ಸೌರವ್ ಗಂಗೂಲಿಗೆ ಲಘು ಹೃದಯಾಘಾತ, ಆಸ್ಪತ್ರೆಗೆ
ಕೋಲ್ಕತ: ಭಾರತದ ಮಾಜಿ ಕ್ರಿಕೆಟ್ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ 2021 ಜನವರಿ 02ರ ಶನಿವಾರ ಲಘು ಹೃದಯಾಘಾತ ಸಂಭವಿಸಿದ್ದು, ಕೋಲ್ಕತದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಂಜಿಯೋಪ್ಲಾಸ್ಟಿ ಮಾಡಲಾಗಿದೆ.
ಶನಿವಾರ ಎದೆನೋವು ಬಗ್ಗೆ ದೂರಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿಗಳು ತಿಳಿಸಿವೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
‘ಸೌರವ್ ಗಂಗೂಲಿ ತಮ್ಮ ಮನೆಯ ಜಿಮ್‌ನಲ್ಲಿ ಟ್ರೆಡ್ ಮಿಲ್ ಮಾಡುವಾಗ ಎದೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರು ಕುಟುಂಬ ಹೃದ್ರೋUದ ಇತಿಹಾಸವನ್ನು ಹೊಂದಿದ್ದರು. ಮಧ್ಯಾಹ್ನ ೧ ಗಂಟೆಗೆ ಅವರು ಆಸ್ಪತ್ರೆಗೆ ಬಂದಾಗ, ಹೃದಯದ ಸ್ಥಿತಿಗತಿಯಲ್ಲಿ ಏರು ಪೇರು ಕಂಡು ಬಂದಿತ್ತು’ ಎಂದು ವುಡ್ ಲ್ಯಾಂಡ್ಸ್ ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿತು.
ಗಂಗೂಲಿ ಅವರಿಗೆ ಬಳಿಕ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಯಿತು.
೪೮ ವರ್ಷದ ಗಂಗೂಲಿ ಅವರು ೨೦೧೯ ರ ಅಕ್ಟೋಬರಿನಿಂದ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ಈಗ ಬಂಗಾಳದ ಕ್ರಿಕೆಟ್ ಅಸೋಸಿಯೇಶನ್ನಿನಲ್ಲಿ ನಿರ್ವಾಹಕರಾಗಿರುವ ಅವರ ಅಣ್ಣ ಸ್ನೇಹಶಿಶ್ ಅವರಿಗೆ ಕಳೆದ ವರ್ಷ ಕೋವಿಡ್ -೧೯ ಸೋಂಕು ತಗುಲಿತ್ತು ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸ ಬೇಕಾಗಿ ಬಂದಿತ್ತು.
‘ಸೌರವ್ ಗಂಗೂಲಿ ಆರೋಗ್ಯ ಸ್ಥಿರವಾಗಿದೆ. ಹಿರಿಯ ವೈದ್ಯರು ಅವರನ್ನು ನೋಡಿಕೊಳ್ಳುತ್ತಿದ್ದಾರೆ. ನಾವು ಹೆಚ್ಚಿನ ನವೀಕರಣಗಳನ್ನು ಪಡೆದ ನಂತರ ನಾವು ನಿಮಗೆ ತಿಳಿಸುತ್ತೇವೆ”ಎಂದು ಸ್ನೇಹಶಿಶ್ ಶನಿವಾರ ಹೇಳಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತೀಯ ಕ್ರಿಕೆಟ್ ಆಟಗಾರ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು ಮತ್ತು ಅವರು ‘ಸೌಮ್ಯ ಹೃದಯ ಸ್ತಂಭನ’ದಿಂದ ಬಳಲುತ್ತಿದ್ದಾರೆ ಎಂದು ಟ್ವೀಟ್ ಮಾಡಿದರು.
ಬಿಸಿಸಿಐ ಕಾರ್ಯದರ್ಶಿ ಮತ್ತು ಕ್ರಿಕೆಟ್ ಮಂಡಳಿಯಲ್ಲಿ ಗಂಗೂಲಿಯವರ ನಿಕಟವರ್ತಿಯಾಗಿರುವ ಜೇ ಶಾ, ’ಗಂಗೂಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
‘ಗಂಗೂಲಿ ಅವರ ಶೀಘ್ರ ಚೇತರಿಕೆಗಾಗಿ ನಾನು ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ನಾನು ಅವರ ಕುಟುಂಬದೊಂದಿಗೆ ಮಾತನಾಡಿದ್ದೇನೆ. ದಾದಾ ಸ್ಥಿರವಾಗಿದ್ದಾರೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಶಾ ಟ್ವೀಟ್ ಮಾಡಿದರು.
No comments:
Post a Comment