Friday, September 9, 2022

ಇಂದಿನ ಇತಿಹಾಸ History Today ಸೆಪ್ಟೆಂಬರ್ 09

ಇಂದಿನ ಇತಿಹಾಸ History Today ಸೆಪ್ಟೆಂಬರ್‌ 09

2022: ಲಂಡನ್‌:  ಬ್ರಿಟಿಷ್‌ ಇತಿಹಾಸದಲ್ಲಿ ಸುದೀರ್ಘಕಾಲ ರಾಣಿಯಾಗಿದ್ದ ಇಂಗ್ಲೆಂಡಿನ ರಾಣಿ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ 2022 ಸೆಪ್ಟೆಂಬರ್‌ 08 ಗುರುವಾರ ಮಧ್ಯಾಹ್ನ ನಿಧನರಾದರು. ಬಂಕಿಂಗ್‌ಹ್ಯಾಮ್‌ ಅರಮನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿ, ರಾಣಿಯ ಗೌರವಾರ್ಥ ಬ್ರಿಟನನಿನಲ್ಲಿ 10 ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿತು. ರಾಣಿಯ ಪಾರ್ಥಿವ ಶರೀರವನ್ನು ಬಾಲ್‌ಮೊರಲ್‌ ಎಸ್ಟೇಟ್‌ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‌ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆ ತಿಳಿಸಿತು. ರಾಣಿಗೆ ನಾಲ್ವರು ಮಕ್ಕಳು. ಹಿರಿಯ ಮಗ, ವೇಲ್ಸ್‌ನ ರಾಜಕುಮಾರ, 73 ವರ್ಷದ ಚಾರ್ಲ್ಸ್‌ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು ಎಂದು ಹೇಳಿಕೆ ತಿಳಿಸಿತು. ಗುರುವಾರ ಸಂಜೆ ರಾಣಿಯ ಆರೋಗ್ಯ ಸ್ವಲ್ಪಮಟ್ಟಿಗೆ ಹದಗೆಟ್ಟಿತ್ತು. ವೈದ್ಯರ ನಿಗಾದಲ್ಲಿಯೇ ಇರಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದರು. ರಾಣಿಯ ಮಕ್ಕಳಾದ ಚಾರ್ಲ್ಸ್‌, ರಾಜಕುಮಾರಿ 72 ವರ್ಷದ ಆ್ಯನೆ, ರಾಜಕುಮಾರರಾದ 62 ವರ್ಷದ ಆಂಡ್ರ್ಯೂ ಮತ್ತು 58 ವರ್ಷದ ಎಡ್ವರ್ಡ್‌ ಅವರು ಬಾಲ್‌ಮೊರಲ್‌ನಲ್ಲಿರುವ ರಾಣಿಯ ಎಸ್ಟೇಟ್‌ಗೆ ಧಾವಿಸಿದರು. ರಾಣಿಯಾಗಿ ಅವರು ಬುಧವಾರವಷ್ಟೇ ಬ್ರಿಟನ್‌ನ 15ನೇ ಪ್ರಧಾನಿಯಾಗಿ ಲಿಜ್‌ ಟ್ರಸ್‌ ಅವರನ್ನು ನೇಮಕಮಾಡಿದ್ದರು. ರಾಣಿ ಎರಡನೇ ಎಲಿಜಬೆತ್‌ ಶಿಸ್ತು ಹಾಗೂ ಆಕರ್ಷಕ, ವಿಶಿಷ್ಟ ವಿನ್ಯಾಸದ ಉಡುಪುಗಳಿಂದ ಗಮನ ಸೆಳೆಯುತ್ತಿದ್ದರು. 1952ರಲ್ಲಿ ರಾಣಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರ ವಯಸ್ಸು 25. ರಾಣಿಯಾಗಿ ಸಕ್ರಿಯ, ಚುರುಕಿನಿಂದ ಕಾರ್ಯನಿರ್ವಹಿಸಿದ್ದ ಅವರು ಬಹುತೇಕ ವಾರ್ಷಿಕ ಸರಾಸರಿ 300 ಸಾರ್ವಜನಿಕ ಸಭೆಗೆ ಹಾಜರಾಗಿದ್ದರು. ಕೋಟು, ಟೋಪಿ ಅವರ ಹೆಗ್ಗುರುತಿನ ಧಿರಿಸಾಗಿತ್ತು. ಉಡುಪಿನ ವಿನ್ಯಾಸಕ್ಕೆ ವಿಶೇಷ ಗಮನ ನೀಡುತ್ತಿದ್ದ ಅವರು, ‘ವಿಭಿನ್ನ ಉಡುಪು ಧರಿಸುವುದು ನನ್ನ ಜನರಿಗಾಗಿಯಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ಕೂಡಾ’ ಎಂದು ಹೇಳಿದ್ದರು. ಮಾಧ್ಯಮಗಳ ಎದುರು ಬರುವಾಗ ಝಗಮಗಿಸುವ, ಆಕರ್ಷಕ ಉಡುಪು ಧರಿವುದನ್ನು ಮರೆಯುತ್ತಿರಲಿಲ್ಲ. ಸಮೂಹದಲ್ಲಿ ಪ್ರತ್ಯೇಕವಾಗಿಯೇ ಕಾಣಲು ಬಯಸುತ್ತಿದ್ದರು. ಸುದೀರ್ಘ ಕಾಲ ರಾಣಿಯಾಗಿದ್ದು, ಯಾವುದೇ ದೇಶದ ಆಡಳಿತದಲ್ಲಿ 70 ವರ್ಷ ಆಡಳಿತ ವ್ಯವಸ್ಥೆಯ ಮುಖ್ಯಸ್ಥೆಯಾಗಿ ಅಧಿಕಾರದಲ್ಲಿದ್ದುದು ಒಂದು ದಾಖಲೆಯಾಗಿ ಇತಿಹಾಸದ ಪುಟ ಸೇರಿತು. ಮೂರು ಬಾರಿ (1961, 1983, 1997) ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಬಗ್ಗೆ ಅಭಿಮಾನ ಹೊಂದಿದ್ದ ಅವರು, ‘ಭಾರತೀಯರ ಪ್ರೀತಿ, ಆತಿಥ್ಯ ಮತ್ತು ಈ  ದೇಶದ ಸಂಸ್ಕೃತಿ, ಶ್ರೀಮಂತಿಕೆ ಮತ್ತು ವೈವಿಧ್ಯ ಎಲ್ಲರಿಗೂ ಪ್ರೇರಣೆ’ ಎಂದು ಶ್ಲಾಘಿಸಿದ್ದರು. 1961ರಲ್ಲಿ ಪತಿ, ದಿವಂಗತ ಫಿಲಿಪ್, ಡ್ಯೂಕ್ ಆಫ್ ಎಡಿನ್ ಬರ್ಗ್ ಅವರೊಂದಿಗೆ ಮುಂಬೈ, ಚೆನ್ನೈ, ಕೋಲ್ಕತ್ತಗೆ ಪ್ರವಾಸ ಮಾಡಿದ್ದರು. ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿ ಸಂಭ್ರಮಿಸಿದ್ದರು. ರಾಜ್‌ಘಾಟ್‌ಗೆ ತೆರಳಿ ಮಹಾತ್ಮಗಾಂಧಿ ಅವರಿಗೆ ಗೌರವ ಸಲ್ಲಿಸಿದ್ದರು. ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿದ್ದರು. ಆಗಲೇ ರಾಮ್‌ಲೀಲಾ ಮೈದಾನದಲ್ಲಿ ಅಸಂಖ್ಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. 1919ರಲ್ಲಿ ನಡೆದಿದ್ದ ಜಲಿಯನ್‌ ವಾಲಾಬಾಗ್ ಹತ್ಯಾಕಾಂಡವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ‘ನಮ್ಮ ಇತಿಹಾಸ ಹಲವು ಕ್ಲಿಷ್ಟ ಅಧ್ಯಾಯಗಳನ್ನು ಒಳಗೊಂಡಿದೆ ಎಂಬುದು ರಹಸ್ಯವೇನೂ ಅಲ್ಲ’ ಎಂದಿದ್ದರು. ಬ್ರಿಟಿಷ್‌ ಜನರಲ್ ಅವರ ಆದೇಶದ ಮೇರೆಗೆ ನಡೆದಿದ್ದ ಹತ್ಯಾಕಾಂಡಕ್ಕಾಗಿ ರಾಣಿ ಕ್ಷಮೆ ಕೋರಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈ ಬೇಡಿಕೆ ನಡುವೆಯೂ ಅಮೃತಸರದಲ್ಲಿ ಜಲಿಯನ್‌ವಾಲಾಬಾಗ್‌ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದರು. 1983ರಲ್ಲಿ ಅವರ ಭೇಟಿ ಕಾಮನ್‌ವೆಲ್ತ್  ಸರ್ಕಾರದ ಮುಖ್ಯಸ್ಥರ ಸಭೆ (ಸಿಎಚ್‌ಒಜಿಎಂ) ಆಗಿತ್ತು. ಮದರ್ ತೆರೇಸಾ ಅವರಿಗೆ ಗೌರವಾನ್ವಿತ ‘ಆರ್ಡರ್ ಆಫ್ ದಿ ಮೆರಿಟ್’ ನೀಡಿದರು. ಭಾರತದ ಸ್ವಾತಂತ್ರ್ಯದ 50ನೇ ವಾರ್ಷಿಕೋತ್ಸವದ ಆಚರಣೆ ಸಂದರ್ಭದಲ್ಲಿ ನೀಡಿದ್ದೇ ಭಾರತಕ್ಕೆ ಅವರ ಅಂತಿಮ ಭೇಟಿಯಾಗಿತ್ತು. ಮೊದಲ ಬಾರಿಗೆ ಅವರು ವಸಾಹತುಶಾಹಿ ಇತಿಹಾಸದ ಕಷ್ಟದ ಘಟನೆಗಳನ್ನು ಉಲ್ಲೇಖಿಸಿದ್ದರು. ಬ್ರಿಟನ್ ರಾಣಿ ಅವರು ಭಾರತದ  ರಾಷ್ಟ್ರಪತಿಗಳಾಗಿದ್ದ ಡಾ.ರಾಧಾಕೃಷ್ಣನ್ (1963), ಆರ್.ವೆಂಕಟರಾಮನ್ (1999), ಪ್ರತಿಭಾ ಪಾಟೀಲ್ (2009) ಅವರಿಗೆ ಅರಮನೆಗೆ ಆಹ್ವಾನಿಸಿ ಆತಿಥ್ಯ ನೀಡಿದ್ದರು.  


2019: ಭುವನೇಶ್ವರ(ಮಲ್ಕಾನ್ ಗಿರಿ):ವಿಮಾನದ ಪೈಲಟ್ ಆಗಬೇಕೆಂಬ ಕನಸನ್ನು ಕೊನೆಗೂ ಒಡಿಶಾದ ಬುಡಕಟ್ಟು ಯುವತಿ ನನಸಾಗಿಸಿಕೊಂಡಳು. ಇದರೊಂದಿಗೆ ಮಾವೋವಾದಿ ಬಾಹುಳ್ಯದ ಮಲ್ಕಾನ್ ಗಿರಿ ಜಿಲ್ಲೆಯ ಕುಗ್ರಾಮದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಬಿಟ್ಟು, 2012ರಲ್ಲಿ ಏವಿಯೇಷನ್ ಅಕಾಡೆಮಿಗೆ ಅನುಪ್ರಿಯಾ ಲಾರ್ಕಾ ಸೇರಿಕೊಂಡಿದ್ದರುಏಳು ವರ್ಷಗಳ ಬಳಿಕ 23 ಹರೆಯದ ಅನುಪ್ರಿಯಾ ಅವರ ಪೈಲಟ್ ಆಗಬೇಕೆಂಬ ಕನಸು ನನಸಾಯಿತು. ಒಡಿಶಾದ ಬುಡಕಟ್ಟು ಬಾಹುಳ್ಯದ ಜಿಲ್ಲೆಯ ನಿವಾಸಿಯಾಗಿರುವ ಅನುಪ್ರಿಯಾ ಈಗ ಖಾಸಗಿ ವಿಮಾನದಲ್ಲಿ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದಾರೆಪೈಲಟ್ ಆಗಬೇಕೆಂಬ ಕನಸನ್ನು ನನಸಾಗಿಸಿಕೊಂಡ ಲಾರ್ಕಾ ಅವರನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಭಿನಂದಿಸಿದ್ದಾರೆಅಲ್ಲದೇ ಅನುಪ್ರಿಯಾ ಇತರರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

2019: ಬೆಂಗಳೂರು: ಚಂದ್ರನ ಅಂಗಳದಲ್ಲಿ ಪತ್ತೆಯಾಗಿರುವ ವಿಕ್ರಮ್ ಲ್ಯಾಂಡರ್ ಸ್ವಲ್ಪ ಓರೆಯಾದ ಸ್ಥಿತಿಯಲ್ಲಿ ಇರುವುದು ಬೆಳಕಿಗೆ ಬಂದಿತು. ಯೋಜಿಸಿದ್ದಂತೆ ನಿಧಾನವಾಗಿ ನೆಲಕ್ಕಿಳಿಯಲು ಸಾಧ್ಯವಾಗದೆರಭಸವಾಗಿ ನೆಲಕ್ಕೆ ಇಳಿದಿದ್ದರೂವಿಕ್ರಮ್ಗೆ ಯಾವುದೇ ಹಾನಿ ತಟ್ಟಿಲ್ಲಒಂದಿಷ್ಟು ಚೂರಾಗದೆ ಸುಸ್ಥಿತಿಯಲ್ಲಿ ಇದೆ ಎಂದು ಇಸ್ರೋ ವಿಜ್ಞಾನಿಗಳು ಈದಿನ  ತಿಳಿಸಿದರು.ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ಚಂದ್ರಯಾನ-೨ರ ಆರ್ಬಿಟರ್ ಹಿಂದಿನ ದಿನ ಕಳುಹಿಸಿದ್ದ ಥರ್ಮಲ್ ಚಿತ್ರದ ಪರಿಶೀಲನೆಯಿಂದ ’ವಿಕ್ರಮ್’ ಸುಸ್ಥಿತಿಯಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ವಿಜ್ಞಾನಿಗಳು ಹೇಳಿದರು.ಓರೆಯಾಗಿದ್ದರೂಸುಸ್ಥಿತಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡಿರುವ ವಿಜ್ಞಾನಿಗಳು ’ವಿಕ್ರಮ್ನ್ನು ಸಂಪರ್ಕಿಸಲು ಸತತ ಯತ್ನ ನಡೆಸುತ್ತಿದ್ದಾರೆಆರ್ಬಿಟರ್ ತನ್ನ ಉತ್ಕೃಷ್ಟ ದರ್ಜೆಯ ಕ್ಯಾಮರಾದಲ್ಲಿ ವಿಕ್ರಮ್ ಚಿತ್ರವನ್ನು ಸೆರೆ ಹಿಡಿದಿದ್ದುಅದರಲ್ಲಿ ವಿಕ್ರಮ್ ಓರೆಯಾಗಿ ಇರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆನಿಧಾನವಾಗಿ ಇಳಿಸಲು ಯೋಜಿಸಿದ್ದ ಸ್ಥಳದ ಸಮೀಪದಲ್ಲಿಯೇ ಲ್ಯಾಂಡರ್ ರಭಸವಾಗಿ ಚಾಂದ್ರ ನೆಲದ ಮೇಲೆ ಬಿದ್ದಿದೆ ಆದರೆ ಬಿದ್ದ ರಭಸಕ್ಕೆ ಲ್ಯಾಂಡರ್ ತುಂಡಾಗಿಲ್ಲಬದಲಿಗೆ ಸ್ವಲ್ಪ ಓರೆಯಾಗಿ ನಿಂತಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದರು.(ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ಇಸ್ಲಾಮಾಬಾದ್: ಗಡಿಭಾಗದಲ್ಲಿ ಸೇನೆ ಹಾಗೂ ಉಗ್ರರನ್ನು ಪಾಕಿಸ್ತಾನ ಜಮಾವಣೆ ಗೊಳಿಸುತ್ತಿರುವ ನಡುವೆಯೇ ಇದೀಗ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜೈಶ್  ಮೊಹಮ್ಮದ್ (ಜೆಇಎಂಮುಖ್ಯಸ್ಥ ಮಸೂದ್ ಅಜರನನ್ನು ಪಾಕಿಸ್ತಾನ ಬಂಧಿಸಿದ ಒಂದು ತಿಂಗಳ ಬಳಿಕ ರಹಸ್ಯವಾಗಿ ಬಿಡುಗಡೆ ಮಾಡಿತು. ಅಲ್ಲದೇ ಜಮ್ಮುವಿನ ಸಿಯಾಲ್ ಕೋಟ್ ವಿಭಾಗ ಮತ್ತು ರಾಜಸ್ಥಾನದ ಗಡಿಭಾಗಗಳಲ್ಲಿ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆಗೊಳಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಎಂದು ವರದಿ ತಿಳಿಸಿತು. ಗಡಿಭಾಗದಲ್ಲಿನ ಪಾಕ್ ಚಟುವಟಿಕೆ ಹಾಗೂ ಉಗ್ರ ಮಸೂದ್ ಬಿಡುಗಡೆ ಗಮನಿಸಿದರೆ ಭಾರತದ ಮೇಲೆ ಉಗ್ರರ ದಾಳಿ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತು.  ನಿಟ್ಟಿನಲ್ಲಿ ಗಡಿಭಾಗಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿತು. ಇತ್ತೀಚೆಗಷ್ಟೇ ಎಫ್ ಎಟಿಎಫ್ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು ಸಂದರ್ಭದಲ್ಲಿ ಪಾಕಿಸ್ತಾನ ತಾನು ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಉಗ್ರ ಮಸೂದ್ ಅಜರನನ್ನು ಬಂಧಿಸುವ ನಾಟಕವಾಡಿತ್ತುಇದೀಗ ರಹಸ್ಯವಾಗಿ  ಆತನನ್ನು ಬಿಡುಗಡೆ ಮಾಡಿತು.

2019: ನವದೆಹಲಿ: ಗುಜರಾತಿನ ಸರ್ ಕ್ರೀಕ್ನಲ್ಲಿ ಕೆಲವು ಪರಿತ್ಯಕ್ತ ಅನಾಥ ದೋಣಿಗಳನ್ನು ಪತ್ತೆ

ಹಚ್ಚಲಾಗಿದ್ದುದಕ್ಷಿಣ ಭಾರತದಲ್ಲಿ ಭಯೋತ್ಪಾದಕ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಮೂಲಗಳಿಂದ  ತನಗೆ ಮಾಹಿತಿ ಲಭಿಸಿದೆ ಎಂದು ಭಾರತದ ಈದಿನ ಹೇಳಿತು. ಸರ್ ಕ್ರೀಕ್ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ೯೬ ಕಿಮೀ ವ್ಯಾಪ್ತಿಯ ಅಳಿವೆ (ನದೀಮುಖಪ್ರದೇಶವಾಗಿದ್ದುಅರಬ್ಬಿ ಸಮುದ್ರದತ್ತ ತೆರೆದುಕೊಂಡಿರುವ  ಪ್ರದೇಶವು ಭಾರತದ ಗುಜರಾತ್ ರಾಜ್ಯವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ರದಿಂದ ವಿಭಜಿಸುತ್ತದೆ. ’ಭಾರತದ ದಕ್ಷಿಣ ಭಾಗದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ’ ಎಂಬ ಗುಪ್ತಚರ ಮಾಹಿತಿ ನಮಗೆ ಲಭಿಸಿದೆಸರ್ ಕ್ರೀಕ್ನಲ್ಲಿ ಕೆಲವು ಪರಿತ್ಯಕ್ತ ಅನಾಥ ದೋಣಿಗಳನ್ನು ಪತ್ತೆ ಹಚ್ಚಲಾಗಿದೆಶತ್ರುಶಕ್ತಿಗಳುಮತ್ತು ಭಯೋತ್ಪಾದಕರ ಷಡ್ಯಂತ್ರಗಳನ್ನು ತಡೆಯಲು ನಾವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ದಕ್ಷಿಣ ಸೇನಾ ಕಮಾಂಡ್ ಕಮಾಂಡಿಂಗ್ ಇನ್ ಚೀಫ್ ಸಾಮಾನ್ಯ ಅಧಿಕಾರಿ ಜನರಲ್ ಎಸ್ಕೆ ಸೈನಿ ಅವರು ಪುಣೆಯಲ್ಲಿ ಹೇಳಿದರು. ಸೇನೆಯ ಎಚ್ಚರಿಕೆಯನ್ನು ಅನುಸರಿಸಿ ಕೇರಳ ಪೊಲೀಸರು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಿದ್ದಾರೆಬಸ್ ನಿಲ್ದಾಣರೈಲ್ವೇ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಂತಹ ಜನದಟ್ಟಣೆಯ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ರಾಜ್ಯ ಪೊಲೀಸ್ ಪ್ರಮುಖರು ಸೂಚನೆ ನೀಡಿದರು. ಸೆಪ್ಟೆಂಬರ್ 11ರ ಬುಧವಾರ ಓಣಂ ಆಚರಣೆ ಕಾಲದಲ್ಲಿ ಹೆಚ್ಚು ಜನರು ಸೇರುವ ಜಾಗಗಳಲ್ಲಿ ಕೂಡಾ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಯಿತು. ಲಷ್ಕರ್ --ತೊಯ್ಬಾ ಸದಸ್ಯರು ರಾಜ್ಯದೊಳಕ್ಕೆ ನುಸುಳಿದ ಬಗ್ಗೆ ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದನ್ನು ಅನುಸರಿಸಿತಮಿಳುನಾಡಿನಾದ್ಯಂತ ಆಗಸ್ಟ್ ತಿಂಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿತ್ತುಭಯೋತ್ಪಾದಕ ಸಂಘಟನೆಗಳ  ಸದಸ್ಯರು ಶ್ರೀಲಂಕೆಯಿಂದ ಸಮುದ್ರ ಮಾರ್ಗವಾಗಿ ರಾಜ್ಯದೊಳಕ್ಕೆ ಪ್ರವೇಶಿಸಿ ಕೊಯಮತ್ತೂರು ಸೇರಿದಂತೆ ವಿವಿಧ ನಗರಗಳಿಗೆ ತೆರಳಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರುರಾಜ್ಯಾದ್ಯಂತ ವಿಮಾನ ನಿಲ್ದಾಣಗಳುರೈಲ್ವೇ ನಿಲ್ದಾಣಗಳುಬಸ್ಸು ನಿಲ್ದಾಣಗಳು ಮತ್ತು ಪೂಜಾ ಸ್ಥಳಗಳಲ್ಲಿ ಇದೀಗ ಭದ್ರತೆಯನ್ನು ಹೆಚ್ಚಿಸಲಾಯಿತು. ಭವಿಷ್ಯದಲ್ಲಿ ಯಾವುದೇ ನುಸುಳುವಿಕೆಯನ್ನು ತಡೆಗಟ್ಟಲು ದಕ್ಷಿಣ ಭಾರತದಾದ್ಯಂತವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ಹೇಳಿದವು. ಪಾಕಿಸ್ತಾನದಲ್ಲಿ ಕುದಿಯುತ್ತಿರುವ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಭಾರತದ ದಕ್ಷಿಣ ಭಾಗದಲ್ಲಿ ಸಂಭಾವ್ಯ ಭಯೋತ್ಪಾದಕ ದಾಳಿಗಳ ಬಗೆಗಿನ ಸುಳಿವು ನಮಗೆ ಲಭಿಸಿದೆ ಎಂದು ಸೇನೆ ಹೇಳಿತು. ಮಾಸಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆಯ ಸಭೆಗಿಂತ ಮುಂಚಿತವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಪುನಾರಂಭಿಸಲು ತನ್ನ ಪಾಕಿಸ್ತಾನಿ ಬೆಂಬಲಿಗರಿಗೆ ಜೈಶ್ --ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮೌಲಾನ ಮಸೂದ್ ಅಜರ್ ಕರೆ ಕೊಟ್ಟಿರುವ ಬಗ್ಗೆ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆ ಅಧಿಕಾರಿಗಳು ತಿಳಿಸಿದ ಒಂದು ದಿನದ ಬಳಿಕ ಜನರಲ್ ಸೈನಿ ಅವರಿಂದ  ಎಚ್ಚರಿಕೆ ಬಂದಿತು. ಫೆಬ್ರುವರಿ ೧೪ರಂದು ಕಾಶ್ಮೀರದ ಪುಲ್ವಾಮದಲ್ಲಿ ಆತ್ಮಾಹತ್ಯಾ ದಾಳಿ ನಡೆಸಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್ಯೋಧರನ್ನು ಬಲಿಪಡೆದ ಬಳಿಕ ಭಾರತ-ಪಾಕ್ ಗಡಿಯುದ್ದಕ್ಕೂ ಭಾರತೀಯ ಸೇನೆಯನ್ನು ಜಾಗೃತ ಸ್ಥಿತಿಯಲ್ಲಿ ಇರಿಸಲಾಗಿತ್ತು. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಿಂದ ಇತ್ತೀಚಿನ ದಿನಗಳಲ್ಲಿ ಕದನ ವಿರಾಮ ಉಲ್ಲಂಘನೆಯ ಹಲವಾರು ಘಟನೆಗಳು ಘಟಿಸಿದ ಹಿನ್ನೆಲೆಯಲ್ಲಿ ಸೇನೆಯು ತನ್ನ ಪಹರೆಯನ್ನು ಹೆಚ್ಚಿಸಿತ್ತು.ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿದ ಭಾರತ ಸರ್ಕಾರದ ಕ್ರಮವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡುವ ಸಲುವಾಗಿ ಪಾಕಿಸ್ತಾನವು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಧ್ಯತೆಗಳು ಇವೆ ಎಂಉ ಭಾರತದ ಸೇನಾ ದಂಡ ನಾಯಕ ಜನರಲ್ ಬಿಪಿನ್ ರಾವತ್ ಕಳೆದ ತಿಂಗಳಲ್ಲೇ ಎಚ್ಚರಿಸಿದ್ದರು.


2019: ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ವಿರುದ್ಧದ ೧೯೮೪ರ  ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ  ಮರುಜೀವ ನೀಡುವ ಪ್ರಸ್ತಾಪಕ್ಕೆ ಕೇಂದ್ರ ಗೃಹ ಸಚಿವಾಲಯವು 2019 ಸೆಪ್ಟೆಂಬರ್ 09ರ ಸೋಮವಾರ ಒಪ್ಪಿಗೆ ನೀಡಿತುಇದರೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಗೆ ಸಂಕಷ್ಟ ಎದುರಾಯಿತು.  ವಿಶೇಷ ತನಿಖಾ ತಂಡವು ಕಮಲ್ನಾಥ್ ವಿರುದ್ಧದ ಆಪಾದನೆಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ದೆಹಲಿ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಮನಜಿಂದರ್ ಸಿಂಗ್ ಸಿರ್ಸಾ ಅವರು ಹೇಳಿರುವುದಾಗಿ ಪತ್ರಿಕಾ ವರದಿಯೊಂದು ತಿಳಿಸಿತು.  ಕಮಲನಾಥ್ ಮತ್ತಿತರರ ಹೆಸರುಗಳಿರುವ ಎಫ್ಐಆರ್ ೬೦೧/೮೪ ಇದಕ್ಕೆ ಮರುಜೀವ ನೀಡಲಾಗಿದೆ’ ಎಂಬುದಾಗಿ ಸಿರ್ಸಾ ಹೇಳಿದ್ದನ್ನು ಪತ್ರಿಕಾ ವರದಿ ಉಲ್ಲೇಖಿಸಿತು. ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಕಮಲ್ನಾಥ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ವಜಾಮಾಡಬೇಕು ಎಂದು ದೆಹಲಿ ಗುರುದ್ವಾರ ಪ್ರಬಂಧಕ ಸಮಿತಿ ಆಗ್ರಹಿಸಿತುಕಮಲ್ನಾಥ್ ಅವರನ್ನು  ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸದಿದ್ದರೆ ಅದು ಅವರ ಸಿಖ್ ವಿರೋಧಿ ಮುಖವನ್ನು ಪ್ರತಿಫಲಿಸುತ್ತದೆ ಎಂದು ಸಿರ್ಸಾ ಹೇಳಿದರುಕೇಂದ್ರ ಗೃಹ ಸಚಿವಾಲಯವು ರಚಿಸಿದ್ದ ವಿಶೇಷ ತನಿಖಾ ತಂಡವು (ಎಸ್ಐಟಿ),  ಸಿಖ್ ವಿರೋಧಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ  ಸಿಖ್ ವಿರೋಧಿ ದಂಗೆ ಪ್ರಕರಣಗಳಿಗೆ ಮರುಜೀವ ನೀಡಲು ನಿರ್ಧರಿಸಿದೆ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳನ್ನು ಖುಲಾಸೆ ಮಾಡಲಾಗಿತ್ತು ಅಥವಾ ತನಿಖೆಯನ್ನು ಮುಕ್ತಾಯಗೊಳಿಸಲಾಗಿತ್ತು ಎಂದು ಅಧಿಕೃತ ಪ್ರಕಟಣೆ ತಿಳಿಸಿತು.


No comments:

Advertisement