My Blog List

Sunday, November 3, 2019

ಶಿವಸೇನೆಗೆ ಕಾಂಗ್ರೆಸ್ ಬೆಂಬಲದ ಪ್ರಶ್ನೆಯೇ ಇಲ್ಲ: ಸೋನಿಯಾ ಗಾಂಧಿ

ಶಿವಸೇನೆಗೆ ಕಾಂಗ್ರೆಸ್ ಬೆಂಬಲದ ಪ್ರಶ್ನೆಯೇ ಇಲ್ಲ:
ಸೋನಿಯಾ ಗಾಂಧಿ

ನವದೆಹಲಿ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ 2019 ನವೆಂಬರ್ 02ರ ಶನಿವಾರ ರಾತ್ರಿ ಸ್ಪಷ್ಟಪಡಿಸಿದರು.

 ಬಿಜೆಪಿ ಜತೆ ಸರ್ಕಾರ ರಚನೆಗೆ ಮುಂದಾಗದ ಶಿವಸೇನೆಗೆ ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ್ರ ಬೆಂಬಲ ನೀಡಲಿದೆ ಎನ್ನಲಾಗಿತ್ತು.

ಶಿವಸೇನೆ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸಬಹುದು ಎಂದು ಮಹಾರಾಷ್ಟ್ರದ ಕೆಲವು ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶಿವಸೇನೆ ಜತೆಗಿನ ಮೈತ್ರಿ ಬಗ್ಗೆ ಸೋನಿಯಾ ಗಾಂಧಿ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದು ವೇಳೆಯಲ್ಲಿ ಕಾಂಗ್ರೆಸ್ ವಿರೋಧಿ ನಿಲುವು ಹೊಂದಿರುವ ಹಾಗೂ ಬಿಜೆಪಿಯೊಂದಿಗೆ ಚುನಾವಣಾಪೂರ್ಣ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿದವು.
ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ನೇತೃತ್ವದ ತಂಡ ಸೋನಿಯಾ ಗಾಂಧಿಯವರ ಮುಂದೆ ಶಿವಸೇನೆ ಜತೆಗಿನ ಮೈತ್ರಿ ಕುರಿತು ಪ್ರಸ್ತಾಪ ಮಾಡಿತ್ತು. ಬಾಳಾಸಾಹೇಬ್ ಥೋರಟ್ ಜತೆಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್, ವಿಜಯ್ ವಡೇಟ್ಟಿವಾರ್ ಮತ್ತು ಮಣಿಕ್ರಾವ್ ಠಾಕ್ರೆ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದರು.

ಈಗಾಗಲೇ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಶಿವಸೇನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬೆನ್ನಲ್ಲೇ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ಸಾಧ್ಯವಿಲ್ಲ ಎಂಬ ಸೋನಿಯಾ ಗಾಂಧಿ ಅವರ ಸಂದೇಶ ಉದ್ದವ್ ಠಾಕ್ರೆ ಕನಸಿಗೆ ತಣ್ಣೀರೆರಚಿದೆ ಎಂದು ವರದಿಗಳು ಹೇಳಿವೆ.


No comments:

Advertisement