My Blog List

Thursday, December 3, 2020

ಸಂಸದ ಸುಖದೇವ್ ಧಿಂಡ್ಸಾ ಪದ್ಮಭೂಷಣ ವಾಪಸ್

 ಸಂಸದ ಸುಖದೇವ್ ಧಿಂಡ್ಸಾ ಪದ್ಮಭೂಷಣ ವಾಪಸ್

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ (ಪ್ರಜಾಪ್ರಭುತ್ವ) ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸತ್ ಸದಸ್ಯ ಸುಖದೇವ್ ಸಿಂಗ್ ಧಿಂಡ್ಸಾ ಅವರು ತಮ್ಮ ಪದ್ಮಭೂಷಣ ಪ್ರಶಸ್ತಿಯನ್ನು 2020ರ ಡಿಸೆಂಬರ್ 3ರ ಗುರುವಾರ ಹಿಂದಿರುಗಿಸಿದರು.

ಎಸ್ಎಡಿ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಅನುಸರಿಸಿ ಶಿರೋಮಣಿ ಅಕಾಲಿ ದಳದೊಂದಿಗೆ ಪ್ರತ್ಯೇಕಗೊಂಡಿದ್ದ ಹಿರಿಯ ನಾಯಕನಿಗೆ ೨೦೧೯ ಮಾರ್ಚ್ ತಿಂಗಳಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದರು.

"ಕಳೆದ ಎರಡು ತಿಂಗಳುಗಳಿಂದ ರೈತರು ಧರಣಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ವಿರೋಧಿಸಿ ನನ್ನ ಪದ್ಮಭೂಷಣವನ್ನು ಹಿಂದಿರುಗಿಸಿದ್ದೇನೆ ಆದರೆ ಕೇಂದ್ರ ಸರ್ಕಾರವು ಅವರ ಮಾತನ್ನು ಕೇಳಲು ಸಿದ್ಧವಾಗಿಲ್ಲ ಎಂದು ಧಿಂಡ್ಸಾ ನುಡಿದರು.

ತಮ್ಮ ಪ್ರತಿಭಟನೆಯನ್ನು ದೆಹಲಿ ಗಡಿಗೆ ಸ್ಥಳಾಂತರಿಸಿರುವ ನಮ್ಮ ವೃದ್ಧರನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸುತ್ತಿರುವಾಗ, ನನಗೆ ಪ್ರಶಸ್ತಿ ನಿಷ್ಪ್ರಯೋಜಕವಾಗಿದೆ ದಿಂಡ್ಸಾ ಹೇಳಿದರು.

ರಾಜ್ಯಸಭಾ ಸಂಸದರು ತಮ್ಮ ಪಕ್ಷದ ಕಾರ್ಯಕರ್ತರು ರೈತರಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ರೈತರ ಪ್ರತಿಭಟನೆಯಲ್ಲಿ ಪಕ್ಷ ರಾಜಕೀಯದ ಬಗ್ಗೆ ಚರ್ಚಿಸದಂತೆ ಕೇಳಿಕೊಂಡಿದ್ದಾರೆ.

ನನ್ನ ಮಗ ಪರಮಿಂದರ್ ಸಿಂಗ್ ಧಿಂಡ್ಸಾ ಕೂಡ ರೈತ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾನೆ. ನಾನು ರೈತರೊಂದಿಗೆ ನಿಲ್ಲುತ್ತೇನೆ ಎಂದು ಅವರು ಹೇಳಿದರು.

"ಸರ್ಕಾರವು ಇಂತಹ ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ನಾನು ಆಂದೋಲನವನ್ನು ತೀವ್ರಗೊಳಿಸುತ್ತೇನೆ" ಎಂದು ಅವರು ಹೇಳಿದರು.

No comments:

Advertisement