Wednesday, October 1, 2008

ಗೋಕರ್ಣದ ಇತಿಹಾಸದಲ್ಲಿಯೇ ಪ್ರಥಮ

ಗೋಕರ್ಣದ ಇತಿಹಾಸದಲ್ಲಿಯೇ ಪ್ರಥಮ 


ಬೆಂಗಳೂರು/ಗೋಕರ್ಣ: ಗೋಕರ್ಣದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸುತ್ತಮುತ್ತಲಿನ ಹರಿಜನರೂ ಸೇರಿದಂತೆ ಎಲ್ಲ ಸಮಾಜ ಬಾಂಧವರು ಆತ್ಮಲಿಂಗದ ಪೂಜಾಸೇವೆಗೆ ಸಂಕಲ್ಪಿಸಿದ್ದಾರೆ.

ನವರಾತ್ರಿಯ ಒಂಬತ್ತೂ ದಿನಗಳಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ ಈ ಸೇವಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ.

ಈಗಾಗಲೇ ಹಾಲಕ್ಕಿ, ಪಡಸಾಲಿ, ಅಂಬಿಗ, ಹರಿಕಂತ್ರ, ಖಾರ್ವಿ, ಬೋವಿ, ದಾಬಿತ್, ಭಂಡಾರಿ, ದೇಶಭಂಡಾರಿ, ದೇವಾಡಿಗ, ಗುಡಿಗಾರ, ಮೊಗೇರ, ಮಡಿವಾಳ, ಪಟಗಾರ, ರಾಮಕ್ಷತ್ರಿಯ, ಗುನಗ, ಮರಾಠಿ, ಸವಿತ ಸಮಾಜ, ಸಾರಸ್ವತ, ಗೌಡ ಸಾರಸ್ವತ, ವಿಶ್ವಕರ್ಮ, ದೈವಜ್ಞ ಬ್ರಾಹ್ಮಣ, ವೈಶ್ಯವಾಣಿ, ನಾಡೋರ, ಮುಕ್ರಿ, ಹರಿಜನ, ನಾಮಧಾರಿ, ಗಾಣಿಗ, ಕೋಮಾರಪಂಥ, ಹವ್ಯಕ, ಹಬ್ಬು ಮೊದಲಾದ ಸಮಾಜದವರು ಸೇವೆ ಸಲ್ಲಿಸಲು ಮುಂದೆಬಂದಿದ್ದಾರೆ. ಬೆಳಗ್ಗೆ ಹಾಲಕ್ಕಿ ಮತ್ತು ಪಡಸಾಲಿ ಸಮಾಜದವರು ಸೆಪ್ಟೆಂಬರ್ 30 ಮಂಗಳವಾರದ ಪೂಜಾಸೇವೆಯನ್ನು ನಡೆಸಿಕೊಟ್ಟಿರುತ್ತಾರೆ.

ಜೊತೆಗೆ ಶ್ರೀ ಸ್ವಾಮೀಜಿಯವರು ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಗ್ರಾಮ ಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆ ಕ್ರಮವಾಗಿ ಗಂಗಾವಳಿ, ಹಿರೇಗುತ್ತಿ, ಬಿದ್ಯೂರು, ಗಂಗೇಕೊಳ್ಳ, ತದಡಿ, ಬಂಕಿಕುಡ್ಲು, ದೇವರಬಾವಿಯಲ್ಲಿ ನಡೆಯಲಿದೆ. 

No comments:

Advertisement