಿದರು.

ನವೆಂಬರ್ ೧೨ ರಂದು, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ತಮ್ಮ ಟ್ವೀಟ್ಗಳಿಗಾಗಿ ಸ್ಟ್ಯಾಂಡ್-ಅಪ್ ಕಾಮಿಕ್ ಕಲಾವಿದ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಲಯ ನಿಂದನೆ ಖಟ್ಲೆ ಹೂಡಲು ಒಪ್ಪಿಗೆ ನೀಡಿದ್ದರು. ‘ನಾನು ಕೆಳಗೆ ತೋರಿಸಿರುವ  ಟ್ವೀಟ್ಗಳು ಕೆಟ್ಟ ಅಭಿರುಚಿಯಲ್ಲಿರುವುದು  ಮಾತ್ರವಲ್ಲದೆ ಹಾಸ್ಯ ಮತ್ತು ನ್ಯಾಯಾಲಯ ನಿಂದನೆಯ ನಡುವಿನ ಗಡಿಯನ್ನು ಸ್ಪಷ್ಟವಾಗಿ ದಾಟುತ್ತವೆಎಂದು ವೇಣುಗೋಪಾಲ್ ಹೇಳಿದ್ದರು.

ಒಂದು ದಿನದ ನಂತರ, ನವೆಂಬರ್ ೧೩ ರಂದು, ಶುಕ್ರವಾರ, ಕಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ ೧೧ ರಂದು ನಡೆಸುತ್ತಿದ್ದಾಗ, ಕಮ್ರಾ ಟ್ವೀಟ್ ಪ್ರಕಟಿಸಲು ಪ್ರಾರಂಭಿಸಿದ್ದರು ಎಂದು ಕಾನೂನು ವಿದ್ಯಾರ್ಥಿ ಶ್ರೀರಂಗ್ ಕಾಟ್ನೇಶ್ವರ್ಕರ್ ಸೇರಿದಂತೆ ಐವರು ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ. ೨೦೧೮ರ ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಬಂಧಿತರಾದ ಅರ್ನಬ್ ಗೋಸ್ವಾಮಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದ ಬಳಿಕ ಕಮ್ರಾ ಅವರು ತಮ್ಮ ಟ್ವೀಟ್ಗಳನ್ನು ಹಿಂತೆಗೆದುಕೊಳ್ಳಲು ಮತ್ತು ಕ್ಷಮೆಯಾಚಿಸಲು ನಿರಾಕರಿಸಿದ್ದರು.

ನಾನು ಇತ್ತೀಚೆಗೆ ಪ್ರಕಟಿಸಿದ ಟ್ವೀಟ್ಗಳು ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಕಾರಣವಾಗಿವೆ. ಒಂದು ಪ್ರೈಮ್ ಟೈಮ್ ಧ್ವನಿವರ್ಧಕದ ಪರವಾಗಿ ಭಾರತದ ಸುಪ್ರಿಂಕೋರ್ಟ್ ಭಾಗಶಃ ನಿರ್ಧಾರ ನೀಡುತ್ತಿದೆ ಎಂಬ ನನ್ನ ದೃಷ್ಟಿಕೋನದಿಂದ ನಾನು ಟ್ವೀಟ್ಗಳನ್ನು ಪ್ರಕಟಿಸಿದ್ದೇನೆಕಮ್ರಾ ಬರೆದಿದ್ದಾರೆ. ಹೇಳಿಕೆಯನ್ನು ಅವರು ವೇಣುಗೋಪಾಲ್ ಮತ್ತು ನ್ಯಾಯಾಧೀಶರನ್ನು ಉದ್ದೇಶಿಸಿ ತಮ್ಮ ಟ್ವಿಟ್ಟರ್ ಪುಟದಲ್ಲಿ ಬರೆದಿದ್ದಾರೆ.

ನನ್ನ ದೃಷ್ಟಿಕೋನ ಬದಲಾಗಿಲ್ಲ ಏಕೆಂದರೆ ಇತರರ ವೈಯಕ್ತಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ಭಾರತದ ಸುಪ್ರೀಂ ಕೋರ್ಟ್ ಮೌನವು ವಿಮರ್ಶೆಗೆ ಒಳಗಾಗದಿರಲು ಸಾಧ್ಯವಿಲ್ಲ. ನನ್ನ ಟ್ವೀಟ್ಗಳನ್ನು ಹಿಂತೆಗೆದುಕೊಳ್ಳುವ ಅಥವಾ ಅದಕ್ಕಾಗಿ ಕ್ಷಮೆ ಯಾಚಿಸುವ ಉದ್ದೇಶವಿಲ್ಲ, ಅವು ಸ್ವತಃ ಮಾತನಾಡುತ್ತವೆ ಎಂದು ನಾನು ನಂಬಿದ್ದೇನೆಎಮದು ಕಮ್ರಾ ಬರೆದಿದ್ದರು.

No comments:

Advertisement