ಗ್ರಾಹಕರ ಸುಖ-ದುಃಖ

My Blog List

Tuesday, December 8, 2020

ಯುಎಇ, ಸೌದಿ ಅರೇಬಿಯಾಕ್ಕೆ ಜನರಲ್ ನರವಣೆ ಪ್ರವಾಸ

 ಯುಎಇ, ಸೌದಿ ಅರೇಬಿಯಾಕ್ಕೆ ಜನರಲ್ ನರವಣೆ ಪ್ರವಾಸ

ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು 2020 ಡಿಸೆಂಬರ್ 08ರ ಮಂಗಳವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಸೌದಿ ಅರೇಬಿಯಾಗಳಿಗೆ ಒಂದು ವಾರದ ಪ್ರವಾಸ ಕೈಗೊಂಡಿದ್ದಾರೆ, ಇದು ಪಶ್ಚಿಮ ಏಷ್ಯಾದ ಎರಡೂ ರಾಜ್ಯಗಳಿಗೆ ಸೇನಾ ಮುಖ್ಯಸ್ಥರ ಮೊದಲ ಪ್ರವಾಸವಾಗಿದ್ದು, ಭದ್ರತಾ ಸಂಬಂಧಗಳನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಅಕ್ಟೋಬರಿನಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲಾ ಅವರೊಂದಿಗೆ ಮ್ಯಾನ್ಮಾರ್ಗೆ ಮತ್ತು ನವೆಂಬರಿನಲ್ಲಿ ನೇಪಾಳಕ್ಕೆ ಭೇಟಿ ನೀಡಿದ ನಂತರ, ರಾಜತಾಂತ್ರಿಕ ಮಾತುಕತೆಗಳೊಂದಿಗೆ ವರ್ಷ ನರವಣೆ ಅವರು ನಡೆಸುತ್ತಿರುವ ಮೂರನೇ ವಿದೇಶ ಪ್ರವಾಸ ಇದಾಗಿದೆ.

" ಭೇಟಿ ಐತಿಹಾಸಿಕವಾಗಿದ್ದು, ಭಾರತೀಯ ಸೇನಾ ಮುಖ್ಯಸ್ಥರು ಯುಎಇ ಮತ್ತು ಸೌದಿ ಅರೇಬಿಯಾ ಸಾಮ್ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿತು.

ಡಿಸೆಂಬರ್ ೧೪ ರಂದು ಕೊನೆಗೊಳ್ಳುವ ಪ್ರವಾಸದಲ್ಲಿ ನರವಣೆ ಅವರು ಯುಎಇ ಮತ್ತು ಸೌದಿ ಅರೇಬಿಯಾದ ತಮ್ಮ ಸಹವರ್ತಿಗಳನ್ನು ಮತ್ತು ಉಭಯ ದೇಶಗಳ ಹಿರಿಯ ಸೇನಾ ನಾಯಕತ್ವವನ್ನು ಭೇಟಿ ಮಾಡಲಿದ್ದಾರೆ. ಸೇನಾ ಮುಖ್ಯಸ್ಥರು ಡಿಸೆಂಬರ್ -೧೦ರ ಅವಧಿಯಲ್ಲಿ ಯುಎಇಯಲ್ಲಿ ಇರುತ್ತಾರೆ ಮತ್ತು ಹಿರಿಯ ಸೇನಾ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಭೇಟಿಯು ಭಾರತ-ಯುಎಇ ರಕ್ಷಣಾ ಸಂಬಂಧವನ್ನು ಹೆಚ್ಚಿಸಲಿದೆ ಎಂದು ಎಂದು ಹೇಳಿಕೆ ತಿಳಿಸಿತು.

ಭದ್ರತಾ ಸಂಸ್ಥೆಗಳ ಹಿರಿಯ ಕಾರ್ಯಕರ್ತರೊಂದಿಗೆ ಅನೇಕ ಸಭೆಗಳ ಮೂಲಕ ಉಭಯ ದೇಶಗಳ ನಡುವಿನಅತ್ಯುತ್ತಮ ರಕ್ಷಣಾ ಸಹಕಾರ ವನ್ನು ಮುಂದಕ್ಕೆ ಒಯ್ಯಲು ಅವರು ಡಿಸೆಂಬರ್ ೧೩-೧೪ರ ಅವಧಿಯಲ್ಲಿ ಪ್ರವಾಸದ ಎರಡನೇ ಹಂತಕ್ಕಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ವಿವಿಧ ರಕ್ಷಣಾ ಸಂಬಂಧಿತ ವಿಷಯಗಳ ಬಗ್ಗೆ ನರವಣೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ಸೇನಾ ಮುಖ್ಯಸ್ಥರು ರಾಯಲ್ ಸೌದಿ ಲ್ಯಾಂಡ್ ಫೋರ್ಸ್, ಜಂಟಿ ಫೋರ್ಸ್ ಕಮಾಂಡ್ ಕೇಂದ್ರ ಕಚೇರಿ ಮತ್ತು ಕಿಂಗ್ ಅಬ್ದುಲ್ಲಾಜೀಜ್ ವಾರ್ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿರುವ ಅವರು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರವಾಸವನ್ನು ಭಾನುವಾರ ಆರಂಭಿಸಲು ಇದಕ್ಕೆ ಮುನ್ನ ನಿರ್ಧರಿಸಲಾಗಿತ್ತು. ಆದರೆ ಬಳಿಕ ಪ್ರಯಾಣದ ದಿನಾಂಕಗಳನ್ನು ಮರು ಹೊಂದಾಣಿಕೆ ಮಾಡಲಾಯಿತು. ತತ್ ಕ್ಷಣಕ್ಕೆ ಬದಲಾವಣೆಗೆ ಕಾರಣವೇನು ಎಂಬುದು ಸ್ಪಷ್ಟವಾವಿಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾದ ರಾಜ್ಯಗಳಲ್ಲಿ ಶುಕ್ರವಾರ ಮತ್ತು ಶನಿವಾರ ರಜಾದಿನವಾಗಿರುವುದರಿಂದ ಭೇಟಿಗಳ ಮಧ್ಯೆ ಎರಡು ದಿನಗಳ ಅಂತರವನ್ನು ಇಡಲಾಗಿದೆ.

ಪಶ್ಚಿಮ ಏಷ್ಯಾವನ್ನು ತಲುಪುವ ಭಾರತ ಸರ್ಕಾರದ ಉಪಕ್ರಮದ ಅಡಿಯಲ್ಲಿ ಭೇಟಿಗಳನ್ನು ಯೋಜಿಸಲಾಗಿದೆ. ರಾಷ್ಟ್ರಗಳನ್ನು ಭಾರತವು ತನ್ನ ವಿಸ್ತೃತ ನೆರೆಹೊರೆಯ ಭಾಗವಾಗಿ ನೋಡಿದೆ ಮತ್ತು ನವೆಂಬರ್ ೨೪-೨೬ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರ ಬಹ್ರೇನ್ ಮತ್ತು ಯುಎಇ ಭೇಟಿಯ ಬೆನ್ನಲ್ಲೇ ವ್ಯವಸ್ಥೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ನಿಗ್ರಹ ಕ್ರಮಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವು ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ವಿಶೇಷವಾಗಿ ಭಯೋತ್ಪಾದನೆ ನಿಗ್ರಹದಲ್ಲಿ ನಾಟಕೀಯವಾಗಿ ವಿಸ್ತರಿಸಿದೆ.

ಅಕ್ಟೋಬರಿನಲ್ಲಿ ಮ್ಯಾನ್ಮಾರ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ನರವಣೆ ಮತ್ತು ಶ್ರೀಂಗ್ಲಾ ಅವರು ಆಂಗ್ ಸಾನ್ ಸೂಕಿ ಮತ್ತು ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್ ಸೇರಿದಂತೆ ಹಿರಿಯ ನಾಯಕತ್ವದೊಂದಿಗೆ ಭದ್ರತೆ ಮತ್ತು ಅಭಿವೃದ್ಧಿ ಸಹಕಾರ ಕುರಿತು ಮಾತುಕತೆ ನಡೆಸಿದ್ದರು.

ನರವಣೆ ಅವರ ನೇಪಾಳ ಭೇಟಿಯು ಶ್ರಿಂಗ್ಲಾ ಅವರ ನಂತರದ ಪ್ರವಾಸಕ್ಕೆ ಆಧಾರವನ್ನು ಸಿದ್ಧಪಡಿಸಿತು. ಉಭಯ ಪ್ರದೇಶಗಳು ಭಾರತೀಯ ಪ್ರದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ಕಠ್ಮಂಡು ಹೊರಡಿಸಿದ ಹೊಸ ರಾಜಕೀಯ ನಕ್ಷೆಯ ಹಿನ್ನೆಲೆಯಲ್ಲಿ ಉದ್ಭವಿಸಿದ ಬಿಕ್ಕಟ್ಟನ್ನು ನಿವಾರಿಸಿ, ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ಸಹಾಯ ಮಾಡಿದೆ.

ಇಸ್ರೇಲ್ ಜೊತೆಗಿನ ಸಂಬಂಧವನ್ನು ಯುಎಇ, ಬಹ್ರೇನ್ ಮತ್ತು ಸುಡಾನ್ ಸಾಮಾನ್ಯಗೊಳಿಸಿದ ನಂತರ ಪಶ್ಚಿಮ ಏಷ್ಯಾದಲ್ಲಿ ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇತ್ತೀಚಿನ ಭೇಟಿ ಬಂದಿದೆ. ಸೌದಿ  ಅರೇಬಿಯಾ ಮತ್ತು ಯುಎಇ ಪಶ್ಚಿಮ ಏಷ್ಯಾದ ೯೦ ಲಕ್ಷ (ಒಂಬತ್ತು ಮಿಲಿಯನ್) ಭಾರತೀಯ ವಲಸಿಗರಲ್ಲಿ ಬಹುಪಾಲು ಭಾರತೀಯರಿಗೆ ನೆಲೆಯಾಗಿದೆ, ಅವರ ವಾರ್ಷಿಕ ಹಣ ಪಾವತಿ ಸುಮಾರು ೪೮೦೦ ಕೋಟಿ (೪೮ ಬಿಲಿಯನ್) ಡಾಲರುಗಳಾಗಿವೆ.

ಸೌದಿ ಅರೇಬಿಯಾ ಮತ್ತು ಯುಎಇ ಜೊತೆ ಪಾಕಿಸ್ತಾನದ ಸಂಬಂಧಗಳು ಹಳಸಿರುವ ಸಮಯದಲ್ಲಿ ಭೇಟಿ ಬರುತ್ತಿದೆ. ಕಾಶ್ಮೀರ ವಿಷಯದ ಬಗ್ಗೆ ರಿಯಾದ್ ನಿಲುವನ್ನು ಇಸ್ಲಾಮಾಬಾದ್ ಟೀಕಿಸಿದ್ದರಿಂದ ಕೋಪಗೊಂಡ ಸೌದಿ ಅರೇಬಿಯಾ ಇತ್ತೀಚೆಗೆ ೨೦೧೮ ರಲ್ಲಿ ಇಮ್ರಾನ್ ಖಾನ್ ಸರ್ಕಾರಕ್ಕೆ ನೀಡಿದ್ದ ೩೦೦ ಕೋಟಿ ( ಬಿಲಿಯನ್) ಡಾಲರ್ ಸಾಲವನ್ನು ಶೀಘ್ರವಾಗಿ ಮರುಪಾವತಿ ಮಾಡುವಂತೆ ಆಗ್ರಹಿಸಿತ್ತು.

No comments:

Advertisement