My Blog List

Thursday, December 17, 2020

೩ ಐಪಿಎಸ್ ಅಧಿಕಾರಿಗಳ ವಾಪಸ್: ಮಮತಾಗೆ ಮತ್ತೆ ಗೃಹ ಇಲಾಖೆ ಪತ್ರ

  ಐಪಿಎಸ್ ಅಧಿಕಾರಿಗಳ ವಾಪಸ್: ಮಮತಾಗೆ ಮತ್ತೆ ಗೃಹ ಇಲಾಖೆ ಪತ್ರ

ನವದೆಹಲಿ: ಮೂರು ವಾರಗಳಲ್ಲಿ ಎರಡನೇ ಬಾರಿಗೆ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ನಿಯೋಜನೆಗಾಗಿ ರಾಜ್ಯ ಸೇವೆಯಿಂದ ಬಿಡುಗಡೆ ಮಾಡುವಂತೆ ಸೂಚಿಸಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವನ್ನು  2020 ಡಿಸೆಂಬರ್ 17ರ ಗುರುವಾರ ಪುನಃ ಕೇಳಿದೆ.

ಐಪಿಎಸ್ ಅಧಿಕಾರಿಗಳಾದ ರಾಜೀವ್ ಮಿಶ್ರಾ, ಪ್ರವೀಣ್ ಕುಮಾರ್ ತ್ರಿಪಾಠಿ ಮತ್ತು ಭೋಲಾನಾಥ್ ಪಾಂಡೆ ಅವರು ರಾಜ್ಯ ಪ್ರವಾಸದ ವೇಳೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲಿಗೆ ಸಮರ್ಪಕ ಭದ್ರತೆ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ನಿಯೋಜನೆಗಾಗಿ ಬಿಡುಗಡೆ ಮಾಡಿ ತತ್ ಕ್ಷಣ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ಪತ್ರ ಸೂಚಿಸಿದೆ.

ಮೂವರನ್ನು ಕೇಂದ್ರ ಅರೆಸೈನಿಕ ಪಡೆಗಳಿಗೆ ಕಳುಹಿಸಲಾಗಿದೆ. ರಾಜ್ಯ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋದಲ್ಲಿ ಭೋಲನಾಥ್ ಪಾಂಡೆ ಅವರನ್ನು ಎಸ್ಪಿ ಆಗಿ, ಸಶಸ್ತ್ರ ಸೀಮಾ ಬಲದಲ್ಲಿ ಡಿಐಜಿಯಾಗಿ ಪ್ರವೀಣ್ ಕುಮಾರ್ ತ್ರಿಪಾಠಿ ಅವರನ್ನು ಮತ್ತು ಭಾರತ-ಟಿಬೆಟನ್ ಗಡಿ ಭದ್ರತಾ ಪಡೆಯ ಐಜಿ ಆಗಿ ರಾಜೀವ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮೂರೂ ಮಂದಿ ಐಪಿಎಸ್ ಅಧಿಕಾರಿಗಳನ್ನು ಹೊಸ ಹುದ್ದೆಗಳಿಗೆ ತತ್ ಕ್ಷಣ ಕಳುಹಿಸುವಂತೆಯೂ ಪತ್ರ ಸೂಚಿಸಿದೆ.

ಮೂವರು ಐಪಿಎಸ್ ಅಧಿಕಾರಿಗಳನ್ನು ತಕ್ಷಣವೇ ರಾಜ್ಯ ಸೇವೆಯಿಂದ ಮುಕ್ತಗೊಳಿಸಬೇಕು ಎಂಬುದಾಗಿ ಗೃಹ ಸಚಿವಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಗುರುವಾರ ಎರಡನೇ ಪತ್ರ ಬರೆದಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ದೃಢ ಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸುವಂತೆ ನೀಡಿರುವ ಸೂಚನೆಯನ್ನು ಪಾಲಿಸದಿದ್ದರೆ ಮತ್ತು ರಾಜ್ಯ ಸೇವೆಯಿಂದ ಬಿಡುಗಡೆ ಮಾಡದಿದ್ದರೆ, ಅದು ೧೯೫೪ ಐಪಿಎಸ್ ಕೇಡರ್ ನಿಯಮಗಳ ನಿಯಮ () ಉಲ್ಲಂಘನೆಯಾಗುತ್ತದೆ ಎಂದೂ ಪತ್ರ ತಿಳಿಸಿದೆ. ಅಧಿಕಾರಿಗಳ ನಿಯೋಜನೆ ಸಂಬಂಧ ಭಿನ್ನಾಭಿಪ್ರಾಯವಿದ್ದಾಗ ಕೇಂದ್ರ ಸರ್ಕಾರದ ನಿರ್ಧಾರವೇ ಮೇಲುಗೈ ಸಾಧಿಸುತ್ತದೆಎಂದೂ ಪತ್ರ ತಿಳಿಸಿದೆ.

ಮುಖ್ಯಮಂತ್ರಿ ಮಮತಾ ನಕಾರ: ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರದ ಪತ್ರದ ಸೂಚನೆಯನ್ನು ಅನುಸರಿಸಲು ನಿರಾಕರಿಸಿದ್ದಾರೆ. ಸರಣಿ ಟ್ವೀಟ್ಗಳಲ್ಲಿ, ರಾಜ್ಯದ ವ್ಯಾಪ್ತಿಯನ್ನು ಅತಿಕ್ರಮಿಸಲು ಮತ್ತು ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ನಿರಾಶೆಗೊಳಿಸಲು ಕೇಂದ್ರವು ಉದ್ದೇಶಪೂರ್ವಕ ಪ್ರಯತ್ನ ನಡೆಸಿದೆ ಎಂದು ಮಮತಾ ಹೇಳಿದ್ದಾರೆ.

" ಕ್ರಮ, ವಿಶೇಷವಾಗಿ ಚುನಾವಣೆಗಳಿಗೆ ಮೊದಲು ಒಕ್ಕೂಟ ವ್ಯವಸ್ಥೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಇದು ಅಸಂವಿಧಾನಿಕ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ!’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"ರಾಜ್ಯದ ಆಕ್ಷೇಪಣೆಯ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಐಪಿಎಸ್ ಅಧಿಕಾರಿಗಳಿಗೆ ಭಾರತ ಸರ್ಕಾರದ ಆದೇಶವು ಅಧಿಕಾರದ ವರ್ಣರಂಜಿತ ಕಸರತ್ತು ಮತ್ತು ಐಪಿಎಸ್ ಕೇಡರ್ ನಿಯಮ ೧೯೫೪ ತುರ್ತು ನಿಬಂಧನೆಯ ದುರ್ಬಳಕೆಯಾಗಿದೆಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಬ್ಯಾನರ್ಜಿಯವರ ನಿಲುವು ೨೦೦೧ ರಲ್ಲಿ ಆಗಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತೆಗೆದುಕೊಂಡ ಸ್ಥಿತಿಗೆ ಹೋಲುತ್ತದೆ, ಆಗ ಚೆನ್ನೈ ಪೊಲೀಸ್ ಆಯುಕ್ತರನ್ನು ಮತ್ತು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರನ್ನು ಬಂಧಿಸಿದ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಲು ರಾಜ್ಯವನ್ನು ಕೇಳಿದಾಗ ಅದನ್ನು ಅನುಸರಿಸಲು ನಿರಾಕರಿಸಿದ್ದರು. ಜಯಲಲಿತಾ ಇದನ್ನು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ ಎಂದು ಕರೆದಿದ್ದರು, ಮಮತಾ ಬ್ಯಾನರ್ಜಿ ಅವರು ಇದೀಗ ಇದೇ ಆರೋಪ ಮಾಡಿದ್ದಾರೆ.

"ಪ್ರಾಕ್ಸಿ ಮೂಲಕ ರಾಜ್ಯ ಆಡಳಿತ ಯಂತ್ರವನ್ನು ನಿಯಂತ್ರಿಸಲು ಕೈಗೊಳ್ಳಲಾಗಿರುವ ಕೇಂದ್ರದ ಲಜ್ಜೆಗೆಟ್ಟ ಪ್ರಯತ್ನವನ್ನು ನಾವು ಅನುಮತಿಸುವುದಿಲ್ಲ! ಪಶ್ಚಿಮ ಬಂಗಾಳವು ವಿಸ್ತರಣಾವಾದಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ಮುಂದೆ ತಲೆಬಾಗುವುದಿಲ್ಲಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳಾದ ಭೋಲಾನಾಥ್ ಪಾಂಡೆ, ರಾಜೀವ್ ಮಿಶ್ರಾ ಮತ್ತು ಪ್ರವೀಣ್ ತ್ರಿಪಾಠಿ ಅವರನ್ನು ಕೇಂದ್ರ ಪತ್ರಕ್ಕೆ ಸ್ಪಂದಿಸಲು ಬಂಗಾಳ ಸರ್ಕಾರದ ಪೊಲೀಸ್ ಅಧಿಕಾರಿಗಳು ವಿಫಲರಾದ ಬಳಿಕ ಅವರನ್ನು ಐದು ವರ್ಷಗಳ ಕಾಲ ಕೇಂದ್ರ ನಿಯೋಜನೆಗಾಗಿ ನೇಮಕ ಮಾಡಲಾಗಿದೆ.

ಮೂವರು ಐಪಿಎಸ್ ಅಧಿಕಾರಿಗಳ ನಿಯೋಜನೆಯನ್ನು ತತ್ ಕ್ಷಣದಿಂದ ಜಾರಿಗೆ ತರಲಾಗಿದೆ.

ಪಶ್ಚಿಮ ಬಂಗಾಳ ಸರ್ಕಾರ ಮತ್ತು ಡಿಜಿಪಿ, ಕೇಂದ್ರ ಸರ್ಕಾರ ಮತ್ತು ಅದರ ಡಿಸೆಂಬರ್ ೧೧ ದಿನಾಂಕದ (ಇದರಲ್ಲಿ ಮೂವರು ಅಧಿಕಾರಿಗಳು ಕೇಂದ್ರ ಸಚಿವಾಲಯದ ಮುಂದೆ ಹಾಜರಾಗಲು ನಿರಾಕರಿಸಿದರು),

ಪತ್ರದೊಂದಿಗೆ ಸಹಕರಿಸಲು ವಿಫಲವಾಗಿದೆ, ಇದು "ಅತೃಪ್ತಿಕರಎಂದು ಗೃಹ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಅಧಿಕಾರಿಗಳು ತಮ್ಮ ನೂತನ ಹುದ್ದೆಗಳಿಗೆ ತಕ್ಷಣ ವರದಿ ಮಾಡಬೇಕಾಗುತ್ತದೆ ಅಥವಾ ಅವರು ಮುಂದಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

No comments:

Advertisement