My Blog List

Friday, October 3, 2014

ಏಷ್ಯಾಡ್ ಕಬಡ್ಡಿ: ಭಾರತಕ್ಕೆ "ಡಬ್ಬಲ್ ಸ್ವರ್ಣ' India bags Double Gold in Asiad

ಏಷ್ಯಾಡ್ ಕಬಡ್ಡಿ: ಭಾರತಕ್ಕೆ ಡಬ್ಬಲ್ ಸ್ವರ್ಣ ಪದಕ


ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನಿನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾರತ ‘ಡಬ್ಬಲ್ ಸ್ವಣ ಪದಕ’ಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ಭಾರತದ ಮಹಿಳೆಯರ ತಂಡ ಮೊದಲಿಗೆ ಇರಾನಿನ ಮಹಿಳಾ ತಂಡವನ್ನು ಪರಾಭವಗೊಳಿಸುವ ಮೂಲಕ ಭಾರತದ ಮಹಿಳಾ ಕಬಡ್ಡಿ ತಂಡವು ಸತತ ಎರಡನೇ ಬಾರಿಗೆ ಏಷ್ಯಾಡ್ ಕಬಡ್ಡಿ ಸ್ವರ್ಣ ಪದಕವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

31-21 ಅಂಕಗಳ ಅಂತರದೊಂದಿಗೆ ಈ ಪದಕ ಭಾರತೀಯ ಮಹಿಳೆಯರ ಪಾಲಾಯಿತು. ದಿನದ ಆರಂಭದಲ್ಲಿ ಭಾರತ ಮಹಿಳೆಯರ ಮೂಲಕ ಗೆಲುವು ಪಡೆದರೆ ಬಳಿಕ ಪುರುಷರ ಮೂಲಕವೂ ಕಬಡ್ಡಿ ಪಂದ್ಯದಲ್ಲಿ ಸತತ 7ನೇ ಬಾರಿಗೆ ಸ್ವರ್ಣ ಪದಕವನ್ನು ಗೆದ್ದುಕೊಂಡಿತು.

ಪುರುಷರ ಕಬಡ್ಡಿ: ಭಾರತಕ್ಕೆ ಸತತ 7ನೇ ಏಷ್ಯಾಡ್ ಸ್ವರ್ಣ

ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನಿನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಕಬಡ್ಡಿ ತಂಡವು ಸತತ 7ನೇ ಬಾರಿಗೆ ಸ್ವರ್ಣ ಪದಕವನ್ನು ಗೆದ್ದುಕೊಂಡಿತು.

ಭಾರತದ ತಂಡವು ಬಿರುಸಿನ ಸ್ಪರ್ಧೆಯಲ್ಲಿ 27-25 ಅಂಕಗಳ ಅಂತರದಲ್ಲಿ ಭಾರಿ ಹೋರಾಟ ನೀಡಿದ ಇರಾನ್ ತಂಡವನ್ನು ಪರಾಭವಗೊಳಿಸಿ ಚಿನ್ನದ ಪದಕವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಏಷ್ಯನ್ ಕ್ರೀಡಾಕೂಟಕ್ಕೆ 1990ರಲ್ಲಿ ಕಬಡ್ಡಿಯನ್ನು ಸೇರ್ಪಡೆ ಮಾಡಿದ ಲಾಗಾಯ್ತಿನಿಂದಲೂ ಭಾರತವು ಚಿನ್ನದ ಪದಕವನ್ನು ಗೆಲ್ಲುತ್ತಲೇ ಬಂದಿತ್ತು.

ಇಂಚೋನ್ ಸ್ಪರ್ಧೆಯಲ್ಲಿ ಮೊದಲ 20 ನಿಮಿಷಗಳಲ್ಲಿ 10 ಅಂಕಗಳ ಭಾರಿ ಮುನ್ನಡೆ ಸಾಧಿಸಿದ ಇರಾನ್ ಭಾರತವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಪಂದ್ಯದ 37ನೇ ನಿಮಿಷದಲ್ಲಷ್ಟೇ ಭಾರತೀಯ ತಂಡಕ್ಕೆ ಇರಾನ್ ವಿರುದ್ಧ ಮುನ್ನಡೆ ಸಾಧಿಸಲು ಸಾಧ್ಯವಾಯಿತು. 
India bags Double Gold in Asiad

Incheon:
The Indian men's kabaddi team clinched its seventh successive gold medal at the Asian Games after coming from behind to beat a spirited Iran 27-25 in the summit clash here today, 3rd October 2014. Earlier the Indian Woman's Kabaddi Team won Gold by defeating Iranian team. 

The Indian mens team, which has been winning gold ever since the sport was introduced on the Asiad roster in 1990, was given a massive scare by Iran, who had finished runners-up in the 2010 edition as well.


 The Iranians took a massive 10-point lead in the first 20 minutes before the Indians got their act together to nullify the deficit and edge past in the closing few minutes of the match. In fact, the Indians managed to take a lead only in the 37th minute of the match.

No comments:

Advertisement