ನಾಗತಿಹಳ್ಳಿ ಸಂಸ್ಕೃತಿ ಹಬ್ಬ
ನಾಗತಿಹಳ್ಳಿಯ 'ಅಭಿವ್ಯಕ್ತಿ' ಬಳಗದ ವತಿಯಿಂದ ಮಾರ್ಚ್ 27, 28, 29 ಮತ್ತು 30ರಂದು ನಾಲ್ಕು ದಿನಗಳ ಕಾಲ ಸಂಸ್ಕೃತಿ ಹಬ್ಬ. ಈ ದಿನಗಳಲ್ಲಿ ರಾಜ್ಯ ಮಟ್ಟದ ಚಿತ್ರಕಥಾ ಶಿಬಿರ ನಡೆಯಲಿದ್ದು ರಾಜ್ಯಾದ್ಯಂತದಿಂದ ಆಯ್ಕೆಯಾದ 50 ಮಂದಿ ಅರ್ಹ ವ್ಯಕ್ತಿಗಳು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರಲ್ಲಿ ಬೆಂಗಳೂರಿನಿಂದ ನೆಲಮಂಗಲ ಕುಣಿಗಲ್ ಮಾರ್ಗವಾಗಿ 110ನೇ ಕಿ.ಮೀ.ಯಲ್ಲಿ ಇರುವ ನಾಗತಿಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿರುವ 'ಸಿಹಿ ಕನಸು' ಬಯಲು ರಂಗಮಂದಿರದಲ್ಲಿ ನಡೆಯುವ ಈ ಶಿಬಿರದಲ್ಲಿ ತಜ್ಞರಿಂದ ಉಪನ್ಯಾಸ, ಚರ್ಚೆ, ಜಾಗತಿಕ ಅಭಿಜಾತ ಚಿತ್ರಗಳ ಪ್ರದರ್ಶನ ಇತ್ಯಾದಿ ನಡೆಯಲಿವೆ ಎಂದು ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ. ವಿವರಗಳಿಗೆ ಈ ಕೆಳಗಿನ ಆಮಂತ್ರಣ ಪತ್ರಿಕೆಯನ್ನು ಕ್ಲಿಕ್ ಮಾಡಿರಿ.
No comments:
Post a Comment