My Blog List

Thursday, December 17, 2020

ಕೃಷಿ ಕಾನೂನುಗಳಿಗೆ ದೆಹಲಿ ಅಸೆಂಬ್ಲಿ ತಿರಸ್ಕಾರ

 ಕೃಷಿ ಕಾನೂನುಗಳಿಗೆ ದೆಹಲಿ ಅಸೆಂಬ್ಲಿ ತಿರಸ್ಕಾರ

ನವದೆಹಲಿ: ರೈತರ ಆಂದೋಲನದ ಮಧ್ಯೆ ಗುರುವಾರ ನಡೆದ ದೆಹಲಿ ವಿಧಾನಸಭೆಯ ಏಕದಿನ ಅಧಿವೇಶನದಲ್ಲಿ  2020 ಡಿಸೆಂಬರ್ 17ರ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಮೂರೂ ಕೃಷಿ ಸುಧಾರಣಾ ಕಾನೂನುಗಳ ಪ್ರತಿಗಳನ್ನು ಹರಿದೆಸೆದರು. ಸದನವು ಬಳಿಕ ಮೂರೂ ಕಾನೂನುಗಳನ್ನು ತಿರಸ್ಕರಿಸಿತು.

ಕೇಂದ್ರದ ಮೂರು ಕೃಷಿ ಸುಧಾರಣೆಗಳ ವಿರುದ್ಧದ ಪ್ರತಿಭಟನೆಗಳು ೨೨ ನೇ ದಿನವನ್ನು ಪ್ರವೇಶಿಸಿವೆ.

ಅಧಿವೇಶನದಲ್ಲಿ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದೆಸೆದ ಕೇಜ್ರಿವಾಲ್, ’ಬ್ರಿಟಿಷರಿಗಿಂತ ಕೆಟ್ಟವರಾಗಬೇಡಿಎಂದು ಕೇಂದ್ರಕ್ಕೆ ಮನವಿ ಮಾಡಿದರು.

ಸಾಂಕ್ರಾಮಿಕ ಸಮಯದಲ್ಲಿ ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ಅಂಗೀಕರಿಸುವ ಆತುರ ಏನಿತ್ತು? ರಾಜ್ಯಸಭೆಯಲ್ಲಿ ಇದೆ ಮೊದಲ ಬಾರಿಗೆ ಮತದಾನವನ್ನೇ ಮಾಡದೆ ಮೂರು ಕಾನೂನುಗಳನ್ನು ಅಂಗೀಕರಿಸಲಾಗಿದೆ. ವಿಧಾನಸಭೆಯಲ್ಲಿ ನಾನು ಕೃಷಿ ಕಾನೂನುಗಳನ್ನು ಹರಿದು ಹಾಕಿದ್ದೇನೆ ಮತ್ತು  ಬ್ರಿಟಿಷರಿಗಿಂತ ಕೆಟ್ಟವರಾಗಬೇಡಿ ಎಂದು ಕೇಂದ್ರಕ್ಕೆ ಮನವಿಮಾಡಿದ್ದೇನೆಎಂದು ಕೇಜ್ರಿವಾಲ್ ಹೇಳಿದರು.

ಆಂದೋಲನ ನಡೆಸುತ್ತಿರುವ ರೈತರು ತಮ್ಮ ಧ್ವನಿಯನ್ನು ಆಲಿಸುವಂತೆ ಮಾಡಲು ಇನ್ನೂ ಎಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ? ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಪ್ರತಿಯೊಬ್ಬ ರೈತನೂ ಭಗತ್ ಸಿಂಗ್ ಆಗಿದ್ದಾನೆ, ತಾವು ರೈತರನ್ನು ತಲುಪುತ್ತಿರುವುದಾಗಿಯೂ, ಕೃಷಿ ಕಾಯ್ದೆಗಳ ಪ್ರಯೋಜನಗಳನ್ನು ವಿವರಿಸಲು ಪ್ರಯತ್ನಿಸುತ್ತಿರುವುದಾಗಿಯೂ ಸರ್ಕಾರ ಹೇಳುತ್ತಿದೆ. ಉತ್ತರ ಪ್ರದೇಶದ ಮುಖ್ಯಂಮತ್ರಿ ರೈತರಿಗೆ ನಿಮ್ಮ ಭೂಮಿಯನ್ನು ಕಸಿದುಕೊಳ್ಳದ ಕಾರಣ ಮಸೂದೆಗಳಿಂದ ಲಾಭ ಪಡೆಯುತ್ತೀರಿ ಎಂದು ಹೇಳಿದರು. ಇದು ಪ್ರಯೋಜನವೇ?’ ಎಂದು ದೆಹಲಿ ಮುಖ್ಯಮಂತ್ರಿ ಪ್ರಶ್ನಿಸಿದರು.

ಇದಕ್ಕೂ ಮುನ್ನ ದೆಹಲಿ ಸಾರಿಗೆ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಕೈಲಾಶ್ ಗೆಹ್ಲೋಟ್ ಅವರು ಡಿಸೆಂಬರಿನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ರದ್ದು ಪಡಿಸುವ ನಿರ್ಣಯವನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿದ್ದರು.

No comments:

Advertisement