My Blog List

Monday, October 17, 2022

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಎಲ್ಲಿ ಮಾರಾಯರೇ ಈ ಆಟ?

ಇದು ಸುವರ್ಣ ನೋಟ...!

ಬೆಳಗ್ಗೆ ಮೊಬೈಲಿನಲ್ಲಿ ವಾಟ್ಸಪ್‌ ನೋಡುತ್ತಿದ್ದಾಗ ಮೂರು ಚಿತ್ರಗಳು ಗಮನ ಸೆಳೆದವು.

ತತ್‌ ಕ್ಷಣವೇ ಮೆಸ್ಸೇಜ್‌ ಮಾಡಿದೆ: “ಸೂಪರ್‌ ಓಳು ಮಾರಾಯರೇ ಈ ಗೊಬ್ಬು” (ಸೂಪರ್‌ ಎಲ್ಲಿ ಮಾರಾಯರೇ ಈ ಆಟ ) ಅಂತ.

ಸ್ವಲ್ಪ ಹೊತ್ತಿನಲ್ಲೇ ಸುವರ್ಣರ ಫೋನ್‌ ಬಂತು. ʼಓಯ್‌ ಮಾರಾಯರೇ ಅವು ಕಂಠೀರವ ಸ್ಟೇಡಿಯಂಡು. ನ್ಯಾಷನಲ್‌ ಗೇಮ್ಸ್‌ ಆವೋಂಡು ಉಂಡತ್ತೇ? ಅಳ್ಪದ” (ಓಯ್‌ ಮಾರಾಯರೇ ಅವು ಕಂಠೀರವ ಸ್ಟೇಡಿಯಂನದ್ದು. ರಾಷ್ಟ್ರೀಯ ಕ್ರೀಡಾಕೂಟಾ ನಡೆಯುತ್ತಿದೆಯಲ್ಲವೇ? ಅಲ್ಲಿಯದ್ದು.)

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರ ಚಿತ್ರಗಳೇ ಹಾಗೆ. ಮನಸ್ಸಿನ ಆಳಕ್ಕೆ ಹೊಕ್ಕು ಬಿಡುತ್ತವೆ.

ಇವು ಕ್ರೀಡಾಕೂಟದಲ್ಲಿ ನಡೆದ ಲಾಂಗ್‌ ಜಂಪ್‌ ಆಟೋಟದ್ದು. ಈಜಲು ನೀರಿಗೆ ಜಿಗಿದಾಗ ನೀರು ಮೇಲಕ್ಕೆ ಚಿಮ್ಮುವ ಅಪೂರ್ವ ದೃಶ್ಯದ ಹಾಗೆಯೇ ಉದ್ದ ಜಿಗಿತದಲ್ಲಿ ಅಷ್ಟು ದೂರಕ್ಕೆ ಹಾರಿ ಕೆಳಗ್ಗೆ ಬಿದ್ದೊಡನೆಯೇ ಮರಳಿನ ಕಣಗಳು ಚಿಮ್ಮಿದ ಕ್ಷಣದ ಚಿತ್ರಗಳಿವು.

ಜೊತೆಗೇ ಆ ಹೊತ್ತಿನಲ್ಲಿ ಸ್ಪರ್ಧಾಳುಗಳ ಮುಖಭಾವ ಕೂಡಾ ಅದೆಷ್ಟು ಸುಂದರವಾಗಿ ಮೂಡಿ ಬಂದಿದೆ. ನೋಡಿ.

ಅಭಿನಂದನೆಗಳು ಸುವರ್ಣ.

ಚಿತ್ರದ ಸಮೀಪ ದೃಶ್ಯದ ಅನುಭವಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ

-ನೆತ್ರಕೆರೆ ಉದಯಶಂಕರ

No comments:

Advertisement