My Blog List

Sunday, November 3, 2019

ಮಹಾರಾಷ್ಟ್ರ: ಶಿವಸೇನೆ, ಬಿಜೆಪಿಯಿಂದ ‘ಪ್ಲಾನ್ ಬಿ’ ಸಿದ್ಧ

ಮಹಾರಾಷ್ಟ್ರ: ಶಿವಸೇನೆ, ಬಿಜೆಪಿಯಿಂದಪ್ಲಾನ್ ಬಿ’ ಸಿದ್ಧ
ಮುಂಬೈ: ಮುಖ್ಯಮಂತ್ರಿ ಹುದ್ದೆ ಹಾಗೂ ಅಧಿಕಾರದ ಸಮಾನ ಹಂಚಿಕೆಯ ಪಟ್ಟು ಹಿಡಿದಿರುವ ಶಿವಸೇನೆ ತನ್ನ ಪಟ್ಟನ್ನು ಸ್ವಲ್ಪ ಸಡಿಸಿಲಿದ್ದರೂ ಸರ್ಕಾರ ರಚನೆಯ ತಿಕ್ಕಾಟವನ್ನು ಮುಂದುವರೆಸಿವೆ ಎಂಬ ವರದಿಗಳ ಮಧ್ಯೆಯೇ ನ್ಯಾಷನಲಿಸ್ಟ್  ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು 2019 ನವೆಂಬರ್ 02ರ ಶನಿವಾರ ಮಳೆಹಾನಿ ಪ್ರದೇಶಗಳ ತಮ್ಮ ಭೇಟಿಯನ್ನು ದಿಢೀರನೆ ರದ್ದುಪಡಿಸಿ ಮುಂಬೈಗೆ ವಾಪಸಾಗಿ, ಪಕ್ಷ ಪ್ರಮುಖರ ಸಭೆ ಕರೆದರು.
ಶರದ್ ಪವಾರ್ ಅವರು ತಮ್ಮ ದೆಹಲಿ ಭೇಟಿಯನ್ನೂ ಹಿಂದೂಡಿದ್ದಾರೆ ಎಂದು ನಂಬಲಾಗಿದ್ದು, ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಲು ತೆರಳುವ ಮುನ್ನವೇ ಮುಂಬೈಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ಕರೆದರು.
ಶರದ್ ಪವಾರ್ ಅವರು ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ  ಕಾಂಗ್ರೆಸ್ ಮುಖ್ಯಸ್ಥೆ ಜೊತೆಗೆ ಚರ್ಚಿಸಲು ನವೆಂಬರ್ ೪ರ ಸೋಮವಾರ ದೆಹಲಿಗೆ ತೆರಳಬೇಕಾಗಿತ್ತು. ಈಗಿನ ವರದಿಗಳ ಪ್ರಕಾರ ಪವಾರ್ ಅವರು ಭಾನುವಾರವೇ ದೆಹಲಿಗೆ ತೆರಳಬಹುದು ಎಂದು ಹೇಳಲಾಯಿತು.
ಬೆಳವಣಿಗೆಗಳ ಬಗ್ಗೆ ಅರಿವು ಇರುವ ವ್ಯಕ್ತಿಗಳ ಪ್ರಕಾರ ಶಿವಸೇನೆಯ ಜೊತೆಗೆ ಸರ್ಕಾರ ರಚಿಸಿ ಕಾಂಗ್ರೆಸ್ ಪಕ್ಷದಿಂದ ಪರೋಕ್ಷ ಬೆಂಬಲ ಪಡೆಯುವ ಸಾಧ್ಯತೆಗಳನ್ನು ಎನ್ಸಿಪಿಯು ಶೋಧಿಸುತ್ತಿದೆ ಎನ್ನಲಾಯಿತು.
ಸೇನೆಯಪ್ಲಾನ್ ಬಿ’ ಎಂಬುದಾಗಿ ಬಣ್ಣಿಸಲಾಗಿರುವ ವ್ಯವಸ್ಥೆಯ ಪ್ರಕಾರ ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ಬೆಂಬಲದ ಜೊತೆಗೆ ಸರ್ಕಾರ ರಚನೆಯ ಹಂಚಿಕೆ ರೂಪುಗೊಳ್ಳುತ್ತಿದೆ  ಎಂದು ಹೇಳಲಾಯಿತು. ಪಕ್ಷದ ಕೆಲವು ವಲಯಗಳಲ್ಲಿ ಶಿವಸೇನೆ ಜೊತೆಗೆ ಸರ್ಕಾರ ರಚನೆಗೆ ವಿರೋಧ ಇರುವ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಬಯಸುತ್ತಿಲ್ಲ ಎಂದು ಹೇಳಲಾಯಿತು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಅಕ್ಟೋಬರ್ 31ರ ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ಕರೆದಿದ್ದ ಪಕ್ಷದ ಆಂತರಿಕ ಪ್ರಮುಖರ ಸಭೆಯಲ್ಲಿ ಯೋಜನೆ ಬಗ್ಗೆ ಚರ್ಚಿಸಲಾಗಿತ್ತು ಎಂದು ಹೇಳಲಾಯಿತು. ಶಿವಸೇನಾ ನಾಯಕ ಸಂಜಯ್ ರಾವತ್ ಅವರು ದಕ್ಷಿಣ ಮುಂಬೈಯಲ್ಲಿನ ನಿವಾಸದಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ಬಳಿಕ ಸಭೆ ನಡೆದಿತ್ತು.

ಕಳೆದ ೩೦ ವರ್ಷಗಳಿಂದ ಮಿತ್ರ ಪಕ್ಷಗಳಾಗಿರುವ ಶಿವಸೇನೆ ಮತ್ತು ಬಿಜೆಪಿ ಅಕ್ಟೋಬರ್ ೨೪ರಂದು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಂದಿನಿಂದ ಪರಸ್ಪರ ಕಚ್ಚಾಟ ನಡೆಸುತ್ತಿವೆ. ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡು ಪಕ್ಷಗಳು ಒಟ್ಟು ೧೬೧ ಸ್ಥಾನಗಳನ್ನು (ಬಿಜೆಪಿ ೧೦೫ ಮತ್ತು ಶಿವಸೇನೆ ೫೬) ಸ್ಥಾನಗಳನ್ನು ಗೆದ್ದಿವೆ. ಆದರೆ ಮುಖ್ಯಮಂತ್ರಿ ಸ್ಥಾನದ ರೊಟೇಶನ್ ವ್ಯವಸ್ಥೆ ಹಾಗೂ ಪ್ರಮುಖ ಖಾತೆಗಳ ಹಂಚಿಕೆ ಬಗ್ಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗದೆ ದಿನ ತಳ್ಳುತ್ತಿವೆ. ಎನ್ಸಿಪಿಯು ೫೪ ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿದೆ. ಸರ್ಕಾರ ರಚಿಸಲು ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ೧೪೫ ಸದಸ್ಯರ ಬೆಂಬಲದ ಅಗತ್ಯ ಇದೆ.

ಶಿವಸೇನೆಯು ಶೀಘ್ರದಲ್ಲೇ ಮಾತುಕತೆಗೆ ಬರಬಹುದು ಎಂದು ಬಿಜೆಪಿ ಹಾರೈಸಿದೆ.  ಸರ್ಕಾರ ರಚನೆಯ ಗಡುವು ಮುಗಿಯಲು ಇನ್ನು ಕೆಲವೇ ದಿನಗಳು ಉಳಿದಿರುವುದರಿಂದ ಸರ್ಕಾರ ರಚನೆಗೆ ಸಂಬಂಧಿಸಿದಂತೆ ನಮ್ಮ ಮಿತ್ರ ಪಕ್ಷ ಶಿವಸೇನೆಯ ಜೊತೆಗೆ ಯಾವುದೋ ಒಂದು ರೀತಿಯ ಮಾತುಕತೆ ನಡೆಯುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿಯ ಹಿರಿಯ  ನಾಯಕರೊಬ್ಬರು ನುಡಿದರು.

ಬಿಜೆಪಿ ಮತ್ತು ಶಿವಸೇನೆ ಶೀಘ್ರದಲ್ಲೇ ವಿಷಯವನ್ನು ಇತ್ಯರ್ಥ ಪಡಿಸಿಕೊಳ್ಳುವುವು ಎಂಬ ಖಚಿತ ಭರವಸೆ ನನಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಶನಿವಾರ ಹೇಳಿದರು.
ಮಧ್ಯೆ, ಶಿವಸೇನೆಯು ತನ್ನ ತೋಳು ತಿರುಚುವ ಕಾಯಕ ಮುಂದುವರೆಸಿದಲ್ಲಿ ಸ್ವತಃ ಸರ್ಕಾರ ರಚನೆಯ ಹಕ್ಕು ಪ್ರತಿಪಾದನೆಗಾಗಿ ಬಿಜೆಪಿ ಕೂಡಾ ತನ್ನಪ್ಲಾನ್ ಬಿಸಿದ್ಧ ಪಡಿಸಿದೆ ಎಂದು ವರದಿಗಳು ಹೇಳಿವೆ.

ಏಕೈಕ ದೊಡ್ಡ ಪಕ್ಷವಾಗಿ ನಮ್ಮ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಮತ್ತು ಬಳಿಕ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಗೆ ಇಳಿಯಲಿದ್ದಾರೆ. ನಮಗೆ ಕೂಡಾ ೧೫ ಮಂದಿ ಪಕ್ಷೇತರ ಶಾಸಕರ ಬೆಂಬಲ ದೆಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಪದಾಧಿಕಾರಿಯೊಬ್ಬರು ನುಡಿದರು.

ಏತನ್ಮಧ್ಯೆ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (), ರಾಷ್ಟ್ರೀಯ ಸಮಾಜ ಪಕ್ಷ, ರಯಾತ್ ಕ್ರಾಂತಿ ಸಂಘಟನೆ ಮತ್ತಿತರ ಬಿಜೆಪಿಯ ಮಿತ್ರ ಪಕ್ಷಗಳು ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಮನವಿ ಮಾಡಿದವು.  ೧೦೫ ಸ್ಥಾನಗಳೊಂದಿಗೆ ಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿರುವುದಲ್ಲದೆ ೧೫ ಮಂದಿ ಪಕ್ಷೇತರರ ಬೆಂಬಲವನ್ನು ಕೂಡಾ ಹೊಂದಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಪಕ್ಷಗಳು ತಿಳಿಸಿವೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದರು.

ಇನ್ನೊಂದು ಬೆಳವಣಿಗೆಯಲ್ಲಿ, ಕಾಂಗ್ರೆಸ್ ರಾಜ್ಯಸಬಾ ಸದಸ್ಯ ಹುಸೈನ್ ದಲವಾಯಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದು ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗಾಗಿ ಶಿವಸೇನೆಯನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ.

ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಭಾರೀ ಭಿನ್ನಾಭಿಪ್ರಾಯ ಇದೆ. ರಾಷ್ಟ್ರಪತಿ ಚುನಾವಣೆಗಳಲ್ಲಿ ಇದೇ ಶಿವಸೇನೆ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಅವರನ್ನು ಬೆಂಬಲಿಸಿತ್ತು. ಆದ್ದರಿಂದ ಸರ್ಕಾರ ರಚನೆಗೆ ಶಿವಸೇನೆ ಬೆಂಬಲ ಕೋರಿದರೆ ಕಾಂಗ್ರೆಸ್ ಅದನ್ನು ಬೆಂಬಲಿಸಬೇಕುಎಂದು ಪತ್ರವು ತಿಳಿಸಿದೆ.

ಮೆದುವಾದ ಸೇನೆ: ಇದಕ್ಕೆ ಮುನ್ನ ಬಂದ ಇನ್ನೊಂದು ವರದಿಯು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತನ್ನ ಪಟ್ಟನ್ನು ಶಿವಸೇನೆ ಸಡಿಲಿಸಿದೆ ಎಂದೂ ತಿಳಿಸಿದೆ. ತಾನುಮೈತ್ರಿ ಧರ್ಮವನ್ನು ಪಾಲಿಸುವುದಾಗಿ ಶಿವಸೇನೆ ಹೇಳಿದ್ದು, ಇದು ಪಟ್ಟು ಸಡಿಲಿಸಿರುವುದರ ಸೂಚನೆ ಎಂದ ವರದಿ ಹೇಳಿದೆ.

ನವೆಂಬರ್ ೮ರಂದು ಹಾಲಿ ವಿಧಾನಸಭೆಯ ಅವಧಿ ಮುಕ್ತಾಯವಾಗುತ್ತಿದ್ದರೂ ಉಭಯ ಪಕ್ಷಗಳು ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸರ್ಕಾರ ರಚನೆ ಸಂಬಂಧವಾಗಿ ಈವರೆಗೆ ಒಂದೇ ಒಂದು ಔಪಚಾರಿಕ ಸಭೆಯನ್ನು ಕೂಡಾ ನಡೆಸಿಲ್ಲ.

ಸೇನೆಯು ಮೈತ್ರಿಕೂಟದ ಪಾಲುದಾರನಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದೆ ಮತ್ತು ಕೊನೆಯ ಕ್ಷಣದವರೆಗೂ ಅದು ತನ್ನ ಮೈತ್ರಿಧರ್ಮಕ್ಕೆ ಅಂಟಿಕೊಂಡಿರುತ್ತದೆಎಂದು ಸೇನಾ ನಾಯಕ ಸಂಜಯ್ ರಾವತ್ ಅವರು ಶನಿವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ನೂತನ ಸರ್ಕಾರ ರಚಿಸಲು ಬೆಂಬಲ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್ ನಾಯಕ ಹುಸೈನ್ ದಲವಾಯಿ ಅವರು ಪತ್ರ ಬರೆದುದನ್ನೂ ರಾವತ್ ಸ್ವಾಗತಿಸಿದರು.

ರಾವತ್ ಅವರು ಶುಕ್ರವಾರಸೇನೆಯು ಇಚ್ಛಿಸಿದರೆ ಸ್ಥಿರ ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬೆಂಬಲವನ್ನು ಪಡೆಯಬಲ್ಲುದುಎಂದು ಹೇಳಿದ್ದರು.

ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸೇನೆ ಮತ್ತು ಬಿಜೆಪಿಯನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಪರಸ್ಪರ ಮಾತನಾಡುತ್ತಿದ್ದಾರೆ. ಸೇನೆಯು ಸರ್ಕಾರ ರಚನೆಯ ಮಾತುಕತೆಗಳನ್ನು ನಿಲ್ಲಿಸಿಲ್ಲ, ಮಾತುಕತೆ ಆರಂಭವಾಗಿಯೇ ಇಲ್ಲಎಂದು ರಾವತ್ ಹೇಳಿದ್ದರು.

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಹೊಸ ರಾಜಕೀಯ ಸೂತ್ರ ಸಿದ್ಧವಾಗಬಹುದು ಎಂಬ ಊಹಾಪೋಹಗಳ ಮಧ್ಯೆ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಜೊತೆಗಿನ ತಮ್ಮ ಇತ್ತೀಚಿನ ಭೇಟಿಯನ್ನು ಗೌಣಗೊಳಿಸಲು ರಾವತ್ ಅವರು ಯತ್ನಿಸಿದಂತೆ ಕಾಣಿಸಿತು.

ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳಿವೆ ಬಗ್ಗೆ ವಿಭಿನ್ನ ರಾಜಕೀಯ ಪಕ್ಷಗಳು ಪರಸ್ಪರ ಮಾತುಕತೆ ನಡೆಸಬಹುದು ಎಂದು  ರಾವತ್ ಹೇಳಿದರು.

ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಹಾಗೆಯೇ ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ಬಿಜೆಪಿ ಸಮಾನ ಸಿದ್ಧಾಂತಗಳನ್ನು ಹೊಂದಿದ್ದವೇ?’ ಎಂದು ಅವರು ಪ್ರಶ್ನಿಸಿದರು.

ಮುಂದಿನ ವಾರಾರಂಭದಲ್ಲಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಕೇಳಲಾದ ಪ್ರಶ್ನೆಗೆಸಂಪ್ರದಾಯದ ಪ್ರಕಾರ ಸರ್ಕಾರ ರಚನೆಗೆ ರಾಜ್ಯಪಾಲರು ಏಕೈಕ ದೊಡ್ಡ ಪಕ್ಷವನ್ನು ಆಹ್ವಾನಿಸುತ್ತಾರೆಎಂದು ರಾವತ್ ಬೊಟ್ಟು ಮಾಡಿದರು.

ಸರ್ಕಾರ ರಚನೆಗೆ ಬೇಕಾದ ಮಹತ್ವದ ಅಂಶ ಏನು ಅಂದರೆ ೧೪೫ ಶಾಸಕರ ಬೆಂಬಲ (೨೮೮ ಸದಸ್ಯ ಬಲದ ಸದನದಲ್ಲಿ). ಯಾರು ಸಂಖ್ಯೆಯನ್ನು ಹೊಂದಿರುತ್ತಾರೋ ಅವರಿಗೆ ನಾವು ಶುಭ ಹಾರೈಸುತ್ತೇವೆಎಂದು ಅವರು ನುಡಿದರು.

ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ’ಹೇಳಿಕೆಯಲ್ಲಿ ತಪ್ಪೇನಿದೆ?’ ಎಂದು ರಾವತ್ ಪ್ರಶ್ನಿಸಿದರು.

ಸರ್ಕಾರ ರಚಿಸಲು ಸೇನೆಯನ್ನು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಸೂಚಿಸಿ ದಲವಾಯಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂದಿ ಅವರಿಗೆ ಬರೆದ ಪತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆದಲವಾಯಿ ಅವರು ಸಮಾಜವಾದಿ ಸಿದ್ಧಾಂತಕ್ಕೆ ಸೇರಿದವರು. ಅವರು ಪ್ರಗತಿಪರ ಮುಸಿಮ್ ಸಮುದಾಯದಿಂದ ಬಂದವರು. ನಾವು ಅವರ ನಿಲುವನ್ನು ಸ್ವಾಗತಿಸುತ್ತೇವೆ. ಆದರೆ, ಸೇನೆಯು ಚುನಾವಣೆಯಲ್ಲಿ ಮೈತ್ರಿಕೂಟವಾಗಿ ಹೋರಾಡಿದೆ. ಮತ್ತು ಕೊನೆಯವರೆಗೂ ನಾವು ಮೈತ್ರಿಧರ್ಮಕ್ಕೆ ಅಂಟಿಕೊಂಡಿರುತ್ತೇವೆಎಂದು ರಾವತ್ ಹೇಳಿದರು.

No comments:

Advertisement