My Blog List

Monday, March 2, 2020

ಸಾಮಾಜಿಕ ಜಾಲತಾಣಕ್ಕೆ ವಿದಾಯ: ಮೋದಿ ಇಂಗಿತ

ಸಾಮಾಜಿಕ ಜಾಲತಾಣಕ್ಕೆ ವಿದಾಯ: ಮೋದಿ ಇಂಗಿತ
ನವದೆಹಲಿ:  ಟ್ವಿಟರ್, ಫೇಸ್ ಬುಕ್,  ಇನ್ ಸ್ಟಾ ಗ್ರಾಮ್ ಹಾಗೂ ಯೂಟ್ಯೂಬ್ ನಿಂದ  ದೂರ ಉಳಿಯುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 02ರ ಸೋಮವಾರ ಅಚ್ಚರಿಯ “ಶಾಕ್ ನೀಡಿದರು.

ಈ ಭಾನುವಾರ ಹೀಗೇ ಚಿಂತನೆ ನಡೆಸುತ್ತಿದ್ದಾಗ, ಸಾಮಾಜಿಕ ಜಾಲತಾಣಗಳಿಂದ ದೂರ ಸರಿದರೆ ಹೇಗೆಂಬ ಆಲೋಚನೆ ಮನಸ್ಸಿನಲ್ಲಿ ಸುಳಿದಿತ್ತು ಎಂದು ಟ್ವೀಟ್ ಮಾಡಿದ ಅವರು, ಈ ಚಿಂತನೆಗೆ ಕಾರಣವೇನೆಂಬುದನ್ನು ತಿಳಿಸಲಿಲ್ಲ.

ಸಾಮಾಜಿಕ ಜಾಲತಾಣಗಳನ್ನು ಅತ್ಯಂತ “ಸಮರ್ಥವಾಗಿ ಬಳಸಿಕೊಂಡ ಭಾರತದ ಏಕೈಕ ಪ್ರಧಾನಿಯೆಂಬ ಹೆಗ್ಗಳಿಕೆಯನ್ನು ಪಡೆದಿರುವ ಮೋದಿ, ಇತ್ತೀಚೆಗಷ್ಟೇ, ಫೇಸ್ ಬುಕ್ ನಲ್ಲಿ  ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ವಿಶ್ವದ ೨ನೇ ನಾಯಕರಾಗಿ ಹೊರಹೊಮ್ಮಿದ್ದರು.

ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೇ  ಇದ್ದನ್ನು ಖುದ್ದು ಹೇಳಿಕೊಂಡು ಮೋದಿ ಅವರಿಗೆ ಇತ್ತೀಚೆಗೆ ಧನ್ಯವಾದ ಹೇಳಿದ್ದರು. ಇದಾಗಿ ಕೆಲವೇ ದಿನಗಳಲ್ಲೇ ಮೋದಿ, ಹೀಗೆ ಹೇಳಿರುವುದು ಎಲ್ಲರಲ್ಲೂ ಕುತೂಹಲ ಹುಟ್ಟುಹಾಕಿತು.

ಮೋದಿಯವರು ಟ್ವಿಟ್ಟರಿನಲ್ಲಿ 53.3 ಮಿಲಿಯನ್ ಬೆಂಬಲಿಗರನ್ನು ಹೊಂದಿದ್ದಾರೆ.  30 ನಿಮಿಷಗಳ ಒಳಗಾಗಿ ಸಹಸ್ರಾರು ಮಂದಿ ಬೆಂಬಲಿಗರು ಇದನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ.

2019ರ ಮೇ 23ರಂದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಮೋದಿ ಅವರು ಮಾಡಿದ್ದ ಟ್ವೀಟನ್ನು ಟ್ವಿಟ್ಟರ್ ‘ಗೋಲ್ಡನ್ ಟ್ವೀಟ್ ‘ (ಸುವರ್ಣ ಟ್ವೀಟ್) ಎಂಬುದಾಗಿ ಬಣ್ಣಿಸಿತ್ತು.  ಮೋದಿ ಅವರು ಟ್ವೀಟಿನಲ್ಲಿ ‘ಸಬ್ ಕಾ ಸಾಥ್ + ಸಬ್ ಕಾ ವಿಕಾಸ್ + ಸಬ್ ಕಾ ವಿಶ್ವಾಸ್=ವಿಜಯೀ ಭಾರತ್’  ಎಂದು ಬರೆದಿದ್ದರು.

No comments:

Advertisement