My Blog List

Monday, September 12, 2022

ಜ್ಞಾನವ್ಯಾಪಿ ಮಸೀದಿ: ಹಿಂದೂ ಪೂಜಾ ಕೋರಿಕೆ ಹಕ್ಕು ಎತ್ತಿ ಹಿಡಿದ ಕೋರ್ಟ್‌

 ಜ್ಞಾನವ್ಯಾಪಿ ಮಸೀದಿ: ಹಿಂದೂ ಪೂಜಾ ಕೋರಿಕೆ ಹಕ್ಕು ಎತ್ತಿ ಹಿಡಿದ ಕೋರ್ಟ್‌

ವಾರಾಣಸಿ: ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಮುಸ್ಲಿಂ ಕಡೆಯ ಅರ್ಜಿಯನ್ನು 2022 ಸೆಪ್ಟೆಂಬರ್‌ 12 ರ ಸೋಮವಾರ ತಿರಸ್ಕರಿಸಿತು. ಇದರೊಂದಿಗೆ ಹಿಂದೂಗಳಿಗೆ ದೊಡ್ಡ ಗೆಲುವು ಪ್ರಾಪ್ತಿಯಾಯಿತು. ಜ್ಞಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಪತ್ತೆಯಾಗಿವೆ ಎನ್ನಲಾಗಿರುವ ಹಿಂದೂ ದೇವತಾ ವಿಗ್ರಹಗಳಿಗೆ ದೈನಂದಿನ  ಪೂಜೆಗೆ ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು.

ʼಪೂಜೆಗೆ ಅವಕಾಶ ಕೋರಿ ಹಿಂದೂಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹವಾಗಿದೆ’ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ವಿಶ್ವಾಸ್ ತೀರ್ಪು ನೀಡಿದರು.

ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಜ್ಞಾನವಾಪಿ ಮಸೀದಿಯು ವಕ್ಫ್ ಆಸ್ತಿಯಾಗಿದೆ ಎಂದು ಹೇಳಿತ್ತು ಮತ್ತು ಹಿಂದೂ ಮಹಿಳೆಯರ ಪೂಜಾ ಕೋರಿಕೆ ಮನವಿಯನ್ನು ವಿಚಾರಣೆಗೆ ಸೀಕರಿಸುವುದನ್ನು ವಿರೋಧಿಸಿತ್ತು.

ಕೋಮು ಸೂಕ್ಷ್ಮ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೇ ಎಂಬ ಬಗ್ಗೆ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕಳೆದ ತಿಂಗಳು ವಿಚಾರಣೆಯನ್ನು ಪೂರ್ಣಗೊಳಿಸಿ, ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು. ಆರಾಧನೆಗೆ ಅನುಮತಿ ಕೋರಿದ ಅರ್ಜಿಯ ಯ ಕುರಿತು ನ್ಯಾಯಾಲಯದಲ್ಲಿ ವಿಚಾರಣೆಯು ಸಮರ್ಥನೀಯವಾಗಿದೆಯೇ ಮತ್ತು ಅರ್ಜಿಯು ಸಮರ್ಥನೀಯ ಆಧಾರದ ಮೇಲೆ ಇದೆಯೇ ಎಂಬುದರ ಕುರಿತು ಅವರು ನಿರ್ಧಾರವನ್ನು ನೀಡಿದ್ದು, ಮುಂದಿನ ವಿಚಾರಣೆಗೆ ಸೆಪ್ಟೆಂಬರ್‌ 22ರ ದಿನಾಂಕವನ್ನು ನಿಗದಿ ಪಡಿಸಿದರು.

ತೀರ್ಪು ತಮ್ಮ ಪರವಾಗಿ ಬಂದರೆ ಭಾರತೀಯ ಪುರಾತತ್ವ ಸಮೀಕ್ಷೆಯ (ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ/ಎಎಸ್‌ಐ) ಮೂಲಕ ಮಸೀದಿಯ ಒಳಭಾಗದಲ್ಲಿ ಪತ್ತೆಯಾಗಿರುವ  'ಶಿವಲಿಂಗ್' ನ ಕಾರ್ಬನ್ ಡೇಟಿಂಗ್‌ಗೆ ಪ್ರಯತ್ನಿಸುತ್ತೇವೆ ಎಂದು ಹಿಂದೂ ಕಕ್ಷಿದಾರರು ತೀರ್ಪಿಗೆ ಮುನ್ನ ಹೇಳಿದ್ದರು.

No comments:

Advertisement