My Blog List

Sunday, January 24, 2021

ಕೋಲ್ಕತದಿಂದ ಪ್ರಧಾನಿ ಚಿತ್ರ: 24 ತಾಸಿನೊಳಗೆ 10 ಲಕ್ಷ ಲೈಕ್ಸ್

 ಕೋಲ್ಕತದಿಂದ ಪ್ರಧಾನಿ ಚಿತ್ರ: 24 ತಾಸಿನೊಳಗೆ 10 ಲಕ್ಷ ಲೈಕ್ಸ್


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2021 ಜನವರಿ 23ರ ಕೋಲ್ಕತ ಭೇಟಿ ಕಾಲದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಚಿತ್ರವೊಂದು ೨೪ ಗಂಟೆಗಳ  ಒಳಗಿನ ಅವಧಿಯಲ್ಲಿ ಸುಮಾರು 10 ಲಕ್ಷ (೧ ಮಿಲಿಯನ್) ಲೈಕ್ಗಳನ್ನು ಪಡೆದಿದೆ.

ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ನಿಮಿತ್ತ ಪ್ರಧಾನಿ ಜನವರಿ 23ರ ಶನಿವಾರ  ಕೋಲ್ಕತಕ್ಕೆ ಭೇಟಿ ನೀಡಿದ್ದರು. ನೇತಾಜಿ ಜನ್ಮದಿನವನ್ನು ಪ್ರಸ್ತುತ ವರ್ಷದಿಂದ ‘ಪರಾಕ್ರಮ ದಿನ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

"ನೇತಾಜಿ ಬೋಸ್ಅವರಿಗೆ ಗೌರವ ಸಲ್ಲಿಸಲು ಕೋಲ್ಕತಕ್ಕೆ ತಲುಪಿದೆ" ಎಂಬ ಶೀರ್ಷಿಕೆಯೊಂದಿಗೆ  ಫೇಸ್ ಬುಕ್ ನಲ್ಲಿ ಚಿತ್ರವನ್ನು ಪ್ರಕಟಿಸಿದ್ದರು.  ಈ ಚಿತ್ರವು ಈವರೆಗೆ 10 ಲಕ್ಷ (1 ಮಿಲಿಯನ್ ) ಲೈಕ್ಗಳನ್ನು ಪಡೆದರೆ, 14,000ಕ್ಕೂ ಹೆಚ್ಚು ಮಂದಿ ಇದನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ 47,000 ಪ್ರತಿಕ್ರಿಯೆಗಳು (ಕಾಮೆಂಟ್) ಬಂದಿವೆ.

ಪ್ರಧಾನಿಯವರು ಮೊದಲು ನೇತಾಜಿ ಭವನಕ್ಕೆ ಭೇಟಿ ನೀಡಿದರು. ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸುಭಾಶ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ವೇದಿಕೆಯನ್ನು ಹಂಚಿಕೊಂಡರು.

ನೇತಾಜಿ ಭವನದಲ್ಲಿ, ಪ್ರಧಾನಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರನ ಅಳಿಯ ಸುಗಾಟೊ ಬೋಸ್ ಮತ್ತು ಅವರ ಸಹೋದರ ಸುಮಂತ್ರೋ ಬೋಸ್ ಕರೆದೊಯ್ದರು ವಿವರಿಸಿದರು. ಅವರೊಂದಿಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಕೂಡ ಇದ್ದರು.

ಪ್ರಧಾನಿ ಮೋದಿ ಅವರಿಗೆ ನೇತಾಜಿ ಬಳಸಿದ "ವಾಂಡರರ್ ಕಾರು" ತೋರಿಸಲಾಯಿತು. ಆಜಾದ್ ಹಿಂದ್ ಫೌಜ್ ಛಾಯಾಚಿತ್ರಗಳು ಮತ್ತು ಸಿಂಗಾಪುರದಲ್ಲಿ ನೇತಾಜಿ ಬಳಸಿದ ಟೇಬಲ್ ಒಳಗೊಂಡಿರುವ ವಸ್ತುಸಂಗ್ರಹಾಲಯದ ತ್ವರಿತ ದರ್ಶನವನ್ನೂ ಅವರಿಗೆ ನೀಡಲಾಯಿತು.

ನಂತರ, ನಗರದ ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿ,  ನಿಯಂತ್ರಣ ರೇಖೆಯಿಂದ (ಎಲ್ಒಸಿ) ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ವರಿಗೆ ತಮ್ಮ ಹೆಜ್ಜೆಗಳನ್ನು ಅನುಸರಿಸುವ ಮೂಲಕ ದೇಶವು ಪ್ರಬಲವಾಗಿರುವುದನ್ನು ಕಂಡು ನೇತಾಜಿ ಸುಭಾಶ್ ಚಂದ್ರ ಬೋಸ್ ಹೆಮ್ಮೆ ಪಡುತ್ತಿದ್ದರು ಎಂದು ಹೇಳಿದರು.

No comments:

Advertisement