Saturday, January 2, 2021

ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಗೂ ತಜ್ಞರ ಸಮಿತಿ ಶಿಫಾರಸು

 ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಗೂ ತಜ್ಞರ ಸಮಿತಿ ಶಿಫಾರಸು

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ತುರ್ತು ಬಳಕೆಗಾಗಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗೆ ಅನುಮತಿ ನೀಡಿದ ಬಳಿಕ ಭಾರತ ಸರ್ಕಾರ ನೇಮಿಸಿದ ವಿಷಯ ತಜ್ಞರ ಸಮಿತಿಯು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಯನ್ನು ಕೂಡಾ ನಿರ್ಬಂಧಿತ ತುರ್ತು ಬಳಕೆಗಾಗಿ ಶಿಫಾರಸು ಮಾಡಿದೆ ಎಂದು ಸರ್ಕಾರದ ಮೂಲಗಳು 2021 ಜನವರಿ 02ರ ಶನಿವಾರ ಖಚಿತಪಡಿಸಿವೆ.

ಉಭಯ ಲಸಿಕೆಗಳಿಗೂ ಭಾರತದ ಔಷಧ ಮಹಾನಿಯಂತ್ರಕವು (ಡ್ರಗ್ ಕಂಟ್ರೋಲರ್ ಜನರಲ್ -ಡಿಸಿಜಿಐ) ಅಂತಿಮ ಅನುಮೋದನೆ ನೀಡಲಿದೆ.

ಇದರೊಂದಿಗೆ ಭಾರತ್ ಬಯೋಟೆಕ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಮೊದಲ ಸ್ಥಳೀಯ ಅನುಮೋದಿತ ಲಸಿಕೆ ಇದಾಗಲಿದೆ.

ಭಾರತ್ ಬಯೋಟೆಕ್ ಡಿಸೆಂಬರ್ ರಂದು ಮೊದಲು ತುರ್ತು-ಬಳಕೆಯ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿತ್ತು. ಹೆಚ್ಚಿನ ಪರಿಗಣನೆಗೆ ನಡೆಯುತ್ತಿರುವ ಹಂತ ಕ್ಲಿನಿಕಲ್ ಪ್ರಯೋಗದಿಂದ ತಮ್ಮ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದತ್ತಾಂಶವನ್ನು (ಡೇಟಾ) ಸಲ್ಲಿಸುವಂತೆ ತಜ್ಞರ ಸಮಿತಿ ಸಂಸ್ಥೆಯನ್ನು ಕೇಳಿತ್ತು.

ಭಾರತದಲ್ಲಿ ನಿರ್ಬಂಧಿತ ತುರ್ತು ಬಳಕೆಗಾಗಿ ಭಾರತ್ ಬಯೋಟೆಕ್ ಕೋವಿಡ್ -೧೯ ಲಸಿಕೆ ಅರ್ಜಿದಾರ ಕೋವಾಕ್ಸಿನ್‌ನ್ನು ಅನುಮೋದಿಸಬೇಕೆಂದು ರಾಷ್ಟ್ರೀಯ ಔಷಧs ನಿಯಂತ್ರಕದ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಶನಿವಾರ ಶಿಫಾರಸು ಮಾಡಿತು. ಶುಕ್ರವಾರ ಸಂಜೆ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗೆ ಅನುಮತಿ ನೀಡಿದ ನಂತರ ಸ್ಥಳೀಯವಾಗಿ ತಯಾರಿಸಿದ ಲಸಿಕೆಗೆ ತಜ್ಞರ ಸಮಿತಿಯ ಒಪ್ಪಿಗೆ ಲಭಿಸಿದೆ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ರಚಿಸಿದ ಸಮಿತಿಯು ಭಾರತ್ ಬಯೋಟೆಕ್ ತನ್ನ ಕೊರೋನವೈರಸ್ ಲಸಿಕೆಗಾಗಿ ನೀಡಿದ ಮಾಹಿತಿಯು ತುರ್ತು ಬಳಕೆಯ ಅನುಮೋದನೆ ನೀಡಲು ಸಾಕಾಗುವುದಿಲ್ಲ ಎಂದು ಹೇಳಿದ ಸಮಿತಿ ಹೆಚ್ಚಿನ ಮಾಹಿತಿಯನ್ನು ಕೋರಿತ್ತು. ಬಳಿಕ ಶನಿವಾರ ತನ್ನ ಶಿಫಾರಸನ್ನು ನೀಡಿತು ಎಂದು ಮೂಲಗಳು ತಿಳಿಸಿವೆ.

No comments:

Advertisement