ಆಪರೇಷನ್ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
ನವದೆಹಲಿ: ಭಾರತ- ಪಾಕಿಸ್ತಾನ ನಡುವಣ
೪ ದಿನಗಳ ಕದನವಿರಾಮ ಜಾರಿಗೆ ಬಂದಿದ್ದರೂ, ಪೆಹಲ್ಗಾಮ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಆರಂಭವಾಗಿರುವ
ʼಆಪರೇಷನ್
ಸಿಂಧೂರʼ ಮುಕ್ತಾಯಗೊಂಡಿಲ್ಲ ಎಂದು ಭಾರತ ಸ್ಪಷ್ಟ ಪಡಿಸಿದೆ.
ಭಾರತ-ಪಾಕಿಸ್ತಾನಿ ಡಿಜಿಎಂಒಗಳ ಮಧ್ಯೆ
ಮಾತ್ರ ಮಾತುಕತೆ ನಡೆಯಲಿದೆ. ಮೂರನೇಯವರ ಮಧ್ಯಸ್ಥಿಕೆಗೆ ಅವಕಾಶವಿಲ್ಲ. ಪಾಕ್ ಆಕ್ರಮಿತ ಪ್ರದೇಶದ
ವಾಪಸಾತಿ ಮತ್ತು ಭಯೋತ್ಪಾದಕರ ಹಸ್ತಾಂತರ ವಿಚಾರಕ್ಕಷ್ಟೇ ಮಾತುಕತೆ ಸೀಮಿತ ಎಂಬುದಾಗಿ ಪ್ರಧಾನಿ ನರೇಂದ್ರ
ಮೋದಿ ಅಮೆರಿಕಕ್ಕೆ ಸ್ಪಷ್ಟ ಪಡಿಸಿದ್ದಾರೆ.
ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿದರೆ,
ಭಯೋತ್ಪಾದಕ ದಾಳಿಗೆ ಯತ್ನಿಸಿದರೆ, ಅದಕ್ಕಿಂತ ಬಲವಾದ ಹೊಡೆತ ನೀಡುವ ಮೂಲಕ ಅದನ್ನು ಹತ್ತಿಕ್ಕುವಂತೆಯೂ
ಪ್ರಧಾನಿ ಭಾರತೀಯ ಪಡೆಗಳಿಗೆ ಸೂಚಿಸಿದ್ದಾರೆ.
ಈ ಮಧ್ಯೆ, ಸಿಂಧೂರ ಕಾರ್ಯಾಚರಣೆಯಲ್ಲಿ
ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕಿಸ್ತಾನದಲ್ಲಿನ ೯ ಭಯೋತ್ಪಾದಕ ಕೇಂದ್ರಗಳ ಮೇಲೆ ದಾಳಿ ನಡೆದಿದ್ದು
೧೦೦ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಇದರಲ್ಲಿ ಇದರಲ್ಲಿ IC814 ವಿಮಾನ ಅಪಹರಣ ಮತ್ತು ಪುಲ್ವಾಮಾ ಸ್ಫೋಟದಲ್ಲಿ ಭಾಗಿಯಾಗಿದ್ದ ಯೂಸುಫ್
ಅಜರ್, ಅಬ್ದುಲ್
ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ಸೇರಿದಂತೆ ಹಲವಾರು
ಭಯೋತ್ಪಾದಕ ಪ್ರಮುಖರು ಸಾವನ್ನಪ್ಪಿದ್ದಾರೆ ಎಂದು ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್
ಘಾಯ್ ತಿಳಿಸಿದ್ದಾರೆ.
ಭಾರತೀಯ ಪಡೆಗಳ ಸಾಮರ್ಥ್ಯವನ್ನು ಬಿಂಬಿಸುವ ಇನ್ನೊಂದು ವಿಡಿಯೋವನ್ನು ಭಾರತೀಯ ಸೇನೆ ೨೦೨೫ ಮೇ ೧೧ರ ಭಾನುವಾರ ಬಿಡುಗಡೆ ಮಾಡಿದೆ. ಕೆಳಗೆ ಕ್ಲಿಕ್ ಮಾಡಿ ಅದನ್ನು ವೀಕ್ಷಿಸಬಹುದು.
ಇವುಗಳನ್ನೂ ಓದಿರಿ:
No comments:
Post a Comment