
ಮೊಬ್ಯೆಲ್ ಮಹಿಮೆ
ಅನುಪ ಕೃಷ್ಣ ಭಟ್ ನೆತ್ರಕೆರೆ.
ಬೆಳ್ಳಂಬೆಳಗ್ಗೆ ಬೇಗನೆ ಎದ್ದು
ಗಟಗಟನೆ ಕಪ್ ಕಾಫಿಯ ಕುಡಿದು
ಮೂರ್ಖನಾಗಲಾರೆ ಇಂದು
ಎ0ದು ಅಂದುಕೊಂಡೆನು.
ಪಾರ್ಕಿನಲ್ಲಿ ನಡೆಯುತಿರಲು
ನಗುವ ಶಬ್ಧ ಕೇಳಿ ಬರಲು
ಮನದ ಒಳಗೇ ಹೆದರಿಕೊಂಡು
ಓಡಿ ಮನೆಗೆ ಬಂದೆನು.
ಹೆದರಿಕೊಂಡು ಬೆದರಿಕೊಂಡು
ಮನೆಗೆ ಬಂದು ವಿಷಯವನ್ನು
ದಡಬಡನೆ ಹೇಳುತಿರಲು
ಪತ್ನಿ ನಗುತಲಿದ್ದಳು,
ಎದ್ದುಬಿದ್ದು ನಕ್ಕಳು!
ಮಂಕನಂತೆ ಏನು ಕಥೆ
ಎಂದು ಪ್ರಶ್ನೆ ಕೇಳುತಿರಲು,
ನಗುತ ನಗುತ ಉಲಿದಳು
'ರಿಂಗಣವದು ರಿಂಗಣ'
ನಿಮ್ಮ ಮೊಬೈಲು ರಿಂಗಣ..!
ಇದನು ಕೇಳಿ ಎಲ್ಲ ನಗಲು
ಮೂರ್ಖನಾದೆ ಎಂದುಕೊಂಡು
'ಜಂಗಮ'ಕ್ಕೆ ಬ್ಯೆದುಕೊಂಡು
ಮತ್ತೆ ಹೊರಟೆ ಪಾರ್ಕಿಗೆ
ಮೂರ್ಖನಾಗಿ ಪಾರ್ಕಿಗೆ..!
No comments:
Post a Comment