My Blog List

Tuesday, February 7, 2023

ವಾಹ್‌ ಮಹಿಷ... ಎಂತಹ ಪ್ರವೇಶ..!

 ವಾಹ್‌ ಮಹಿಷ... ಎಂತಹ ಪ್ರವೇಶ..!

ಕ್ಷಗಾನದ ದೇವಿ ಮಹಾತ್ಮೆ ಪ್ರಸಂಗ ಎಂತಹ ವ್ಯಕ್ತಿಯಲ್ಲಾದರೂ ರೋಮಗಳನ್ನು ನವಿರೇಳಿಸುವ ಪ್ರಸಂಗ. ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲೂ ಇದೀಗ ಯಕ್ಷಗಾನದ ಚೆಂಡೆಧ್ವನಿ ಮಾರ್ದನಿಸುತ್ತಿದೆ.

ಅದರಲ್ಲೂ ದೇವಿ ಮಹಾತ್ಮೆಯಲ್ಲಿ ಮಧ್ಯರಾತ್ರಿಯಲ್ಲಿ ಯಾರಾದರೂ ತೂಕಡಿಸಹೊರಟರೆ ಅವರನ್ನು ಬಡಿದೆಬ್ಬಿಸುವ ದೃಶ್ಯ ಮಹಿಷಾಸುರ ಪ್ರವೇಶ. ಹೊರಗಿನಿಂದ ಆರ್ಭಟಿಸುತ್ತಾ ರಂಗಸ್ಥಳಕ್ಕೆ ಪ್ರವೇಶಿಸುವ ರೀತಿಯೇ ಮೈ ನವಿರೇಳಿಸುವಂತಹುದು.
ಯಕ್ಷಗಾನದಲ್ಲಿ ಸಾಮಾನ್ಯವಾಗಿ ಹೀಗೆ ಮಹಿಷಾಸುರನೊಬ್ಬನೇ ರಂಗಪ್ರವೇಶ ಮಾಡುವ ಸಂಪ್ರದಾಯ ಹಿಂದಿನಿಂದಲೇ ನಡೆದು ಬಂದಂತಹುದು.

ಆದರೆ ಮಹಿಷಾಸುರನ ರಂಗ ಪ್ರವೇಶಕ್ಕೆ ಹೊಸ ಸ್ವರೂಪವನ್ನೇ ನೀಡಬಹುದೇ?

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮುಡಿಪು ಕೈರಂಗಳದಲ್ಲಿ ನಡೆದ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಕಂಡು ಬಂದ ದೃಶ್ಯಗಳು ಅಪೂರ್ವ. 

ಪಾವಂಜೆ ಮೇಳದವರು ಪ್ರದರ್ಶಿಸಿದ ಈ ಯಕ್ಷಗಾನ ಬಯಲಾಟದಲ್ಲಿ ಮಹಿಷಾಸುರ ಮಾತ್ರವೇ ಅಲ್ಲ, ಆತನ ಗೆಳೆಯರ ಪಟಾಲಂ ಕೂಡಾ ಮಹಿಷಾಸುರನಂತೆಯೇ ಅಬ್ಬರದೊಂದಿಗೆ ಪ್ರವೇಶ ಮಾಡಿ ಮಹಿಷಾಸುರನನ್ನು ರಂಗಸ್ಥಳಕ್ಕೆ ತಂದು ಬಿಡುವ ದೃಶ್ಯ ಯಕ್ಷಗಾನ ಪ್ರಿಯರು ಕಂಡು ಕೇಳರಿಯದ ದೃಶ್ಯ ಎಂದರೆ ತಪ್ಪಲ್ಲ.

ಅದನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ.


ದೇವಿಗೆ ದೇವೇಂದ್ರ ಸೇರಿದಂತೆ ದೇವತೆಗಳು ಮನವಿ ಮಾಡಿಕೊಳ್ಳುವ ಇನ್ನೊಂದು ದೃಶ್ಯ ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.

ಅಷ್ಟೇ ಅಲ್ಲ, ಈ  ಬಯಲಾಟದಲ್ಲಿ  ರಕ್ತಬೀಜಾಪುರನನ್ನು ವಧಿಸಲು ದೇವಿ ಪ್ರವೇಶಿಸುವ ರೀತಿ ಕೂಡಾ ಕಂಡು ಕೇಳರಿಯದ್ದೇ. 

ಅದನ್ನು ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.

ಪ್ರೇಕ್ಷಕರಿಂದ ಶಹಬ್ಬಾಸ್‌ ಗಿರಿ ಪಡೆದುಕೊಂಡ ಈ ಯಕ್ಷಗಾನ ಬಯಲಾಟದ ಈ ವಿಡಿಯೋ ಕ್ಲಿಪ್‌ಗಳು ಈಗ  ವಾಟ್ಸಪ್‌ ಗುಂಪುಗಳಲ್ಲಿ ರೋಮಾಂಚನ ಎಬ್ಬಿಸುತ್ತಾ ವೈರಲ್‌ ಆಗುತ್ತಿದೆ.

ವಿಡಿಯೋ ಕೃಪೆ: ನೆತ್ರಕೆರೆ ಮಠ ವಾಟ್ಸಪ್‌ ಗುಂಪು. 

-ನೆತ್ರಕೆರೆ ಉದಯಶಂಕರ.

No comments:

Advertisement