Saturday, August 1, 2009

ಇಂದಿನ ಇತಿಹಾಸ History Today ಜುಲೈ 27

ಇಂದಿನ ಇತಿಹಾಸ

ಜುಲೈ 27

ನಕ್ಸಲ್ ಚಳವಳಿಯ ಧುರೀಣ ಚಾರು ಮಜುಂದಾರ್ ಅವರು ಕಾರಾಗೃಹದಲ್ಲಿ ಈದಿನ ನಿಧನರಾದರು. ನಕ್ಸಲ್ ಚಳವಳಿಯ ನೇತೃತ್ವ ವಹಿಸಿ ಅವರು ಬಹಳ ಕಾಲ ಭೂಗತರಾಗಿ ಚಳವಳಿ ಮುಂದುವರೆಸಿದ್ದರು.

2008: ಗುಜರಾತಿನ ಅಹಮದಾಬಾದ್ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 45ಕ್ಕೆ ಹಾಗೂ ಗಾಯಾಳುಗಳ ಸಂಖ್ಯೆ 162ಕ್ಕೆ ಏರಿತು.

2006: ಹಿರಿಯ ಜಾನಪದ ವಿದ್ವಾಂಸ ಮತಿಘಟ್ಟ ಕೃಷ್ಣಮೂರ್ತಿ (94) ಬೆಂಗಳೂರಿನಲ್ಲಿ ನಿಧನರಾದರು. ಹಾಸನ ಮತಿಘಟ್ಟ ಮೂಲದ ಕೃಷ್ಣಮೂರ್ತಿ `ಕಳಸಾಪುರದ ಹುಡುಗರು', `ಗೃಹಿಣಿ ಗೀತ', `ಸಾಂಪ್ರದಾಯಿಕ ಗೀತೆಗಳು', `ಶಕುನದ ಹಕ್ಕಿ', `ಹೊನ್ನ ಹೊತ್ತಿಗೆ', `ಮರುಗಿ', `ನಾಡಪದಗಳು' `ನಮ್ಮ ಹಳ್ಳಿಯ ಹಾಡು' ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದರು. 50,000ಕ್ಕೂ ಹೆಚ್ಚು ಜನಪದ ಹಾಡು ಕಥೆಗಳನ್ನು ಸಂಗ್ರಹಿಸಿದ್ದಲ್ಲದೆ, ಬ್ರಿಟಿಷ್ ಆಡಳಿತ ವಿರುದ್ಧ ಹೋರಾಡಿ ಜೈಲಿಗೂ ಹೋಗಿದ್ದರು.

2006: ಭಾರತ- ಅಮೆರಿಕ ಪರಮಾಣು ಶಕ್ತಿ ಒಪ್ಪಂದವನ್ನು ಅಮೆರಿಕದ ಕಾಂಗ್ರೆಸ್ (ಪ್ರತಿನಿಧಿಗಳ ಸಭೆ) ಅನುಮೋದಿಸಿತು. 4 ಗಂಟೆಗಳ ಚರ್ಚೆಯ ಬಳಿಕ 435 ಸದಸ್ಯ ಬಲದ ಸದನವು 359 ಪರ ಮತ್ತು 68 ವಿರೋಧಿ ಮತಗಳಿಂದ ಒಪ್ಪಂದಕ್ಕೆ ಅನುಮೋದನೆ ನೀಡಿತು.

2006: ಬೆಂಗಳೂರಿನ ಕಾಲ್ ಸೆಂಟರ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಕೊಲೆ ಆರೋಪಿ, ಆಕೆಯ ಪ್ರಿಯಕರ ಗುರುರಾಜ ಕಿಶೋರನನ್ನು ಪೊಲೀಸರು ಬಂಧಿಸಿದರು. ಮದುವೆಯಾಗಲು ನಿರಾಕರಿಸಿದ್ದರಿಂದ ಕೊಲೆ ಮಾಡಿದುದಾಗಿ ಆತ ಪೊಲೀಸರಲ್ಲಿ ತಪ್ಪು ಒಪ್ಪಿಕೊಂಡ.

2006: ಕ್ರೊಯೇಷಿಯಾದ ಜಾಗ್ರೆಬಿನಲ್ಲಿ ನಡೆದ 49ನೇ ಐಎಸ್ಸೆಸ್ಸೆಫ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನ ಪುರುಷರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು.

2006: ರಾಷ್ಟ್ರದ ಸಮುದಾಯ ಸೇವೆಗೆ ತೊಡಗಿಸಿಕೊಂಡವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಕೆನಡಾದ ಎರಡನೇ ಉನ್ನತ ನಾಗರಿಕ ಪ್ರಶಸ್ತಿ `ಆರ್ಡರ್ ಆಫ್ ಕೆನಡಾ'ಕ್ಕೆ ಭಾರತದ ಅರ್ಥಶಾಸ್ತ್ರಜ್ಞ ಮಾನವ ಹಕ್ಕುಗಳ ಹೋರಾಟಗಾರ ವಿಠ್ಠಲ್ ರಾಜನ್ ಮತ್ತು ಆರೋಗ್ಯ ಸೇವಾ ಕಾರ್ಯಕರ್ತೆ ಲಲಿತಾ ಮಲ್ಹೋತ್ರ ಆಯ್ಕೆಯಾದರು.

1992: ಖ್ಯಾತ ಹಿಂದಿ ಚಿತ್ರನಟ ಅಮ್ಜದ್ ಖಾನ್ ನಿಧನ.

1972: ನಕ್ಸಲ್ ಚಳವಳಿಯ ಧುರೀಣ ಚಾರು ಮಜುಂದಾರ್ ಅವರು ಕಾರಾಗೃಹದಲ್ಲಿ ಈದಿನ ನಿಧನರಾದರು. ನಕ್ಸಲ್ ಚಳವಳಿಯ ನೇತೃತ್ವ ವಹಿಸಿ ಅವರು ಬಹಳ ಕಾಲ ಭೂಗತರಾಗಿ ಚಳವಳಿ ಮುಂದುವರೆಸಿದ್ದರು.

1928: ಸಾಹಿತಿ ಶ್ರೀನಿವಾಸ ಕುಲಕರ್ಣಿ ಜನನ.

1928: ಖ್ಯಾತ ಲೇಖಕ, ವಕೀಲ, ಪತ್ರಕರ್ತ ರಾಮೇಶ್ವರ ಸಹಾಯ್ ಸಕ್ಸೇನಾ ಜನನ.

1910: ಸಾಹಿತಿ ಜೋಳದರಾಶಿ ದೊಡ್ಡನಗೌಡರ ಜನನ.

1910: ಖ್ಯಾತ ಗಾಯಕ ಬಂದೇ ಅಲಿಖಾನ್ ನಿಧನ.

1906: ಮದ್ರಾಸು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಪಂಡಿತ, ನಿಘಂಟು ತಜ್ಞ, ಸಂಶೋಧಕ ಪ್ರೊ. ಮರಿಯಪ್ಪ ಭಟ್ಟ (27-7-1906ರಿಂದ 21-3-1980) ಅವರು ಗೋವಿಂದ ಭಟ್ಟ- ಕಾವೇರಿ ಅಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜನಿಸಿದರು. ಹವ್ಯಕ- ಇಂಗ್ಲಿಷ್ ನಿಘಂಟು, ತುಳು- ಇಂಗ್ಲಿಷ್ ನಿಘಂಟು, ರೆ.ಎಫ್. ಕಿಟೆಲ್ ಅವರ ಕನ್ನಡ- ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ ವಿಸ್ತಾರಗೊಳಿಸಿ, ರಚಿಸಿದ ನಿಘಂಟು ಅವರ ಮಹತ್ವದ ಕಾಣಿಕೆಗಳಲ್ಲಿ ಕೆಲವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement