ದೀಪಾವಳಿ ಸಂಭ್ರಮ: ಧನಲಕ್ಷ್ಮಿ, ಕೇದಾರನಾಥೇಶ್ವರ ಪೂಜೆ
ಬೆಂಗಳೂರು ನಗರ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨೦೨೬ ನವೆಂಬರ್ ೦೮ರ ಭಾನುವಾರ ಮುಂಜಾನೆಯಿಂದಲೇ ದೀಪಾವಳಿ ಸಂಭ್ರಮ.
ದೇವಾಲಯದಲ್ಲಿ ಕಳೆದ ಒಂದು ವರ್ಷದಿಂದ ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವ
ಯಕ್ಷ ಕಲಾ ಕೌಸ್ತುಭದ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆಗೆ ಬೆಳಗ್ಗೆ ಪೂಜೆ. ಸಂಜೆ ದೀಪಾವಳಿಯ ಪ್ರಯುಕ್ತ
ಧನಲಕ್ಷ್ಮಿ, ಕೇದಾರನಾಥೇಶ್ವರನಿಗೆ ವಿಶೇಷ ಪೂಜೆ ನಡೆಯಿತು.
ಈ ವಿಶೇಷ ಸಂದರ್ಭಕ್ಕೆ ಶ್ರೀ ಮುನಿರಾಜು ಮತ್ತು ಕುಟುಂಬ, ಶ್ರೀ ರಾಜೇಂದ್ರ
ಕುಮಾರ್ ಮತ್ತು ಕುಟುಂಬ ಹಾಗೂ ದೇವಾಲಯದ ಗೌರವ ಅಧ್ಯಕ್ಷ ಶ್ರೀ ಕೃಷ್ಣಯ್ಯ ಶೆಟ್ಟಿ ಮತ್ತು ಕುಟುಂಬದವರಿಂದ
ಸುಡುಮದ್ದು (ಪಟಾಕಿ) ಸೇವೆ- ಪ್ರಸಾದ ಸೇವೆ, ಮಧು
ಭಟ್ ಪೂರ್ಲುಪಾಡಿ ಅವರಿಂದ ವಿದ್ಯುತ್ ದೀಪ ಸೇವೆ ನಡೆಯಿತು.
ಇದೇ ಶುಭ ಸಂದರ್ಭದಲ್ಲಿ ದೇವರ ದೀಪ, ತಟ್ಟೆ ಇತ್ಯಾದಿ ಪೂಜಾ ಸಾಮಗ್ರಿಗಳ ಸ್ವಚ್ಛತೆಗಾಗಿ ವ್ಯವಸ್ಥೆಯನ್ನು ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಮಾಡಿಸಿದರು. ಇದಕ್ಕಾಗಿ ವಾಶ್ ಬೇಸಿನನ್ನು ಸಂಪಿಗೆ ಹಳ್ಳಿಯ ಭಕ್ತ ಮುರಳೀಧರ್ ಅವರು ಒದಗಿಸಿದರೆ, ಉಳಿದ ಖರ್ಚು ವೆಚ್ಚಗಳನ್ನು ಅಧ್ಯಕ್ಷರೇ ವಹಿಸಿದರು. ಈ ಕೈಂಕರ್ಯದಲ್ಲಿ ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಶ್ರೀ ಹಂಪಣ್ಣ ಮತ್ತಿತರರು ನೆರವಾಗಿದ್ದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.
೨೦೨೬ ನವೆಂಬರ್ ೧೫ರ ಭಾನುವಾರ ನಡೆಯಲಿರುವ ಯಕ್ಷ ಕಲಾ ಕೌಸ್ತುಭದ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಗೆ ಪೂಜೆ.
ಮಹಾ ಮಂಗಳಾರತಿ.
ಇವರು ಇಲ್ಲಿಗೆ ಏಕೆ ಬಂದಿದ್ದಾರೆ ಗೊತ್ತಾ? ಇಲ್ಲಿ ಕ್ಲಿಕ್ ಮಾಡಿ ನೋಡಿ


.jpeg)

No comments:
Post a Comment