My Blog List

Monday, December 21, 2020

ಭಾರತದ ಚಿರತೆ ಸಂಖ್ಯೆ ಶೇ. ೬೦ರಷ್ಟು ಏರಿಕೆ

 ಭಾರತದ ಚಿರತೆ ಸಂಖ್ಯೆ ಶೇ. ೬೦ರಷ್ಟು ಏರಿಕೆ

ನವದೆಹಲಿ: ಭಾರತದಲ್ಲಿ ಚಿರತೆಗಳ ಸಂಖ್ಯೆಯು ಶೇಕಡಾ ೬೦ ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ 2020 ಡಿಸೆಂಬರ್ 21ರ ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಭಾರತದಲ್ಲಿ ಈಗ ೧೨,೮೫೨ ಚಿರತೆಗಳಿವೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಬಿಡುಗಡೆ ಮಾಡಿದಭಾರತದಲ್ಲಿ ಚಿರತೆಗಳ ಸ್ಥಿತಿಗತಿ-೨೦೧೮ ವರದಿಯಲ್ಲಿ ತಿಳಿಸಲಾಗಿದೆ.

"೨೦೧೪ರಲ್ಲಿ ನಡೆಸಿದ ಹಿಂದಿನ ಅಂದಾಜಿಗಿಂತ ಸಂಖ್ಯೆಯಲ್ಲಿ ಶೇಕಡಾ ೬೦ಕ್ಕಿಂvಲೂ ಹೆಚ್ಚು ಹೆಚ್ಚಿದೆ ಎಂದು ವರದಿಯನ್ನು ಬಿಡುಗಡೆ ಮಾಡಿದ ನಂತರ ಜಾವಡೇಕರ್ ಹೇಳಿದರು.

ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ‘ಅತಿ ಹೆಚ್ಚು ಚಿರತೆ ಅಂದಾಜುಗಳನ್ನು ದಾಖಲಿಸಿದ ಮಧ್ಯಪ್ರದೇಶ (,೪೨೧), ಕರ್ನಾಟಕ (೧೭೮೩) ಮತ್ತು ಮಹಾರಾಷ್ಟ್ರ (೧೬೯೦) ರಾಜ್ಯಗಳಿಗೆ ಅಭಿನಂದನೆಗಳು. ಕಳೆದ ಕೆಲವು ವರ್ಷಗಳಿಂದ ಹುಲಿ, ಸಿಂಹ ಮತ್ತು ಚಿರತೆಗಳ ಸಂಖ್ಯೆಯಲ್ಲಿನ ಹೆಚ್ಚಳವು ವನ್ಯಜೀವಿ ಮತ್ತು ಜೀವವೈವಿಧ್ಯತೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಜಾವಡೇಕರ್ ಟ್ವಿಟರಿನಲ್ಲಿ  ತಿಳಿಸಿದ್ದಾರೆ.

ಚಿರತೆಗಳು ಹೆಚ್ಚು ಹೊಂದಿಕೊಳ್ಳಬಲ್ಲ ಮಾಂಸಾಹಾರಿಗಳಲ್ಲಿ ಸೇರಿವೆ, ಮತ್ತು ಅವು ಮಾನವನ ವಾಸಸ್ಥಾನಗಳಿಗೆ ಬಹಳ ಹತ್ತಿರದಲ್ಲಿವೆ ಎಂದು ತಿಳಿದುಬಂದಿದೆ.

ವರ್ಷದ ಆರಂಭದಲ್ಲಿ ನಡೆಸಿದ ಅಧ್ಯಯನವು ಭಾರತದಲ್ಲಿ ಪಶ್ಚಿಮ ಘಟ್ಟದ ಚಿರತೆಗಳು, ದಕ್ಕಣದ ಪ್ರಸ್ಥಭೂಮಿ ಅರೆ-ಶುಷ್ಕ ಪ್ರದೇಶ, ಶಿವಾಲಿಕ್ ಪರ್ವತಗಳು ಮತ್ತು ಉತ್ತರ ಭಾರತದ ತೆರೈ ಪ್ರದೇಶ - ನಾಲ್ಕು ಪ್ರದೇಶಗಳ ವಿಭಿನ್ನ ಚಿರತೆಗಳ ಉಪ-ಸಂಖ್ಯೆಯನ್ನು ಕಂಡುಹಿಡಿದಿದೆ.

No comments:

Advertisement