My Blog List

Sunday, March 1, 2020

ದೆಹಲಿ ಹಿಂಸಾಚಾರ: ಯೋಧ ಮೊಹಮ್ಮದ್ ಅನೀಸ್‌ಗೆ ಭಾರತೀಯ ಸೇನೆಯಿಂದ ಮನೆ ನಿರ್ಮಾಣ

ದೆಹಲಿ ಹಿಂಸಾಚಾರ: ಯೋಧ ಮೊಹಮ್ಮದ್ ಅನೀsಸ್ಗೆ
ಭಾರತೀಯ ಸೇನೆಯಿಂದ ಮನೆ ನಿರ್ಮಾಣ
ನವದೆಹಲಿ: ಯೋಧ ಮೊಹಮ್ಮದ್ ಅನೀಸ್ ಅವರಿಗೆ ಮನೆ ಕಟ್ಟಿಸಿ ಕೊಡುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) 2020 ಫೆಬ್ರುವರಿ 29ರ ಶನಿವಾರ ಭರವಸೆ ನೀಡಿತು.
ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆ ಖಾಸ್ ಖಜೂರಿ ಗಾಲಿ ಪ್ರದೇಶದಲ್ಲಿದ್ದ ಗಡಿ ಭದ್ರತಾ ಪಡೆ ಯೋಧ ಮೊಹಮ್ಮದ್ ಅನೀಸ್ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಯೋಧ ಮೊಹಮ್ಮದ್ ಅನೀಸ್ ಮದುವೆಗೆ ಮನೆ ಕಟ್ಟಿಸಿ ಉಡುಗೊರೆಯಾಗಿ ನೀಡುವುದಾಗಿ ಬಿಎಸ್ಎಫ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಪುಷ್ಪೇಂದ್ರ ರಾಥೋಡ್ ಭರವಸೆ ನೀಡಿದರು.

ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಗುಂಪುಗಳ ಘರ್ಷಣೆಯಿಂದ  ಸಂಭವಿಸಿದ ಹಿಂಸಾಚಾರದಲ್ಲಿ ಇಲ್ಲಿಯವರೆಗೂ ಈಶಾನ್ಯ ದೆಹಲಿಯಲ್ಲಿ ೪೨ ಮಂದಿ ಸಾವನ್ನಪ್ಪಿದ್ದಾರೆ. ಹಲವರು ತಮ್ಮ ಮನೆ, ಅಂಗಡಿ ಕಳೆದುಕೊಂಡಿದ್ದಾರೆ. ಹೀಗೆ ಮನೆ, ಅಂಗಡಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಜನರಿಗೆ ದೆಹಲಿಯ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ ನೆರವು ನೀಡುತ್ತಿದೆ. ಹಾಗೆಯೇ ದೆಹಲಿ ಸರ್ಕಾರವೂ ಗಲಭೆ ಪೀಡಿತ ಪ್ರದೇಶದಲ್ಲಿ ನಲುಗಿರುವ ಜನರಿಗೆ ಅಗತ್ಯವಿರುವ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪೂರೈಸುತ್ತಿದೆ.

ಫೆಬ್ರವರಿ ೨೮ನೇ ತಾರೀಕಿನಂದು ಮನೆಯ ಹೊರಗಡೆ ಮೊಹಮ್ಮದ್ ಅನೀಸ್, ಬಿಎಸ್ಎಫ್ ಯೋಧ ಎಂಬುದಾಗಿ ಬರೆಯಲಾಗಿದ್ದ ನೇಮ್ ಪ್ಲೇಟ್ ಹಾಕಲಾಗಿತ್ತು. ಇದನ್ನು ನೋಡಿಯಾದರೂ ಗಲಭೆಕೋರರು ಮನೆಗೆ ಹಾನಿ ಮಾಡದೆ ಮುಂದೆ ಹೋಗುತ್ತಾರೆ ಎಂದು ಯೋz ಕುಟುಂಬ ಭಾವಿಸಿತ್ತು. ಯೋಧನ ಮನೆ ಎಂದು ವಿನಾಯಿತಿ ನೀಡುತ್ತಾರೆ ಎಂದು ಅವರು ಭಾವಿಸಿದ್ದರು.
ಆದರೆ
, ಗಲಭೆಕೋg ಗುಂಪು ಹೊರಗೆ ಬಾರೋ ಪಾಕಿಸ್ತಾನಿ, ನಿನಗೆ ಪೌರತ್ವ ಕೊಡುತ್ತೇವೆ ಎಂದು ಚೀರಿ, ನಂತರ ಗ್ಯಾಸ್ ಸಿಲಿಂಡರ್ ಎಸೆದು ಮನೆಗೆ ಬೆಂಕಿ ಹಚ್ಚಿತ್ತು ಎನ್ನಲಾಗಿದೆ.

ಮೊಹಮ್ಮದ್ ಅನೀಸ್ ಮದುವೆಗಾಗಿ ಮನೆಯಲ್ಲಿ ಕೂಡಿಟ್ಟಿದ್ದ ಲಕ್ಷ ರೂ. ನಗದು ಕೂಡಾ ಗಲಭೆಯಲ್ಲಿ ಸುಟ್ಟು ಕರಕಲಾಗಿದೆ. ಹಾಗೆಯೇ ಚಿನ್ನಾಭರಣಗಳು ಕೂಡ ಭಸ್ಮವಾಗಿವೆ ಎಂದು ಯೋಧನ ಅಳಲು ತೋಡಿಕೊಂಡಿದೆ.

ಗಲಭೆಕೋರರು ಮನೆಗೆ ಬೆಂಕಿ ಹಚ್ಚಿದ ವೇಳೆ ಅನೀಸ್ ಜೊತೆಗೆ ಕುಟುಂಬಸ್ಥರಿಗೆ ತೀವ್ರ ಗಾಯಗಳಾಗಿದ್ದವು. ತಂದೆ ಮೊಹಮ್ಮದ್ ಮುನೀಸ್, ಚಿಕ್ಕಪ್ಪ ಮೊಹಮ್ಮದ್ ಅಹ್ಮದ್, ತಂಗಿ ನೇಹಾ ಗಾಯಗೊಂಡಿದ್ದರು.

No comments:

Advertisement