Monday, May 12, 2025

ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?

 ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?

ಇಲ್ಲಿವೆ ಸಾಕ್ಷ್ಯಾಧಾರದ ಉಪಗ್ರಹ ಚಿತ್ರಗಳು

 ಪ್ರಿಲ್‌ 22ರ ಪೆಹಲ್ಗಾಮ್‌ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತದ ಪಡೆಗಳು ಪಾಕಿಸ್ತಾನದ ವಿರುದ್ಧ ಕೈಗೊಂಡ ʼಆಪರೇಷನ್‌ ಸಿಂಧೂರʼ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಆಗಿರುವ ಹಾನಿಗಳನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಭಾರತೀಯ ವಾಯುಪಡೆ ಬಿಡುಗಡೆ ಮಾಡಿದೆ.

ಈ ಕಾರ್ಯಾಚರಣೆಯಲ್ಲಿ 26 ಜನ ಅಮಾಯಕ ಪ್ರವಾಸಿಗರ ಜೀವ ತೆಗೆದುದಕ್ಕೆ ಪ್ರತಿಯಾಗಿ ಭಾರತವಯ ನೂರಕ್ಕೂ ಹೆಚ್ಚು  ಸಂಖ್ಯೆಯ ಉಗ್ರರ ಜೀವ ತೆಗೆದಿದೆ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯ ಕಚೇರಿಯನ್ನು ಧ್ವಂಸ ಮಾಡಿದೆ. ಮಸೂದ್ ಅಜರ್‌ನ ಇಡೀ ಕುಟುಂಬವನ್ನು ನಿರ್ನಾಮಗೊಳಿಸಿದೆ. ಇನ್ನೊಂದು ಕಡೆ ಉಗ್ರರ ಪರವಾಗಿ ನಿಂತ ಪಾಕಿಸ್ತಾನದ 11 ಸೇನಾ ನೆಲೆಗೆ ಹಾನಿ ಉಂಟು ಮಾಡಿದೆ.

ಪಾಕಿಸ್ತಾನಕ್ಕೆ ಅವರೇ ಸಂಗ್ರಹಿಸಿಟ್ಟಿರುವ ಅಣ್ವಸ್ತ್ರಗಳ ಸುರಕ್ಷತೆಯ ಬಗ್ಗೆ ಹೆದರಿಕೆ ಹುಟ್ಟಿಸಿದೆ. ಇದು ಭಾರಿ ದೊಡ್ಡ ಫಲಿತಾಂಶ. ಈ ಮೂರು ದಿನದ ದಾಳಿಯಲ್ಲಿ ನಮ್ಮ 26 ಅಮಾಯಕರ ಜೀವಕ್ಕೆ ತೀಕ್ಷ್ಣ ಪಾಠ ಪಾಕಿಸ್ತಾನಕ್ಕೆ ಸಿಕ್ಕಂತಾಗಿದೆ.

ಇವೆಲ್ಲದರ ಹಿನ್ನೆಲೆಯಲ್ಲಿಯೇ ಪಾಕಿಸ್ತಾನ ಯುದ್ಧ ಬೇಡ ಎಂದು ಕೈಮುಗಿದು ಕದನವಿರಾಮಕ್ಕೆ ಮನವಿ ಮಾಡಿದೆ.

ಉಪಗ್ರಹ ಚಿತ್ರಗಳು ದಾಳಿಗೆ ಮುನ್ನ ಪಾಕಿಸ್ತಾನದ ಈ ತಾಣಗಳು ಹೇಗಿದ್ದವು, ಈಗ ಹೇಗಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿವೆ.

ಈ ಚಿತ್ರಗಳು ಇಲ್ಲಿವೆ.

ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.








ಈ ಕುರಿತ ಸ್ವಾರಸ್ಯಕರ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ.  


No comments:

Advertisement