Tuesday, May 12, 2026

ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

 ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡ ಹಾಗೂ ಯಕ್ಷಗಾನ ಕುರಿತಾಗಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಎಂಎಎಚ್‌ಇ ʼಮಾಹೆʼ) ಟಿಎ ಪೈ ಮ್ಯಾನೇಜ್‌ ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಬೆಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಸುಂದರವಾದ ಸಾಕ್ಷ್ಯಚಿತ್ರವೊಂದನ್ನು (ಡಾಕ್ಯಮೆಂಟರಿ) ಸಿದ್ಧ ಪಡಿಸಿದ್ದಾರೆ.

ಈ ಸಾಕ್ಷ್ಯ ಚಿತ್ರದಲ್ಲಿ ಯಕ್ಷಗಾನ, ಅದರ ಹಾಡುಗಾರಿಕೆ, ಬಣ್ಣಗಾರಿಕೆ ವೇಷಭೂಷಣ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇಂಗ್ಲಿಷಿನಲ್ಲಿ  ವಿವರಿಸಿದ್ದಾರೆ. ಈ ಸಾಕ್ಷ್ಯ ಚಿತ್ರವನ್ನು ಇಲ್ಲಿ ನೋಡಬಹುದು.

ಎರಡನೇ ತಂಡ:
ಈ ಮಧ್ಯೆ, ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್‌ 26ರಂದು ಪ್ರಾರಂಭವಾದ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡವು ತನ್ನ ಎರಡನೇ ತಂಡಕ್ಕೆ ತರಬೇತಿ ಆರಂಭಿಸಲು ಸಜ್ಜಾಗಿದೆ. (ಚಿತ್ರಗಳ   ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ).

ಕೇವಲ ಆರು ತಿಂಗಳ ಅವಧಿಯಲ್ಲಿ ಯಕ್ಷಗುರು ಉಮೇಶ ರಾಜ್‌ ಅವರಿಂದ ಯಕ್ಷಗಾನ ಕಲಿತ ಮಕ್ಕಳು ಜಕ್ಕೂರಿನ ʼಸುಗಿ-ಹುಗ್ಗಿʼಯಲ್ಲಿ ನೀಡಿದ ಪ್ರದರ್ಶನವೂ ಸೇರಿದಂತೆ ಐದು ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ʼಅಭಿಮನ್ಯು ಕಾಳಗʼ, ʼಭಾರ್ಗವ ವಿಜಯʼ ಮತ್ತು ʼಲವ ಕುಶ ಕಾಳಗʼ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನರಂಜಿಸಿದ್ದಾರೆ.

ಇದೀಗ ಜೂನ್‌ ಮೊದಲ ವಾರದಿಂದ ಆರಂಭವಾಗಲಿರುವ ಯಕ್ಷ ಕಲಾ ಕೌಸ್ತುಭದ ಎರಡನೇ ಸೇರ್ಪಡೆಯಾಗಬಯಸುವವರು ಯಕ್ಷಗುರು ಉಮೇಶರಾಜ್‌ ಅವರನ್ನು ದೂರವಾಣಿ ಸಂಖ್ಯೆ 9663671591 ಅಥವಾ 9606981591 ಮೂಲಕ ಸಂಪರ್ಕಿಸಬಹುದು ಎಂದು ಹೇಳಿಕೆ ತಿಳಿಸಿದೆ.



ಯಕ್ಷಗಾನ ಕುರಿತ ವಿವರಗಳಿಗೆ ನೋಡಿ: ಈ  ಪರ್ಯಾಯ ವೆಬ್‌ ಸೈಟಿನ ʼಯಕ್ಷಗಾನತಾಳಮದ್ದಳೆʼ ಪುಟ.

No comments:

Advertisement