My Blog List

Thursday, December 24, 2020

ಪಶ್ಚಿಮ ಬಂಗಾಳ: ಎಡ ಪಕ್ಷಗಳ ಜೊತೆ ಕಾಂಗ್ರೆಸ್ ಮೈತ್ರಿ

 ಪಶ್ಚಿಮ ಬಂಗಾಳ: ಎಡ ಪಕ್ಷಗಳ ಜೊತೆ ಕಾಂಗ್ರೆಸ್ ಮೈತ್ರಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ೨೦೨೧ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ಎಡಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಕಾಂಗ್ರೆಸ್  2020 ಡಿಸೆಂಬರ್ 24ರ ಗುರುವಾರ  ಔಪಚಾರಿಕವಾಗಿ ಪ್ರಕಟಿಸಿತು.

ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಘೋಷಣೆಯನ್ನು ಟ್ವೀಟ್ ಮಾಡಿದರು.

"ಕಾಂಗ್ರೆಸ್ ವರಿಷ್ಠ ಮಂಡಳಿಯು (ಹೈಕಮಾಂಡ್) ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗಿನ ಚುನಾವಣಾ ಮೈತ್ರಿಯನ್ನು ಔಪಚಾರಿಕವಾಗಿ ಇಂದು ಅನುಮೋದಿಸಿದೆಎಂದು ಚೌಧರಿ ಟ್ವೀಟ್ ಮಾಡಿದರು.

ಪಶ್ಚಿಮ ಬಂಗಾಳವು ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ಜೊತೆಗೆ ಮುಂದಿನ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಚುನಾವಣೆಗೆ ಹೋಗಲಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳೊಂದಿಗೆ ಚುನಾವಣಾ ತಿಳುವಳಿಕೆಯನ್ನು ಹೊಂದುವ ಪಶ್ಚಿಮ ಬಂಗಾಳ ಘಟಕದ ನಿರ್ಧಾರವನ್ನು ಭಾರತದ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕೇಂದ್ರ ಸಮಿತಿಯು ಅಕ್ಟೋಬರ್ ತಿಂಗಳಲ್ಲಿ ಅಂಗೀಕರಿಸಿತ್ತು.

ಸಿಪಿಐ (ಎಂ) ರಾಜಕೀಯ ಬ್ಯೂರೋ ಕ್ರಮಕ್ಕೆ ಮುಂದಾಗಿತ್ತು ಆದರೆ ಅಂತಿಮ ತೀರ್ಮಾನವನ್ನು ಕೇಂದ್ರ ಸಮಿತಿಗೆ ಬಿಟ್ಟಿತ್ತು.

೨೦೧೬ ಚುನಾವಣೆಯಲ್ಲಿ, ಸಿಪಿಐನ (ಎಂ) ಕೇಂದ್ರ ಸಮಿತಿಯು ಯುದ್ದ ತಂತ್ರವಾಗಿ ಕಾಂಗ್ರೆಸ್ ಜೊತೆಗೆ ಸ್ಥಾನ ಹಂಚಿಕೊಳ್ಳುವ ಪಶ್ಚಿಮ ಬಂಗಾಳ ಘಟಕದ ನಿರ್ಧಾರವನ್ನು ತಿರಸ್ಕರಿಸಿತ್ತು. ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿತು ಮತ್ತು ಎಡರಂಗವು ಕೇವಲ ೩೨ ಸ್ಥಾನಗಳಿಗೆ ತೃಪಿ ಪಡಬೇಕಾಗಿ ಬಂದಿತ್ತು.

No comments:

Advertisement