ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಕೊನೆಯ ದಿನ (೨೩ ಜನವರಿ ೨೦೨೩) ದೇವಸ್ಥಾನದ ಓಕುಳಿ ಕಟ್ಟೆಯಲ್ಲಿ ಪೂಜೆಯ ಬಳಿಕ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಹೋಗುವುದು ಕ್ರಮ.ಹೀಗೆ ಹೋಗುವ ದಾರಿಯಲ್ಲಿ ವಿಟ್ಲ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ಕೊಡಂಗಾಯಿಯಲ್ಲಿ ಅವಭೃತ ಸ್ನಾನ ಪೂರೈಸಿ ಪಂಚಲಿಂಗೇಶ್ವರನು ಸ್ವಸ್ಥಾನಕ್ಕೆ ವಾಪಸಾಗುತ್ತಾನೆ.
ಅವಭೃತ ಸ್ನಾನಕ್ಕಾಗಿ ಪಂಚಲಿಂಗೇಶ್ವರನು ಸವಾರಿ ನಡೆಸುವ ದೃಶ್ಯ ಮತ್ತು ನೆತ್ರಕೆರೆ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸುವ ಸಂಭ್ರಮದ ವಿಡಿಯೋ ಇಲ್ಲಿದೆ. (ವಿಡಿಯೋ, ಚಿತ್ರಗಳು: ಎನ್. ಶ್ಯಾಮ್, ಎನ್.ಟಿ. ಗಣೇಶ್)
೨೦೨೩ರ ವಿಟ್ಲ ಜಾತ್ರೋತ್ಸವವನ್ನು ಮತ್ತೊಮ್ಮೆ ಮೆಲುಕು ಹಾಕುವಿರಾದರೆ ಕೆಳಗೆ ಕ್ಲಿಕ್ ಮಾಡಿರಿ:
No comments:
Post a Comment