My Blog List

Friday, December 25, 2020

ರೈತರಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ

 ರೈತರಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ

ಚಂಡೀಗಢ: ಪಂಜಾಬಿನಾದ್ಯಂತ ಮೊಬೈಲ್ ಟವರ್‌ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾಗಿದೆ ಎಂಬ ವರದಿಗಳ ಮಧ್ಯೆ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು "ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಿ ಎಂದು ರೈತ ಪ್ರತಿಭಟನಾಕಾರರಿಗೆ ಶುಕ್ರವಾರ ಮನವಿ ಮಾಡಿದರು.

ಕೋವಿಡ್ -೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಟೆಲಿಕಾಂ ಸಂಪರ್ಕವು ಜನರಿಗೆ ಇನ್ನಷ್ಟು ನಿರ್ಣಾಯಕವಾಗಿದೆ ಎಂದು ಗಮನಸೆಳೆದ ಅವರು, ಕಳೆದ ಒಂದು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುವಾಗ ತೋರಿರುವ ಶಿಸ್ತನ್ನು ಈಗಲೂ ತೋರಿಸಬೇಕೆಂದು ರೈತರನ್ನು ಕೋರಿದರು.

ಟೆಲಿಕಾಂ ಸಂಪರ್ಕವನ್ನು ಬಲವಂತವಾಗಿ ಸ್ಥಗಿತಗೊಳಿಸುವ ಮೂಲಕ ಅಥವಾ ಟೆಲಿಕಾಂ ಸೇವಾ ಪೂರೈಕೆದಾರರ ನೌಕರರು ಮತ್ತು ತಂತ್ರಜ್ಞರನ್ನು ಬಲವಂತವಾಗಿ ತಡೆಯವ ಮೂಲಕ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದಂತೆ ರೈತರನ್ನು ಒತ್ತಾಯಿಸಿದ ಮುಖ್ಯಮಂತ್ರಿ, ಇಂತಹ ಕ್ರಮಗಳು ಪಂಜಾಬಿನ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಿದರು.

"ಕರಾಳ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಪಂಜಾಬ್ ಜನರು ರೈತರೊಂದಿಗೆ ನಿಂತಿದ್ದಾರೆ ಮತ್ತು ಅದನ್ನು ಮುಂದುವರೆಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.

ನ್ಯಾಯಕ್ಕಾಗಿ ನಡೆದಿರುವ ಯುದ್ಧವು ಯಾವುದೇ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮೂಲಕ ರೈತರು ರಾಜ್ಯದ ಜನರೊಂದಿಗೆ ಪರಸ್ಪರ ಹಿತ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ನುಡಿದರು.

ರಾಜ್ಯದ ಹಲವಾರು ಭಾಗಗಳಲ್ಲಿ ರೈತರು ಮೊಬೈಲ್ ಟವರ್‌ಗಳಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದರಿಂದ ಟೆಲಿಕಾಂ ಸೇವೆಗಳಿಗೆ ಬಲವಂತವಾಗಿ ಅಡ್ಡಿಯಾಗಿ, ವಿದ್ಯಾರ್ಥಿಗಳ ಅಧ್ಯಯನ ಮತ್ತು ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ವಿದ್ಯಾಭ್ಯಾಸ ಈಗ ಸಂಪೂರ್ಣವಾಗಿ ಆನ್‌ಲೈನ್ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಜನರಿಗೂ ಟೆಲಿಕಾಂ ಸಂಪರ್ಕ ಸಿಗದೆ ದೈನಂದಿನ ಜೀವನಕ್ಕೆ ಅಡ್ಡಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದಲ್ಲದೆ, ಟೆಲಿಕಾಂ ಸೇವೆಗಳ ಅಡ್ಡಿ ರಾಜ್ಯದ ಈಗಾಗಲೇ ತೊಂದರೆಗೀಡಾದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಬೊಟ್ಟು ಮಾಡಿದರು.

ಪಂಜಾಬ್ ನಾಗರಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ತಮ್ಮ ಶಾಂತಿಯುತ ಪ್ರತಿಭಟನೆಯನ್ನು ಮುಂದುವರೆಸುವಂತೆ ಕ್ಯಾಪ್ಟನ್ ರೈತರಿಗೆ ಸೂಚಿಸಿದರು.

ರಾಜ್ಯದಲ್ಲಿ ಟೆಲಿಕಾಂ ಸೇವೆ ಅಡ್ಡಿಪಡಿಸುವಿಕೆಯ ಪರಿಣಾಮವಾಗಿ ಉಲ್ಬಣಗೊಳ್ಳಲಿರುವ ದೀರ್ಘಕಾಲದ ಆರ್ಥಿಕ ಬಿಕ್ಕಟ್ಟು ಕೃಷಿ ಕ್ಷೇತ್ರದ ಮೇಲೆ ಪ್ರಚೋದಕ ಪರಿಣಾಮವನ್ನು ಬೀರುತ್ತದೆ ಮತ್ತು ಕೃಷಿ ಸಮುದಾಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಅಮರಿಂದರ್ ಸಿಂಗ್ ಗಮನಸೆಳೆದರು.

ಇದರ ಪರಿಣಾಮ ಎಲ್ಲಾ ವಿಭಾಗಗಳಿಗೂ ಹಾನಿಕಾರಕವಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಘೋಷಿಸಲಾದ ರಾಜ್ಯದ ಹೊಸ ಟೆಲಿಕಾಂ ಮಾರ್ಗಸೂಚಿ ೨೦೨೦ ಭಾಗವಾಗಿ ಟೆಲಿಕಾಂ ಸಂಪರ್ಕವನ್ನು ಸುಧಾರಿಸುವ ಗುರಿಯನ್ವಯ ಟೆಲಿಕಾಂ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವ ತಮ್ಮ ಸರ್ಕಾರದ ಪ್ರಯತ್ನಗಳ ಮೇಲೆ ಇಂತಹ ಕ್ರಮಗಳು ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದೂ ಮುಖ್ಯಮಂತ್ರಿ ನುಡಿದರು.

ಕೋವಿಡ್ -೧೯ ಹಿನ್ನೆಲೆಯಲ್ಲಿ, ಭೂಗತ ಟೆಲಿಕಾಂ ಮೂಲಸೌಕರ್ಯಗಳಿಗೆ ಅನುಮತಿಗಳನ್ನು ಸರಾಗಗೊಳಿಸುವ ಮೂಲಕ ಸಂಪರ್ಕವನ್ನು ಸುಧಾರಿಸುವ ಅವಶ್ಯಕತೆಯಿರುವುದರಿಂದ ಮಾರ್ಗಸೂಚಿಗಳು ಅತ್ಯಗತ್ಯವಾಗಿವೆ.

ಮಾರ್ಗಸೂಚಿಗಳು ರಾಜ್ಯದ ಟೆಲಿಕಾಂ ಮತ್ತು ಇಂಟರ್ನೆಟ್ ಸಂಪರ್ಕಕ್ಕೆ ಕ್ವಾಂಟಮ್ ಜಂಪ್ ನೀಡುವ ನಿರೀಕ್ಷೆಯಿದೆ. ಟೆಲಿಕಾಂ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು.

ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರರ ನೋಂದಾಯಿತ ಸಂಸ್ಥೆಯಾದ ಟವರ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಶನ್ (ಟಿಎಐಪಿಎ) ಕೋರಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಮನವಿ ಮಾಡಿದ್ದಾರೆ. ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಆಶ್ರಯಿಸದಂತೆ ರೈತರನ್ನು ಮನವೊಲಿಸಬೇಕು ಎಂದು ಅಸೋಸಿಯೇಶನ್ ರಾಜ್ಯ ಸರ್ಕಾರವನ್ನು ಕೋರಿದೆ

No comments:

Advertisement