My Blog List

Saturday, November 22, 2014

ವಿಶ್ವ ಆಯುರ್ವೇದ ಸಮ್ಮೇಳನ: ಡಾ. ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ

ವಿಶ್ವ ಆಯುರ್ವೇದ ಸಮ್ಮೇಳನ: ಡಾ. ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ


ಬೆಳಗಾವಿ: ಜನ್ಮ ನೀಡಿದ ತಂದೆಯ ಮೃತದೇಹವನ್ನು ಛೇದನಗೊಳಿಸುವ ಮೂಲಕ ೨೦೧೦ ನವೆಂಬರ ೧೩ ರಂದು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಜಾಗತಿಕ ಇತಿಹಾಸ ಬರೆದ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ನವದೆಹಲಿಯ
ಪ್ರಗತಿ ಮೈದಾನದಲ್ಲಿ ಇತ್ತೀಚೆಗೆ ನಡೆದ ನೇ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೀಲಾಂಜನ ಸಾನಿಯಾಳ ಅವರು ಬೆಳಗಾವಿ ಕೆಎಲ್‌ಇ ಆಯುರ್ವೇದ ಕಾಲೇಜಿನ ಶರೀರ ರಚನಾ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಪ್ರಶಸ್ತಿ ಏಕೆ?
ಡಾ.ಮಹಾಂತೇಶ ರಾಮಣ್ಣವರ ಜನಸಾಮಾನ್ಯರಲ್ಲಿರುವ ಮೂಢನಂಬಿಕೆ ಹಾಗೂ ಧಾರ್ಮಿಕ ಕಟ್ಟಳೆಗಳಿಂದ ಹೊರಬಂದು ದೇಹದಾನಕ್ಕೆ ಪ್ರೇರಣೆಯಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ರಕ್ತ, ನೇತ್ರ, ದೇಹ, ಅಂಗಾಂಗಗಳ ದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಟ್ರಸ್ಟಿನ ಮೂಲಕ ರಾಜ್ಯದ ವಿವಿಧ ವೈದ್ಯಕೀಯ ಆಯುರ್ವೇದ, ಹೋಮಿಯೋಪತಿ, ವೈದ್ಯಕೀಯ ಮಹಾವಿದ್ಯಾಲಯಗಳಿಗೆ ೨೫ ಕ್ಕೂ ಹೆಚ್ಚು ಮೃತದೇಹಗಳನ್ನು ದಾನವಾಗಿ ನೀಡಿ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ಅನುವು ಮಾಡಿಕೊಟ್ಟಿದ್ದಾರೆ. ದೇಶಾದ್ಯಂತ ದೇಹದಾನಕ್ಕಾಗಿ ಪ್ರೇರೇಪಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಒಂದು
ಕಾಲಕ್ಕೆ ಸಂಶೋಧನೆಗೆಂದೇ ಸಿಗುವ ದೇಹಗಳ ಸಂಖ್ಯೆ ಹಾಗೂ ದೇಹದಾನ ಮಾಡುವವರ ಸಂಖ್ಯೆ ಕಡಿಮೆ ಇತ್ತು. ಈಗ ಜನರೇ ಸ್ವಯಂ ಸ್ಪೂರ್ತಿಯಿಂದ ದೇಹದಾನಕ್ಕೆ ಮುಂದಾಗುತ್ತಿದ್ದಾರೆ. ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ಗೆ ಸ್ವಯಂ ಪ್ರೇರಿತರಾಗಿ ದೇಹದಾನ ಮಾಡಲು ಜನಸಾಗರವೇ ಹರಿದು ಬರುತ್ತಿದೆ. ಮಾನವೀಯ ನೆಲೆಗೆ, ವೈಜ್ಞಾನಿಕ ಸಂಶೋಧನೆಗೆ ಸಹಕರಿಸುವ ಸೇವೆಯಲ್ಲಿ ಜನ ತೊಡಗಿಕೊಳ್ಳಲು ಜನರನ್ನು ಪ್ರೇರೇಪಿಸಿದ್ದು, ಅದು ನಿರೀಕ್ಷೆ ಮೀರಿ ಫಲ ನೀಡುತ್ತಿದೆ. ಇದು ತಂದೆಯ ಕೊನೆಯಾಸೆಯೂ ಆಗಿತ್ತು. ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ತಂದೆಯ ಕೊನೆಯ ಆಸೆ ಈಡೇರಿಸಿದ್ದಕ್ಕಾಗಿ ಮಗನಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು.

ಪ್ರಶಸ್ತಿ
ವಿತರಣಾ ಸಮಾರಂಭದಲ್ಲಿ ಕೇಂದ್ರೀಯ ವೈದ್ಯ ಪದ್ಧತಿ ಆಯುರ್ವೇದ ಪರಿಷತ್ ಅಧ್ಯಕ್ಷ ಡಾ.ವನಿತಾ ಮುರಳಿಕುಮಾರ ಸೇರಿದಂತೆ ಸುಮಾರು ೩೦ ದೇಶಗಳ ಆಯುರ್ವೇದ ವೈದ್ಯ ವಿಜ್ಞಾನಿಗಳು, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರು, ಕೇಂದ್ರ ಆಯುಷ್ ಇಲಾಖೆಯ ಉನ್ನತ ಅಧಿಕಾರಿಗಳು ಡಾ. ಬಾಲಪ್ರಸಾದ, ವಿಜ್ಞಾನ ಭಾರತಿ, ಪದ್ಮಶ್ರೀ ಡಾ. ವಿಜಯ ಭಾಟ್ಕರ, ಡಾ. ಎಸ್. ಕೆ. ಬನ್ನಿಗೊಳ, ಡಾ. ಜಿ. ಬಿ. ಪಾಟೀಲ, ಡಾ. . ಎಮ್. ಗೌಡರ, ಡಾ.. ರಾಜಶೇಖರ ಗಾಣಿಗೇರ, ಡಾ. ಬಿ. ಎಸ್. ಪ್ರಸಾದ ಡಾ. ಪ್ರಸನ್ನ ಎನ್. ರಾವ ಉಪಸ್ಥಿತರಿದ್ದರು.

ಫೋಟೋ
ಶೀರ್ಷಿಕೆ: ಬೆಳಗಾವಿ - ತಂದೆಯ ಮೃತದೇಹವನ್ನು ಛೇದನಗೊಳಿಸಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಜಾಗತಿಕ ಇತಿಹಾಸ ಬರೆದ ಮಗ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ದೆಹಲಿಯ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.


No comments:

Advertisement