ಗ್ರಾಹಕರ ಸುಖ-ದುಃಖ

My Blog List

Sunday, March 8, 2020

ಇಟಲಿ ಜೋಡಿಯ 'ಭಾರತೀಯ ಮದುವೆ ಕನಸು ನುಚ್ಚುನೂರು

 ಇಟಲಿ ಜೋಡಿಯ 'ಭಾರತೀಯ ಮದುವೆ ಕನಸು ನುಚ್ಚುನೂರು
ಕೊರೋನಾಕೇರಳದಲ್ಲಿ ಇನ್ನೂ ಜನರಲ್ಲಿ ಸೋಂಕು
ಬಿಕಾನೇರ್/ ನವದೆಹಲಿ: ಕೇರಳದಲ್ಲಿ ಹೊಸದಾಗಿ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಡುವುದರೊಂದಿಗೆ 2020 ಮಾರ್ಚ್  08ರ ಭಾನುವಾರ ಭಾರತದಲ್ಲಿನ ಕೋವಿಡ್ -೧೯ ವೈರಸ್ ಸೋಂಕಿತರ ಸಂಖ್ಯೆ ೩೯ಕ್ಕೆ ಏರಿದೆ. ಇದೇ ವೇಳೆಗೆಭಾರತೀಯ ಸಂಪ್ರದಾಯದಂತೆ ಮದುವೆಯಾಗಬೇಕು ಎಂದು ಬಯಸಿ ಭಾರತಕ್ಕೆ ಬಂದ ಇಟಲಿ ಜೋಡಿಯ ಕನಸುಕೊರೋನಾ ವೈರಸ್ಪರಿಣಾಮವಾಗಿ ನುಚ್ಚು ನೂರಾದ ವರ್ತಮಾನ ಬಂದಿತು.

೨೦ ವರ್ಷಗಳ ಬಾಂಧವ್ಯದ ಬಳಿಕ, ಇಟಲಿ ಜೋಡಿಯೊಂದು ಬಿಕಾನೇರಿನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಬಯಸಿತ್ತು. ಆದರೆ ಕನಸನ್ನು ನನಸಾಗಿಸುವ ಸಲುವಾಗಿ ಗೆಳೆಯರು ಮತ್ತು ಕುಟುಂಬ ಸದಸ್ಯರ ಜೊತೆಗೆ ಬಿಕಾನೇರ್ ಹಾದಿಯಲ್ಲಿದ್ದ ಜೋಡಿಕೊರೋನಾವೈರಸ್ಪರಿಣಾಮವಾಗಿ ತಮ್ಮ ಯೋಜನೆ ಕೈ ಬಿಟ್ಟು ದೆಹಲಿಗೆ ವಾಪಸಾಗಬೇಕಾಯಿತು.

ಆಂಡ್ರಿಯಾ ಬೆಲ್ಲಿ (೫೬) ಮತ್ತು ಆಂಟೋನೆಲ್ಲಾ ಸ್ಕಾನೋ (೫೦) ಮದುವೆಗೆ ಸ್ಥಳ, ವಾದ್ಯಮೇಳ, ಸುಮಾರು ೧೫೦ ಮಂದಿ ಅತಿಥಿಗಳಿಗೆ ಭೋಜನ, ಅರ್ಚಕರು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಅಂತಿಮಗೊಳಿಸಲು ಕಳೆದ ವರ್ಷ ಫೆಬ್ರುವರಿ ಆದಿಯಲ್ಲಿ ಬಿಕಾನೇರಿಗೆ ಭೇಟಿ ನೀಡಿದ್ದರು. ವರ್ಷ ಮಾರ್ಚ್ ೭ರಂದು ಮದುವೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು.

ಜೋಡಿ ಮತ್ತು ಮದುವೆ ದಿಬ್ಬಣದ ಇತರ ಸದಸ್ಯರು ಮಾರ್ಚ್ ೩ರಂದು ಜೈಪುರಕ್ಕೆ ಬಂದಿಳಿದರು ಮತ್ತು ಎರಡು ದಿನ ಅಲ್ಲಿ ವಾಸ್ತವ್ಯ ಹೂಡಿ ವಧುವಿಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಬಳಿಕ ಮಾರ್ಚ್ ೫ರಂದು ಬಿಕಾನೇರಿಗೆ ಪಯಣ ಹೊರಟರು.

ಬಿಕಾನೇರಿಗೆ ಹೋಗುವ ದಾರಿಯಲ್ಲಿದ್ದಾಗ, ನಮಗೆ ಇಟಲಿ ಪ್ರಜೆಗಳೆಲ್ಲರೂ ದೆಹಲಿಗೆ ವಾಪಸಾಗಿ ಇಟಲಿ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಲಾಯಿತು. ಇಟಲಿ ನಾಗರಿಕರನ್ನು ಹಿಂದಕ್ಕೆ ಕಳುಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ರಾಜ್ಯ ಸರ್ಕಾರ ಸೂಚಿಸಿದೆ ಎಂದೂ ನಮಗೆ ತಿಳಿಸಲಾಯಿತುಎಂದು ವರನ ಕಡೆಯವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದ ಹೋಟೆಲ್ ಕಿಷನ್ ಪ್ಯಾಲೇಸ್ ಮಹೇಂದ್ರ ಸಿಂಗ್ ಶೆಖಾವತ್ ಪತ್ರಕರ್ತರಿಗೆ ತಿಳಿಸಿದರು.

ಶೆಖಾವತ್ ಅವರು ಜೈಪುರದಿಂದ ಬಿಕಾನೇರಿಗೆ ಇಟಲಿ ನಾಗರಿಕರ ಜೊತೆಗೇ ಪಯಣ ಹೊರಟಿದ್ದರು.
ಶೆಖಾವತ್ ಅವರು ಉಲ್ಲೇಖಿಸಿದ ಸೂಚನೆಯನ್ನು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ಮಾಚ್ ೪ರಂದು ಹೊರಡಿಸಿತ್ತು.

ಜೋಡಿ ಮತ್ತು ಅವರ ಬಂಧುಗಳಿಗೆ ಮದುವೆಯನ್ನು ರದ್ದು ಪಡಿಸಿ ಮನೆಗೆ ವಾಪಸಾಗುವುದರ ಹೊರತು ಬೇರೆ ಯಾವುದೇ ಮಾರ್ಗ ಉಳಿಯಲಿಲ್ಲ.

ಮಧ್ಯೆ, ಆರೋಗ್ಯ ಇಲಾಖೆಯ ಆದೇಶವನ್ನು ಹಿಂತೆಗೆದುಕೊಳ್ಳಲಾಗಿತ್ತುಎಂದು ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದರು. ’ಸಂಪರ್ಕ ಕೊರತೆ ಕಾರಣ ಅದು ತಲುಪಿಲ್ಲ ಎಂದು ಅವರು ನುಡಿದರು.

ಇಟಲಿಯ ಪ್ರವಾಸಿಗಳಿಗೆ ದೆಹಲಿಗೆ ಹಿಂದಿರುಗಿ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿ ಭಾರತ ಸರ್ಕಾರದಿಂದ ಯಾವುದೇ ಸೂಚನೆ ಇಲ್ಲ. ಇಟಲಿಯ ದೇಶವಾಸಿಗಳು ಫೆಬ್ರುವರಿ ೨೧-೨೮ರ ಅವಧಿಯಲ್ಲಿನ ರಾಜಸ್ಥಾನ ಪ್ರವಾಸ ಕಾಲದಲ್ಲಿ ಕೋವಿಡ್-೧೯ ತಗುಲಿದ್ದು ಖಚಿತಪಟ್ಟಿರುವ ಹಿನ್ನೆಲೆಯಲ್ಲಿ ತೊಂದರೆಗಳಾಗುತ್ತಿದ್ದಲ್ಲಿ ಅಂತಹ ಇಟಲಿ ಪ್ರಜೆಗಳಿಗೆ ತಮ್ಮ ಡಿಸಿಎಂನ್ನು ಸಂಪರ್ಕಿಸಲಷ್ಟೇ ಭಾರತ ಸರ್ಕಾರದ ನಿರ್ದೇಶನ ಸೂಚಿಸಿದೆಎಂದು ಪರಿಷ್ಕೃತ ಆದೇಶ ತಿಳಿಸಿತ್ತು.

ಬಿಕಾನೇರಿಗೆ ಬಾಕಿ ಪಾವತಿ ಮಾಡಲು ಬಂದಿದ್ದ ಪೋರ್ಚುಗೀಸ್ ಪಾಸ್ಪೋರ್ಟ್ ಹೊಂದಿರುವ ಬೆಲ್ಲಿ ಅವರ ಸಹೋದರಿ ಪಾವೋಲಾ ಬೆಲ್ಲಿನನ್ನ ಸಹೋದರ ಮತ್ತು ಆತನ ಪ್ರೇಯಸಿ ಇಬ್ಬರೂ ವಕೀಲರಾಗಿದ್ದು, ತಮ್ಮ ಮದುವೆಯು ಭಾರತೀಯ ಸಂಪ್ರದಾಯಗಳ ಪ್ರಕಾರ ಬಿಕಾನೇರಿನಲ್ಲಿ ನಡೆಯಬೇಕು ಎಂದು ಬಯಸಿದ್ದರು. ಮೆಹಂದಿ, ಯಜ್ಞೋಪವೀತ ಧಾರಣೆ, ಬಾರಾತ್, ಜೈಮಲ್, ಫೇರೆ ಮತ್ತು ಕನ್ಯಾದಾನ ಸೇರಿದಂತೆ ಸೇರಿದಂತೆ ಮದುವೆ ಸಮಾರಂಭದ ಎಲ್ಲ ಪರಂಪರಾಗತ ವಿಧಿವಿಧಾನಗಳನ್ನೂ ಯೋಜಿಸಲಾಗಿತ್ತು, ಆದರೆ ಎಲ್ಲವೂ ವ್ಯರ್ಥವಾಗಿ ಹೋಯಿತುಎಂದು ಬೇಸರ ವ್ಯಕ್ತ ಪಡಿಸಿದರು.

ನನಗೆ ಅತ್ಯಂತ ಭ್ರಮನಿರಸನವಾಗಿದೆ. ಏಕೆಂದರೆ ಜೋಡಿಯ ಕನಸು ತಪ್ಪು ತಿಳುವಳಿಕೆ ಮತ್ತು ಭಾರತೀಯ ಅಧಿಕಾರಿಗಳ ಗೊಂದಲದ ಪರಿಣಾಮವಾಗಿ ನುಚ್ಚು ನೂರಾಗಿದೆಎಂದು ಆಕೆ ನುಡಿದರು.

ಪ್ರಾಚೀನ ಕಾಲದಿಂದಲೇ, ಭಾರತೀಯ ಸಂಸ್ಕೃತಿ, ಪದ್ಧತಿಗಳು ಮತ್ತು ಸಂಪ್ರದಾಯ ವಿದೇಶೀಯರ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಭಾರೀ ಸಂಖ್ಯೆಯ ಐರೋಪ್ಯರು ಮತ್ತು ಅಮೆರಿಕನ್ನರು ಭಾರತೀಯ ಸಂಸ್ಕೃತಿಯಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ಅವರ ಪೈಕಿ ಹಲವರು ತಮ್ಮ ಮದುವೆಯನ್ನು ಭಾರತೀಯ ವಿಧಿವಿಧಾನ ಮತ್ತು ಪರಂರೆಗೆ ಅನುಗುಣವಾಗಿ ಮಾಡಿಕೊಂಡಿದ್ದಾರೆಎಂದೂ ಪಾವೋಲಾ ಬೆಲ್ಲಿ ಹೇಳಿದರು.

No comments:

Advertisement