Saturday, October 11, 2008

ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ

ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ


ಬೆಂಗಳೂರು: ಕಾಸರಗೋಡಿನ ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯ ಶಾಲೆಯು ಬೆಂಗಳೂರಿನ ತನ್ನ ಹನುಮಂತನಗರ ಮತ್ತು ಮಲ್ಲೇಶ್ವರಂ ಶಾಖೆಗಳಲ್ಲಿ ಅಕ್ಟೋಬರ್ 11 ರ ಶನಿವಾರ ಮತ್ತು ಅಕ್ಟೋಬರ್ 12ರ ಭಾನುವಾರ ಅಸ್ತಮಾ ಮತ್ತು ಶ್ವಾಸಕೋಶ ಸಂಬಂಧೀ ಅಲರ್ಜಿ ರೋಗಗಳಿಗೆ ಉಚಿತ ಆಯುರ್ವೇದ ತಪಾಸಣೆ ಶಿಬಿರಗಳನ್ನು ಸಂಘಟಿಸಿದೆ.

ಸಂಸ್ಥೆಯು ಕಳೆದ 60 ವರ್ಷಗಳಿಂದ ಆಯುರ್ವೇದದಲ್ಲಿ ಸಂಶೋಧನೆ ನಡೆಸುತ್ತಿದ್ದು ಹಲವು ರೋಗಗಳಿಗೆ ಚಿಕಿತ್ಸೆ ಒದಗಿಸುತ್ತಿದೆ. ಶಿಬಿರದ ಬಗ್ಗೆ ವಿವರಗಳಿಗೆ ಡಾ. ವಿನಯ ಕುಮಾರ.ಕೆ (ದೂ: 080-65791889) ಮತ್ತು ಡಾ. ಸುಮಿತ್ ಕುಮಾರ್ (ದೂ: 9980248254) ಅವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಜಯಗೋವಿಂದ ಉಕ್ಕಿನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Advertisement