My Blog List

Monday, December 28, 2020

ನ್ಯಾಯಾಧೀಶರನ್ನು ಕೊಡಿಸಿ: ಸುಪ್ರೀಂಗೆ ಅರ್ಜಿ

 ನ್ಯಾಯಾಧೀಶರನ್ನು ಕೊಡಿಸಿ: ಸುಪ್ರೀಂಗೆ ಅರ್ಜಿ

ನವದೆಹಲಿ: ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ನಿರ್ದೇಶನ ನೀಡುಬೇಕು ಎಂದು ಕೋರಿ 2020 ಡಿಸೆಂಬರ್  28ರ ಸೋಮವಾರ ಸುಪ್ರೀಂ ಕೋರ್ಟಿಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ಮೂರು ವರ್ಷದೊಳಗಾಗಿ ಒಂದು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಚಾರ್ಟರ್ ಅನುಷ್ಠಾನಗೊಳಿಸಬೇಕು ಎಂದೂ ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗಿನ ವರದಿಯಂತೆ ೨೫ ಹೈಕೋರ್ಟುಗಳಲ್ಲಿ ,೦೭೯ ನ್ಯಾಯಮೂರ್ತಿಗಳ ಹುದ್ದೆಯು ಮಂಜೂರಾಗಿದ್ದು, ಪೈಕಿ ೪೧೪ ಹುದ್ದೆಗಳು ಖಾಲಿ ಇವೆ.

ದೇಶದಲ್ಲಿ ವಿಚಾರಣಾ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟಿನವರೆಗೆ ಅಂದಾಜು ಕೋಟಿ ಪ್ರಕರಣಗಳು ಬಾಕಿ ಇವೆ. ವಿಳಂಬವು, ಜನರ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ. ಶೀಘ್ರದಲ್ಲೇ ನ್ಯಾಯ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಇದು ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ. ಇದರ ಪ್ರಾಮುಖ್ಯತೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ. ಅಗತ್ಯ ಮೂಲಸೌಕರ್ಯವನ್ನು ಇವರು ನೀಡದೇ ಇರುವ ಕಾರಣ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳುತ್ತಿಲ್ಲ. ಪ್ರತಿ ೧೦ ಲಕ್ಷ ಜನರಿಗೆ ನ್ಯಾಯಾಧೀಶರ ಸಂಖ್ಯೆ ೨೦ಕ್ಕಿಂತ ಕಡಿಮೆ ಇದೆ. ೨೦೧೮ರಲ್ಲಿ ಪ್ರಮಾಣ ೧೯.೭೮, ೨೦೧೪ರಲ್ಲಿ ೧೭.೪೮ ಹಾಗೂ ೨೦೦೨ರಲ್ಲಿ ೧೪. ಇತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಚಳಿಗಾಲದ ರಜೆ ಬಳಿಕ ಅರ್ಜಿಯು ವಿಚಾರಣೆಗೆ ಬರುವ ಸಾಧ್ಯತೆ ಇದೆ.

No comments:

Advertisement