My Blog List

Tuesday, August 30, 2022

ಇಂದಿನ ಇತಿಹಾಸ History Today ಆಗಸ್ಟ್‌ 30

ಇಂದಿನ ಇತಿಹಾಸ History Today ಆಗಸ್ಟ್‌ 30

2022: ನವದೆಹಲಿ: ಅಯೋಧ್ಯೆಯಲ್ಲಿ 1992ರಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಹಾಗೂ ಇತರರ ಮೇಲೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ 2022 ಆಗಸ್ಟ್‌ 30ರ ಮಂಗಳವಾರ ರದ್ದುಗೊಳಿಸಿತು. ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲೇ ಅಂತಿಮ ತೀರ್ಪು ಪ್ರಕಟಿಸಿದೆ. ಹೀಗಾಗಿ ಈ ಅರ್ಜಿಯ ವಿಚಾರಣೆ ಈಗ ಅಪ್ರಸ್ತುತ’ ಎಂದು ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ತ್ರಿಸದಸ್ಯ ಪೀಠ ಹೇಳಿತು. ಅರ್ಜಿಯು ಸುಮಾರು 30 ವರ್ಷಗಳಿಂದ ಬಾಕಿ ಇದೆ. ಅರ್ಜಿದಾರರಾದ ಭುರೆ ಅವರು 2010ರಲ್ಲೇ ಮೃತರಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಎಂ.ಎಂ.ಕಶ್ಯಪ್‌ ನ್ಯಾಯಾಲಯಕ್ಕೆ ಹೇಳಿದರು. ಅರ್ಜಿದಾರರ ಬದಲಿಗೆ ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಒದಗಿಸುವಂತೆ ಕೋರಿದರು. ಅವರ ಮನವಿಯನ್ನು ಪೀಠ ತಿರಸ್ಕರಿಸಿತು. ‘1992ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿತ್ತು. ಅದಾದ ನಂತರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿ ಅರ್ಜಿದಾರರು ಅನೇಕ  ಅರ್ಜಿಗಳನ್ನು ಸಲ್ಲಿಸಿದ್ದರು’ ಎಂದೂ ಕಶ್ಯಪ್‌ ತಿಳಿಸಿದರು. ನಿಮ್ಮ ಕಾಳಜಿಯನ್ನು ನಾವು ಪ್ರಶಂಶಿಸುತ್ತೇವೆ. ಅರ್ಜಿಯ ವಿಚಾರಣೆಯು ಬಹಳ ಹಿಂದೆಯೇ ನಡೆಯಬೇಕಿತ್ತು. ಅದು ಆಗದಿರುವುದು ದುರದೃಷ್ಟಕರ. ಈಗ ಈ ವಿಚಾರದಲ್ಲಿ ಹೇಳುವುದಕ್ಕೆ ಏನೂ ಉಳಿದಿಲ್ಲ. ಸತ್ತ ಕುದುರೆಯನ್ನು ಚಾಟಿಯಿಂದ ಹೊಡೆಯಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ವಿಕ್ರಂ ನಾಥ್‌ ಅವರನ್ನೂ ಒಳಗೊಂಡ ಪೀಠ ಹೇಳಿತು. ಅರ್ಜಿದಾರರು ಈಗಾಗಲೇ ಮರಣ ಹೊಂದಿದ್ದಾರೆ. ಸಾಂವಿಧಾನಿಕ ಪೀಠವು ಈ ವಿಚಾರವಾಗಿ ಅಂತಿಮ ತೀರ್ಪು ನೀಡಿದೆ. ಹೀಗಾಗಿ ಈ ಅರ್ಜಿಯನ್ನು ರದ್ದುಮಾಡುತ್ತಿದ್ದೇವೆ’ ಎಂದು ಪೀಠ ಹೇಳಿತು. 16ನೇ ಶತಮಾನದಲ್ಲಿ ಸ್ಥಾಪಿಸಲಾಗಿದ್ದ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್‌ 6ರಂದು ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠವು ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅನುಮತಿ ನೀಡಿತ್ತು. ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್‌ ಮಂಡಳಿಗೆ 5 ಎಕರೆ ಭೂಮಿ ಮಂಜೂರು ಮಾಡುವಂತೆಯೂ 2019ರ ನವೆಂಬರ್‌ 9ರಂದು ನೀಡಿದ್ದ ತೀರ್ಪಿನಲ್ಲಿ ತಿಳಿಸಿತ್ತು.  

2022: ನವದೆಹಲಿ: ಸೆಪ್ಟೆಂಬರ್‌ 2ರಂದು ಹಮ್ಮಿಕೊಳ್ಳಲಾದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ  ಐಎನ್‌ಎಸ್ ವಿಕ್ರಾಂತ್‌  ಕಾರ್ಯಾರಂಭ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಯ ಹೊಸ ಲಾಂಛನವನ್ನು ಅನಾವರಣಗೊಳಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ 2022 ಆಗಸ್ಟ್‌ 30ರ ಮಂಗಳವಾರ ತಿಳಿಸಿತು. ಕೊಚ್ಚಿಯ ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ನಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಐಎನ್‌ಎಸ್ ವಿಕ್ರಾಂತ್‌ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ ಎಂದು ಅದು ಹೇಳಿತು.

2019: ನವದೆಹಲಿ: ದಕ್ಷತೆಯ ಹೆಚ್ಚಳ ಹಾಗೂ ಬ್ಯಾಂಕಿಂಗ್  ರಂಗವನ್ನು ಬಲಪಡಿಸುವ ಮೂಲಕ ಬೆಳವಣಿಗೆಯನ್ನು ತ್ವರಿತಗೊಳಿಸಿಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧನೆಗಾಗಿ  ಕರ್ನಾಟಕದ  ಕರಾವಳಿ ಮೂಲದ 3 ಬ್ಯಾಂಕುಗಳು ಸೇರಿದಂತೆ ೧೦ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು  ಬ್ಯಾಂಕುಗಳಾಗಿ ವಿಲೀನಗೊಳಿಸುವ ಮಹತ್ವದ ಕ್ರಮವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈದಿನ ಪ್ರಕಟಿಸಿದರುಬ್ಯಾಂಕುಗಳ ಮಹಾವಿಲೀನದಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ ೨೦೧೭ರಲ್ಲಿ ಇದ್ದ ೨೭ರಿಂದ ಈಗ ೧೨ಕ್ಕೆ ಇಳಿಯಿತು. ಬ್ಯಾಂಕುಗಳ ಮಹಾವಿಲೀನದಲ್ಲಿ ಅತ್ಯಂತ ದೊಡ್ಡ  ವಿಲೀನ ಪಂಜಾಬ್ ನ್ಯಾಷನಲ್ ಬಾಂಕನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ವಿಲೀನಗೊಳಿಸುವ ಕ್ರಮವಾಗಿದ್ದು ಇದರೊಂದಿಗೆ ೧೭. ಲಕ್ಷ ಕೋಟಿ ರೂಪಾಯಿ ವ್ಯವಹಾರ ಹೊಂದಿದೆ. ಇದರೊಂದಿಗೆ ಭಾರತದ ಎರಡನೇ ಅತಿದೊಡ್ಡ ಸರ್ಕಾರಿ ರಂಗದ ಬ್ಯಾಂಕಿನ ಸೃಷ್ಟಿಯಾಗಲಿದೆವಿಲೀನಗೊಂಡ ಹೊಸ ಬ್ಯಾಂಕ್ ಎರಡನೇ ಅತಿದೊಡ್ಡ ಶಾಖಾ ಜಾಲವನ್ನೂ ಹೊಂದಲಿದೆಪಂಜಾಬ್ ನ್ಯಾಷನಲ್ ಬ್ಯಾಂಕಿನ ’ವಿಶಾಲ ಸಾಮರ್ಥ್ಯ ಮತ್ತು ಒಬಿಸಿಯ ತಂತ್ರಜ್ಞಾನ ಸಾಮರ್ಥ್ಯ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ’ಪ್ರಬಲ ಠೇವಣಿ ಫ್ರಾಂಚೈಸ್ನ್ನು ಬೆಸೆಯುವುದು  ಮೂರು ಪ್ರಬಲ ಬ್ಯಾಂಕುಗಳ ವಿಲೀನದ ಗುರಿಯಾಗಿದೆ ಎಂದು ವಿತ್ತ ಸಚಿವರು ಹೇಳಿದರು.  ದಕ್ಷಿಣ ಭಾರತದ ಕರ್ನಾಟಕದ ಕರಾವಳಿ ಮೂಲದ ಎರಡು ದೊಡ್ಡ ಬ್ಯಾಂಕುಗಳಾದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕುಗಳ ವಿಲೀನವು ಎರಡನೇ ’ಮಹಾವಿಲೀನವಾಗಿದ್ದು ತನ್ಮೂಲಕ ೧೫.೨೦ ಲಕ್ಷ ಕೋಟಿ ರೂಪಾಯಿ ವ್ಯವಹಾರದ ೪ನೇ ದೊಡ್ಡ ಸರ್ಕಾರಿ ರಂಗದ ಬ್ಯಾಂಕಿನ ಸೃಷ್ಟಿಯಾಗಲಿದೆವಿಲೀನಗೊಂಡ  ಬ್ಯಾಂಕ್ ೧೦೩೪೨ ಶಾಖೆಗಳೊಂದಿಗೆ ಭಾರತದಲ್ಲಿ ಮೂರನೇ ದೊಡ್ಡ ಶಾಖಾ ಜಾಲವನ್ನು ಹೊಂದಲಿದೆ ವಿಲೀನದಿಂದ ವೆಚ್ಚವು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಸೀತಾರಾಮನ್ ಅವರು ನುಡಿದರು.  ‘ಉಭಯ ಬ್ಯಾಂಕುಗಳು ಒಂದೇ ಮಾದರಿಯ ಸಂಸ್ಕೃತಿಯನ್ನು ಹೊಂದಿದ್ದುಗ್ರಾಹಕರಿಗೆ ಯಾವುದೇ ತೊಂದರೆರಹಿತವಾದ ಸೇವೆ ಮುಂದುವರೆಯಲಿದೆಉಭಯ ಬ್ಯಾಂಕುಗಳೂ ಹೊಂದಿಕೆಯಗಬಲ್ಲಂತಹ ವಿತ್ತ ತಂತ್ರಜ್ಞಾನವನ್ನು ಹೊಂದಿರುವುದರಿಂದ ತ್ವರಿತವಾಗಿ ಪರಸ್ಪರ ಹೊಂದಿಕೊಳ್ಳಬಲ್ಲವು’ ಎಂದು ಹಣಕಾಸು ಸಚಿವರು ಹೇಳಿದರುಮೂರನೇ ಮಹಾವಿಲೀನದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವನ್ನು ಆಂಧ್ರಬ್ಯಾಂಕ್ ಮತ್ತು ಕರ್ನಾಟಕದ ಕರಾವಳಿ ಮೂಲದ ಕಾರ್ಪೋರೇಷನ್ ಬ್ಯಾಂಕ್ ಜೊತೆಗೆ ವಿಲೀನಗೊಳಿಸಲಾಗುತ್ತಿದೆ ಬ್ಯಾಂಕುಗಳ ವಿಲೀನದಿಂದ ೫ನೇ ದೊಡ್ಡ ಸರ್ಕಾರಿ ರಂಗದ ಬ್ಯಾಂಕಿನ ಸೃಷ್ಟಿಯಾಗಲಿದ್ದುಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎರಡರಷ್ಟು ದೊಡ್ಡ ಗಾತ್ರದ್ದಾಗಲಿದೆವಿಲೀನಗೊಂಡ ಬ್ಯಾಂಕ್ ೧೪. ಲಕ್ಷ ಕೋಟಿ ರೂಪಾಯಿ ವ್ಯವಹಾರವನ್ನು ಹೊಂದಲಿದೆ ಮತ್ತು ೯೬೦೯ ಶಾಖೆಗಳ ಮೂಲಕ ೪ನೇ ದೊಡ್ಡ ಶಾಖಾಜಾಲ ಹೊಂದಿದ ಬ್ಯಾಂಕ್ ಆಗಲಿದೆ.   ನಾಲ್ಕನೇ ಮಹಾವಿಲೀನದಲ್ಲಿಇಂಡಿಯನ್ ಬ್ಯಾಂಕನ್ನು ಅಲಹಾಬಾದ್ ಬ್ಯಾಂಕ್ ಜೊತೆಗೆ ವಿಲೀನಗೊಳಿಸಿ.೦೮ ಲಕ್ಷ ಕೋಟಿ ರೂಪಾಯಿ ವಹಿವಾಟಿನೊಂದಿಗೆ ೭ನೇ ದೊಡ್ಡ ಬ್ಯಾಂಕಿನ ಸೃಷ್ಟಿಯಾಗಲಿದೆದಕ್ಷಿಣಉತ್ತರ ಮತ್ತು ಪೂರ್ವದಲ್ಲಿ ಪ್ರಬಲ ಜಾಲಗಳನ್ನು ಹೊಂದಿರುವುದರಿಂದ  ವಿಲೀನವು ಬ್ಯಾಂಕಿಗೆ ರಾಷ್ಟ್ರವ್ಯಾಪಿ ಅಸ್ತಿತ್ವವನ್ನು ಒದಗಿಸಲಿದೆ.   ಮೂರು ಬ್ಯಾಂಕುಗಳು ಪರಸ್ಪರ ಪೂರಕವಾದ ತಂತ್ರಜ್ಞಾನವನ್ನು ಕೂಡಾ ಹೊಂದಿವೆ ಎಂದು ಸಚಿವೆ ಹೇಳಿದರು.  ಪ್ರಬಲ ರಾಷ್ಟ್ರೀಯ ಅಸ್ತಿತ್ವ ಮತ್ತು ಜಾಗತಿಕ ತಲುಪುವಿಕೆಯ ಗುರಿ: ’ಪ್ರಬಲ ರಾಷ್ಟ್ರೀಯ ಅಸ್ತಿತ್ವ ಮತ್ತು ಜಾಗತಿಕ ತಲುಪುವಿಕೆಯ ಬ್ಯಾಂಕುಗಳ ಮಹಾವಿಲೀನದ ಅತ್ಯಂತ ಪ್ರಮುಖ ಗುರಿಗಳಲ್ಲಿ ಒಂದಾಗಿದೆಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಶೇಕಡಾ ೮೨ರಷ್ಟು ವ್ಯವಹಾರ ಮತ್ತು ಎಲ್ಲ ಬ್ಯಾಂಕ್ ವಹಿವಾಟಿನ ಶೇಕಡಾ ೫೬ರಷ್ಟು ಈಗ  ಮಹಾವಿಲೀನ ಬಳಿಕ ರಚನೆಯಾಗುವ  ಬ್ಯಾಂಕುಗಳಲ್ಲಿ ಇರುತ್ತದೆ’ ಎಂದು ನಿರ್ಮಲಾ ಸೀತಾರಾಮನ್ ನುಡಿದರುಕರ್ನಾಟಕದ ಕರಾವಳಿ ಮೂಲದ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ (ಬಿಒಬಿಜೊತೆಗೆ ವಿಲೀನಗೊಳಿಸುವ ಪ್ರಸ್ತಾವಕ್ಕೆ ಸರ್ಕಾರವು ಕಳೆದ ವರ್ಷ ಅನುಮೋದನೆ ನೀಡಿತ್ತು೨೦೧೭ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಅದರ ಐದು ಅಸೋಸಿಯೇಟ್ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ವಿಲೀನಗೊಂಡಿದ್ದವುಬ್ಯಾಂಕುಗಳ ವಿಲೀನಗಳಿಂದ ಹಲವಾರು ಧನಾತ್ಮಕ ಪರಿಣಾಮಗಳಾಗಿವೆತ್ವರಿತ ಸೇವೆನೌಕರರ  ರಿಟ್ರೆಂಚ್ಮೆಂಟ್  ರದ್ದುಅತ್ಯುತ್ತಮ ಅಭ್ಯಾಸಗಳ ಅಳವಡಿಕೆ ಇತ್ಯಾದಿಗಳು ಸಾಧ್ಯವಾಗಿವೆ ಎಂದು ಸಚಿವೆ ಹೇಳಿದರುವಿಲೀನದ ಬಳಿಕ ಸಿಎಎಸ್  (ಕರೆಂಟ್ ಅಂಡ್ ಸೇವಿಂಗ್ಸ್ ಅಕೌಂಟ್ಶೇಕಡಾ .೯ರಷ್ಟು ಹೆಚ್ಚಿದೆಬಿಡಿ ಸಾಲ ಶೇಕಡಾ ೨೦.೫ರಷ್ಟು ಹೆಚ್ಚಿದೆಲಾಭವೂ ಹೆಚ್ಚಿದೆ ಎಂದು ಸೀತಾರಾಮನ್ ವಿವರಿಸಿದರುಕನಿಷ್ಠ ೩೮ ಮಂದಿ ಮಾರುಕಟ್ಟೆ ವಿಶ್ಲೇಷಕರು ವಿಲೀನಗೊಂಡ ಬ್ಯಾಂಕಿನ ಮಾರುಕಟ್ಟೆ ಬಂಡವಾಳ:ವು ೨೦೨೦ರ ಆಗಸ್ಟ್ ವೇಳೆಗೆ ೫೧,೦೦೦ ಕೋಟಿ ರೂಪಾಯಿಗಳಿಗೆ ಮುಟ್ಟಲಿದೆ ಎಂಬ ಸರ್ವಾನುಮತದ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎಂದು ಸಚಿವರು ನುಡಿದರು.   ‘ನಾವು ಮುಂದಿನ ತಲೆಮಾರಿನ ಬ್ಯಾಂಕುಗಳನ್ನು ಕಟ್ಟಲು ಯತ್ನಿಸುತ್ತಿದ್ದೇವೆ’ ಎಂದು ಸೀತಾರಾಮನ್ ಹೇಳಿದರುಸಾಲ ಮರುವಸೂಲಾತಿಯು ,೨೧,೦೭೬ ಕೋಟಿ ರೂಪಾಯಿಗಳಿಗೆ ಮುಟ್ಟಿದೆಅನುತ್ಪಾದಕ ಆಸ್ತಿ (ಎನ್ ಪಿಎಅಥವಾ ಕೆಟ್ಟ ಸಾಲಗಳು .೬೫ ಲಕ್ಷ ಕೋಟಿ ರೂಪಾಯಿಗಳಿಂದ .೯೦ ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದೆ ಎಂದೂ ಸಚಿವರು  ಸಂದರ್ಭದಲ್ಲಿ ನುಡಿದರುಕರಾವಳಿ ಮೂಲದ ವಿಜಯ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್ ಜೊತೆ ಈ ಹಿಂದೆಯೇ  ವಿಲೀನಗೊಂಡಿತ್ತು.  ವಿಜಯ್ ಬ್ಯಾಂಕ್ ವಿಲೀನದ ಪ್ರಸ್ತಾಪವಾದಾಗ ವಿರೋಧ ವ್ಯಕ್ತವಾಗಿತ್ತುಆದರೆ ಕೊನೆಗೆ ಕರಾವಳಿಯ ಪ್ರತಿಷ್ಠಿತ ಬ್ಯಾಂಕ್ ಎಲ್ಲಾ ವಿರೋಧದ ನಡುವೆಯೂ ವಿಲೀನವಾಗಿತ್ತುಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ಮೂಲವಾಗಿಕರಾವಳಿಯ ನೆಲದಲ್ಲಿ ಜನ್ಮತಳೆದ ಕೆನರಾ ಬ್ಯಾಂಕ್ಸಿಂಡಿಕೇಟ್ ಬ್ಯಾಂಕ್ಕಾರ್ಪೋರೇಶನ್ ಹಾಗೂ ವಿಜಯ್ ಬ್ಯಾಂಕ್ ವಿಲೀನದೊಂದಿಗೆ ತಮ್ಮ ನೂರಾರು ವರ್ಷಗಳ ಇತಿಹಾಸವೂ ಇತಿಹಾಸದ ಪುಟ ಸೇರಲಿದೆಸದ್ಯದ ಸಮಾಧಾನದ ಸಂಗತಿ ಎಂದರೆ ಕರಾವಳಿಯ ಸಿಂಡಿಕೇಟ್ಕೆನರಾ ಬ್ಯಾಂಕ್ ಜತೆ ವಿಲೀನವಾಗಲಿದೆ. ನಾಲ್ಕು ಬ್ಯಾಂಕ್ ಗಳ ಕಿರು ಪರಿಚಯ ಇಲ್ಲಿದೆ ಕೆನರಾ ಬ್ಯಾಂಕ್ ಅಮ್ಮೆಂಬಳ ಸುಬ್ಬಾ ರಾವ್ ಪೈ ಅವರು ಪ್ರತಿ ಮನೆಮನೆಗೆ ಹೋಗಿ ಅಕ್ಕಿಯನ್ನು ಸಂಗ್ರಹಿಸಿಅದನ್ನು ಮಾರಾಟ ಮಾಡಿ ಬಂದ ಹಣ ಸಂಗ್ರಹಿಸುವ ಮೂಲಕ 1906 ಜುಲೈ 1ರಂದು ಕೆನರಾ ಬ್ಯಾಂಕ್ ಹಿಂದೂ ಪರ್ಮನೆಂಟ್ ಫಂಡ್ ಎಂಬುದಾಗಿ ಸ್ಥಾಪನೆ ಮಾಡಿದ್ದರುಹೀಗೆ ನಿಧಾನಕ್ಕೆ ಬೆಳೆಯುತ್ತಾ ಬಂದ ಕೆನರಾ ಬ್ಯಾಂಕ್ ಇದೀಗ ದೇಶಾದ್ಯಂತ 2542 ಶಾಖೆಗಳನ್ನು ಹೊಂದಿದೆಲಂಡನ್ ನಲ್ಲಿಯೂ ಒಂದು ಶಾಖೆ ಇದೆ. 1910ರಲ್ಲಿ ಕೆನರಾ ಬ್ಯಾಂಕ್ ಹೆಸರು ಬದಲಾಗಿತ್ತುಕಾರ್ಪೋರೇಶನ್ ಬ್ಯಾಂಕ್1906ರಲ್ಲಿ ದಾನಿಗಳ ಕೂಟದ ಮುಖ್ಯಸ್ಥರಾಗಿದ್ದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಶಿಂ ಸಾಹೇಬ್ ಬಹದ್ದೂರ್ ಉಡುಪಿಯಲ್ಲಿ  ಕೆನರಾ ಬ್ಯಾಂಕಿಂಗ್ ಕಾರ್ಪೋರೇಶನ್(ಉಡುಪಿಲಿಮಿಟೆಡ್ ಎಂದು ಸ್ಥಾಪಿಸಿದ್ದರು. 1972ರಲ್ಲಿ ಕಾರ್ಪೋರೇಶನ್ ಬ್ಯಾಂಕ್ ಎಂಬುದಾಗಿ ಮರುನಾಮಕರಣಗೊಂಡಿತ್ತು. 1980ರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಆಗಿತ್ತುದೇಶಾದ್ಯಂತ 4,724 ಶಾಖೆಗಳನ್ನು ಹೊಂದಿದೆಗ್ರಾಹಕರ ಅನುಕೂಲಕ್ಕಾಗಿ 3040 ಎಟಿಎಂಗಳನ್ನು ಸ್ಥಾಪಿಸಿತ್ತು. ಸಿಂಡಿಕೇಟ್ ಬ್ಯಾಂಕ್1925ರಲ್ಲಿ ಉಪೇಂದ್ರ ಅನಂತ್ ಪೈವಾಮನ್ ಕುಡ್ವ ಮತ್ತು ಡಾ.ಟಿಎಂಎ ಪೈ ಸೇರಿಕೊಂಡು 8 ಸಾವಿರ ರೂಪಾಯಿ ಅಸಲು ಬಂಡವಾಳದೊಂದಿಗೆ ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ ಸ್ಥಾಪಿಸಿದ್ದರುಅಂದು ಕೈಮಗ್ಗದ ಇಂಡಸ್ಟ್ರೀ ಭಾರೀ ನಷ್ಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ನೇಕಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ  ಬ್ಯಾಂಕ್ ಸ್ಥಾಪಿಸಿದ್ದರು. 1963ರಲ್ಲಿ ಸಿಂಡಿಕೇಟ್ ಬ್ಯಾಂಕ್ ಎಂಬುದಾಗಿ ಮರುನಾಮಕರಣಗೊಂಡಿತ್ತುಪ್ರಸ್ತುತ ದೇಶಾದ್ಯಂತ 2125 ಶಾಖೆಗಳನ್ನು ಹೊಂದಿದೆವಿಜಯ್ ಬ್ಯಾಂಕ್:  ಮಂಗಳೂರಿನ ಎಬಿ ಶೆಟ್ಟಿ ಮತ್ತು ಇತರರು ಸೇರಿಕೊಂಡು 1931ರಲ್ಲಿ ರೈತಾಪಿ ವರ್ಗದ ನೆರವಿನೊಂದಿಗೆ ವಿಜಯ ಬ್ಯಾಂಕ್ ಅನ್ನು ಸ್ಥಾಪಿಸಿದ್ದರು. 1960 ದಶಕದಲ್ಲಿ ಬ್ಯಾಂಕ್ ಮುಲ್ಕಿ ಸುಂದರ್ ರಾಮ್ ಶೆಟ್ಟಿ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗಿತ್ತು. 1980ರಲ್ಲಿ ವಿಜಯ ಬ್ಯಾಂಕ್ ರಾಷ್ಟ್ರೀಕೃತವಾಗಿತ್ತು.

2019: ನವದೆಹಲಿ:  ಭಾರತದ ಆರ್ಥಿಕತೆಯ ವಿಸ್ತರಣೆಯು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಮಂದಗತಿಗೆ ಇಳಿದಿರುವುದನ್ನು ಸರ್ಕಾರಿ ಅಂಕಿಆಂಶಗಳು ತೋರಿಸಿದವು.  ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ೨೦೧೯-೨೦ರ ಹಣಕಾಸು ವರ್ಷದ  ಮೊದಲ ತ್ರೈಮಾಸಿಕದಲ್ಲಿ ಶೇಕಡಾ ೫ಕ್ಕೆ ಇಳಿಯಿತು. ಹಿಂದಿನ ತ್ರೈಮಾಸಿಕದ ಅವಧಿಯಲ್ಲಿ ಭಾರತದ ಜಿಡಿಪಿ ಶೇಕಡಾ .೮ರಷ್ಟು ಇತ್ತು.  ೨೦೧೮ರ ಜೂನ್ ೩೦ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ ೮ರಷ್ಟು ಇತ್ತು.ದೇಶದ ಜಿಡಿಪಿ ಕುಸಿತವು ಐದು ತ್ರೈಮಾಸಿಕಗಳಲ್ಲಿ ನಿರಂತರವಾಗಿ ಮುಂದುವರೆದಿದೆ ಎಂದು ಅಂಕಿ ಅಂಶಗಳು ತಿಳಿಸಿದವು. ಕೇಂದ್ರ ಸಂಖ್ಯಾಶಾಸ್ತ್ರ ಕಚೇರಿ ಇಂದು ಬಿಡುಗಡೆ ಮಾಡಿದ ಭಾರತದ ತ್ರೈಮಾಸಿಕ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆ ಶೇ. 5.08ರಿಂದ ಶೇ. 5ಕ್ಕೆ ಕುಸಿಯಿತು. ಕಳೆದ ತ್ರೈಮಾಸಿಕದ ಜಿಡಿಪಿಗೆ ಹೋಲಿಸಿದರೆ ಶೇ. 0.8ರಷ್ಟು ಜಿಡಿಪಿ ಕುಸಿತಗೊಂಡಿತು. ಇತ್ತೀಚಿನ ಕೆಲವು ತಿಂಗಳುಗಳಿಂದ ದೇಶದ ಒಟ್ಟು ಉತ್ಪಾದನಾ ವಲಯ ಕುಸಿತದತ್ತ ಸಾಗಿದೆಉತ್ಪನ್ನಗಳು ಬೇಡಿಕೆ ಕಳೆದುಕೊಂಡಿರುವ ಕಾರಣ ಮಾರುಕಟ್ಟೆ ವಲಯ ಹಿಡಿತ ಕಳೆದುಕೊಂಡಿದೆಹಲವು ಪ್ರಮುಖ ಉದ್ಯಮ ಸಂಸ್ಥೆಗಳು ತನ್ನ ಉತ್ಪಾದನೆಯ ಪ್ರಮಾಣವನ್ನು ಕಡಿಗೊಳಿಸಿದ್ದುಇದು ಉದ್ಯೋಗ ಕ್ಷೇತ್ರದತ್ತ ಪರಿಣಾಮ ಬೀರಿದೆ ಜಿಡಿಪಿ ಕುಸಿತಕ್ಕೆ ಉತ್ಪಾದನಾ ವಲಯ ಮತ್ತು ಖಾಸಗಿ ವಲಯದ ನಷ್ಟ ಕಾರಣವಾಗಿದೆಕಳೆದ ವರ್ಷ  ಅವಧಿಯಲ್ಲಿ ಜಿಡಿಪಿ ಶೇ. 7.8ರಷ್ಟಿತ್ತುಇದು 7 ವರ್ಷಗಳ ಅತ್ಯಂತ ಕಳಪೆ ಜಿಡಿಪಿಯಾಗಿದೆಸೂಚನೆ ಇತ್ತು. ಭಾರತದ ಜಿಡಿಪಿ ಕುಸಿತಗೊಳ್ಳುತ್ತಿರುವುದರ ಸೂಚನೆಯನ್ನು ಈಗಾಗಲೇ ಹಲವು ಸಂಸ್ಥೆಗಳು ನೀಡಿದ್ದವುಕುಸಿತದತ್ತ ಮುಖ ಮಾಡುತ್ತಿರುವ ಜಿಡಿಪಿಯನ್ನು ಉತ್ತಮ ಪಡಿಸಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದುಯಾವುದೂ ಫಲಕೊಡಲಿಲ್ಲ. 7 ವರ್ಷಗಳ  ಕಳೆಪೆ ಪ್ರಮಾಣದ ಜಿಡಿಪಿ ಕುಸಿತ ಕೆಂದ್ರ ಸರಕಾರಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿತು.
2019: ಬೆಂಗಳೂರು: ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ  

ಜಾರಿಗೊಳಿಸಿದ್ದ ಸಮನ್ಸ್ ರದ್ದು ಪಡಿಸಲು ನಿರಾಕರಿಸಿದ ಬಳಿಕಜಾರಿ ನಿರ್ದೇಶನಾಲಯವು (ಇಡಿತಮ್ಮನ್ನು ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ಕೋರಿ ಮಾಜಿ ಸಚಿವ ಡಿ.ಕೆಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೂಡಾ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತು. ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಬಳಿಕ ಶಿವಕುಮಾರ್ ಅವರು ದೆಹಲಿಗೆ ತೆರಳಿಜಾರಿ ನಿರ್ದೇಶನಾಲಯ ಕೇಂದ್ರ ಕಚೇರಿಗೆ ತೆರಳಿದ್ದುಅಧಿಕಾರಿಗಳು ಅವರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿದವು. ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದು ಕೋರಿ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರುಆದರೆ ಪ್ರಕರಣ ತನಿಖೆಗೆ ಯೋಗ್ಯವಾಗಿದೆ ಎಂದು ಹೇಳಿಅವರ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ತಿರಸ್ಕರಿಸಿದ್ದರುಇದರಿಂದಾಗಿ ಬಂಧನ ಭೀತಿಗೆ ಒಳಗಾದ ಶಿವಕುಮಾರ್ ಅವರು ತಮ್ಮನ್ನು ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ಕೋರಿ ಈದಿನ ಅರ್ಜಿ ಸಲ್ಲಿಸಿದ್ದರುನ್ಯಾಯಾಲಯದಲಿ ಶಿವಕುಮಾರ್ ಪರವಾಗಿ ವಾದ ಆರಂಭಿಸಿದ ಬಿವಿ ಆಚಾರ್ಯನಾವು ನಿರೀಕ್ಷಣಾ ಜಾಮೀನನ್ನು ಕೇಳುತ್ತಿಲ್ಲಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್  ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿದೆಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುತ್ತೇವೆಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವವರೆಗೆ ಜಾರಿ ನಿರ್ದೇಶನಾಲಯವು ಡಿಕೆ ಶಿವಕುಮಾರ್ ಅವರನ್ನು ಬಂಧಿಸದಂತೆ ಆದೇಶ ಕೊಡಿ’ ಎಂದು ಮನವಿ ಮಾಡಿದರುಇದಕ್ಕೆ ಪ್ರತಿಕ್ರಿಯಿಸಿದ ಜಾರಿ ನಿರ್ದೇಶನಾಲಯ ಪರ ವಕೀಲರುಕಳೆದ ಒಂಭತ್ತು ತಿಂಗಳಿಂದ ಇದೇ ನಡೆಯುತ್ತಿದೆವಿಚಾರಣೆ ಅಂದ ಮಾತ್ರಕ್ಕೆ ಬಂಧಿಸುತ್ತಾರೆ ಎಂದಲ್ಲಬಂಧಿಸುವುದು ಬಿಡುವುದು ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದು ಹೇಳಿದರುಇದಕ್ಕೆ ಪ್ರತಿಯಾಗಿ ವಾದಿಸಿದ ಬಿವಿ ಆಚಾರ್ಯಈದಿನ  ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲಸೆಪ್ಟೆಂಬರ್  ಅಥವಾ ೬ನೇ ತಾರೀಕಿಗೆ ದಿನಾಂಕ ನಿಗದಿ ಮಾಡುವಂತೆ ನಿರ್ದೇಶಿಸಿ ಎಂದು ಮನವಿ ಮಾಡಿದರು.  ನ್ಯಾಯಮೂರ್ತಿಗಳುಇಂದೇ ಮೇಲ್ಮನವಿ ಅರ್ಜಿ ಸಲ್ಲಿಸಬಹುದಲ್ಲನಾಳೆಯವರೆಗೂ ಕಾಯುವ ಅಗತ್ಯವೇನುನಾಳೆ ವಿಚಾರಣೆಗೆ ಹಾಜರಾಗುತ್ತೀರಾಎಂದು ಪ್ರಶ್ನಿಸಿದರುಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸದಿದ್ದರೆ ವಿಚಾರಣೆಗೆ ಡಿಕೆ ಶಿವಕುಮಾರ್ ಹಾಜರಾಗುತ್ತಾರೆ ಎಂದು ಬಿವಿ ಆಚಾರ್ಯ ಉತ್ತರಿಸಿದರುವಾದ ಪ್ರತಿವಾದಗಳ ನಂತರ ಹೈಕೋರ್ಟ್ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತುಅಪರಾಧ ದಂಡ ಸಂಹಿತೆಯ (ಸಿಆರ್ಪಿಸಿಸೆಕ್ಷನ್ ೪೮೨ರ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆಆ. 29ರ ಗುರುವಾರ  ಕಾಯಿದೆಯ ಅಡಿಯಲ್ಲೇ ಅರ್ಜಿಯನ್ನು ವಜಾಗೊಳಿಸಲಾಗಿತ್ತುಹಿಂದಿನ ಆದೇಶಕ್ಕೆ ತಿದ್ದುಪಡಿ ತರಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸುತ್ತಾ ಹೈಕೋರ್ಟ್ ತಿಳಿಸಿತು.

2019: ನವದೆಹಲಿ: ಸಾಗರಗಳು ಶತ ಶತಮಾನಗಳಿಂದ ಮಾನವ ನಾಗರಿಕತೆಯ ವಿಕಸನವನ್ನು
ಪೋಷಿಸುತ್ತಾ ಬಂದಿವೆಆದರೆಸಾಗರ ಪರಿಸರವನ್ನು ಅಸ್ಥಿರಗೊಳಿಸುತ್ತಿರುವ ಇಂಗಾಲ (ಕಾರ್ಬನ್ಮಾಲಿನ್ಯವನ್ನು ನಿವಾರಿಸಲು ಕ್ರಮ ಕೈಗೊಳ್ಳದೇ ಹೋದಲ್ಲಿ ಇದೇ ಸಾಗರಗಳು ಜಾಗತಿಕ ಮಟ್ಟದಲ್ಲಿ ಮಾನವನಿಗೆ ಸಂಕಷ್ಟಗಳ ಸರಮಾಲೆಯನ್ನೇ  ತಂದೊಡ್ಡಲಿವೆ ಎಂದು ವಿಶ್ವಸಂಸ್ಥೆಯ ಕರಡು ವರದಿಯೊಂದು ಎಚ್ಚರಿಕೆ ನೀಡಿತು. ಇಂಗಾಲ ಮಾಲಿನ್ಯ ಪರಿಣಾಮವಾಗಿ ವಿನಾಶಕಾರೀ ಬದಲಾವಣೆಗಳು ಈಗಾಗಲೇ ಸಮುದ್ರಗಳಲ್ಲಿ ಕಾಣರಂಭಿಸಿವೆಮೀನುಗಳ ಸಂತತಿ ಭಾರೀ ಪ್ರಮಾಣದಲ್ಲಿ ನಶಿಸುತ್ತಿದೆಇದಕ್ಕಿಂತಲೂ ನೂರಾರು ಪಟ್ಟು ಅಥವಾ ಅದಕ್ಕೂ ಹೆಚ್ಚಿನ ಹಾನಿ ಮಹಾ ಬಿರುಗಾಳಿಗಳಿಂದ ಉಂಟಾಗಲಿದೆ ಮತ್ತು ನೂರಾರು ದಶಕಲಕ್ಷ ಜನರು ಸಮುದ್ರದ ಮಟ್ಟ ಏರಿಕೆಯ ಪರಿಣಾಮವಾಗಿ ನಿರ್ಗತಿಕರಾಗಲಿದ್ದಾರೆ ಎಂದು ಹವಾಮಾನ ಬದಲಾವಣೆ ಕುರಿತ ಅಂತರ್ - ಸರ್ಕಾರಿ ಸಮಿತಿಯ (ಐಪಿಸಿಸಿವರದಿ ಹೇಳಿತು. ಕ್ರಯೋಸ್ಪಿಯರ್ ಎಂಬುದಾಗಿ ಪರಿಚಿತವಾಗಿರುವ ಭೂಮಿಯ ಘನೀಕೃತ ವಲಯಗಳು ಮತ್ತು ಸಾಗರಗಳ ಬಗೆಗಿನ ವರದಿಯನ್ನು  ಸಮಿತಿಯು ತಯಾರಿಸಿತ್ತು. ಕೋಟ್ಯಂತರ ಟನ್ಗಳಷ್ಟು ಕಾರ್ಬನ್ ಬಿಡುಗಡೆಗೊಂಡು ಜಾಗತಿಕ ತಾಪಮಾನ ಹಲವಾರು ಪಟ್ಟು ಹೆಚ್ವುವ ಪರಿಣಾಮವಾಗಿ ಉತ್ತರ ಭೂಗೋಳಾರ್ಧದ ಮೇಲ್ಮೈ ಭೂಪದರದ ಶೇಕಡಾ ೩೦ರಷ್ಟು ಭಾಗ  ಶತಮಾನಾಂತ್ಯದ ವೇಳೆಗೆ ಕರಗಲಿದೆ ಎಂದು ವರದಿ ಹೇಳಿತು. ನಾಲ್ಕು ಬೃಹತ್ ಪ್ರದೇಶಗಳಿಗೆ ಸಂಕಷ್ಟಹದಗೆಡುತ್ತಿರುವ ಸಾಗರ ಮತ್ತು ಹಿಮಗಡ್ಡೆ ಕರಗುವಿಕೆಯ ಭೀಕರ ಪರಿಣಾಮಗಳು ವಿಶ್ವದ ನಾಲ್ಕು ಬೃಹತ್ ಭೂಪ್ರದೇಶಗಳಾದ ಚೀನಾಅಮೆರಿಕಯುರೋಪ್ ಭಾರತದ ಮೇಲೆ ಆಗಲಿದೆಆದರೆ  ಪ್ರದೇಶಗಳ ಪೈಕಿ ಯಾವುದೇ ಪ್ರದೇಶವೂ ಇಂಗಾಲದ ಮಾಲಿನ್ಯವನ್ನು ತಡೆಗಟುವ ಮಹತ್ವಾಕಾಂಕ್ಷಿ ಗುರಿಗಳೊಂದಿಗೆ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತಿಲ್ಲ ಎಂದು ವರದಿ ತಿಳಿಸಿತು. ಪಳೆಯುಳಿಕೆ ಆಧಾರಿತ ಮಾಲಿನ್ಯ ಹೊರಸೂಸುವಿಕೆಯ ಶೇಕಡಾ ೬೦ರಷ್ಟು  ಪ್ರದೇಶಗಳಲ್ಲೇ ಆಗುತ್ತಿದೆ ಎಂದು ವರದಿ ತಿಳಿಸಿತು. ವರದಿಯ ಪ್ರಕಾರ ಭಾರತದಲ್ಲಿ ಪ್ರಮುಖ ಕರಾವಳಿ ನಗರಗಳಾದ ಮುಂಬೈ ಚೆನ್ನೈ ಮತ್ತು ಕೋಚಿ ಸಮುದ್ರ ಮಟ್ಟ ಏರಿಕೆಯಿಂದ ಆಗುವ ಬೀಕರ ಪರಿಣಾಮಗಳಿಗೆ ತುತ್ತಾಗಲಿದೆಚೀನಾದಲ್ಲಿ ಶಾಂಘಾಯಿನಿಂಗ್ಬೊಟೈಝ್ಸೊವು ಮತ್ತು ಇತರ ಆರು ಪ್ರಮುಖ ಕರಾವಳಿ ನಗರಗಳು ಅಪಾರ ಹಾನಿಗೆ ತುತ್ತಾಗಲಿದೆ ಎಂದು ವರದಿ ಹೇಳಿತು. ಅಮೆರಿಕದಲ್ಲಿ ನ್ಯೂಯಾರ್ಕ್ಮಿಯಾಮಿ ಮತ್ತು ಇತರ ನಗರಗಳುಯುರೋಪಿನಲ್ಲಿ ಆಮ್ಸ್ಟರ್ಡಾಮ್ವೆನಿಸ್ಹ್ಯಾಂಬರ್ಗ್ ಇತ್ಯಾದಿ ನಗರಗಳು ಸಮುದ್ರ ಮಟ್ಟ ಏರಿಕೆಯ ತತ್ ಕ್ಷಣದ ಅಪಾಯವನ್ನು ಎದುರಿಸಲಿವೆವರದಿಯ ಪ್ರಕಾರ ೨೦೫೦ರಿಂದ ವೇಳೆಗೆ ತಗ್ಗು ಪ್ರದೇಶಗಳ ಮಹಾನಗರಗಳು ಮತ್ತು ಸಣ್ಣ ದ್ವೀಪರಾಷ್ಟ್ರಗಳು ಪ್ರತಿವರ್ಷವೂ ಸಮುದ್ರ ಪ್ರಕೋಪವನ್ನು ಕಾಣಲಿವೆ೨೧೦೦ರ ವೇಳೆಗೆ ಪ್ರವಾಹ ಹಾನಿಗಳು ೧೦೦ರಿಂದ ೧೦೦೦ ಪಟ್ಟಿನಷ್ಟು ಹೆಚ್ಚಲಿವೆ,೫೦,೦೦೦ ಮಂದಿ ಸಮುದ್ರ ಮಟ್ಟ ಏರಿಕೆಯ ಪರಿಣಾಮವಾಗಿ ನಿಂತ ನೆಲ ಕಳೆದುಕೊಂಡು ನಿರ್ಗತಿಕರಾಗುವ ನಿರೀಕ್ಷೆ ಇದೆ.. ’ಈಗಿನ ದಿನಗಳಲ್ಲಿ ಸಣ್ಣ ಮಟ್ಟದ ವಲಸೆಗಳಿಂದ ಉಂಟಾಗುತ್ತಿರುವ ರಾಜಕೀಯ ಅಸ್ಥಿರತೆಯನ್ನುತಾವು ನೆಲೆಸಿರುವ ನೆಲವನ್ನೇ ಸಮುದ್ರ ನುಂಗುವ ಕಾರಣಕ್ಕಾಗಿ ಲಕ್ಷಾಂತರ ಮಂದಿ ವಲಸೆ ಹೋಗಬೇಕಾದ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡಿಆಗ ನಿಮಗೆ ಪರಿಸ್ಥಿತಿಯ ಅಗಾಧತೆಯ ಅರಿವಾಗುತ್ತದೆ’ ಎಂದು ಅಮೆರಿಕದ ಸಂಶೋಧನಾ ತಂಡ ಕ್ಲೈಮೇಟ್ ಸೆಂಟ್ರಲ್ ಸಿಇಒ ಮತ್ತು ಮುಖ್ಯ ವಿಜ್ಞಾನಿ ಬೆನ್ ಸ್ಟ್ರ್ರೌಸ್ ಹೇಳಿದರುಸಾಗರಗಳು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ನಿವಾರಿಸಲು ಸ್ಪಂಜಿನ ರೀತಿ ಕೆಲಸ ಮಾಡುತ್ತವೆ೧೯೭೦ರಿಂದ ಹಸಿರುಮನೆಗಳು ಸೃಷ್ಟಿಸುತ್ತಿರುವ ಶೇಕಡಾ ೯೦ರಷ್ಟು ತಾಪವನ್ನು ಸಾಗರಗಳು ಹೀರಿಕೊಳ್ಳುತ್ತಿವೆಆದರೆ ಭೂಮಿಯ ಮೇಲ್ಮೈಯಲ್ಲಿ ಅತಿಯಾದ ತಾಪ ಸೃಷ್ಟಿಯ ಪರಿಣಾಮವಾಗಿ ಸಾಗರಗಳಿಗೆ ಸ್ಪಂಜಿನಂತೆ ನಿರ್ವಹಿಸುವ  ಕೆಲಸವನ್ನು ಮಾಡಲು ಆಗುತ್ತಿಲ್ಲಆಮ್ಲೀಕರಣವು (ಆಸಿಡೈಫಿಕೇಷನ್ಸಾಗರಗಳ ಮೂಲ ಆಹಾರ ಸರಪಣಿಯನ್ನೇ ಹಾಳುಗೆಡಹುತ್ತಿವೆಸಮುದ್ರದ ಮೇಲಿನ ಬಿಸಿಗಾಳಿಗಳು ಆಮ್ಲಜನಕ ರಹಿತವಾದ ’ಮೃತ ವಲಯಗಳನ್ನು’ (ಡೆಡ್ ಝೋನ್ಸ್ನಿರ್ಮಾಣ ಮಾಡುತ್ತಿವೆ ಎಂದು ವರದಿ ತಿಳಿಸಿತು.

No comments:

Advertisement