Saturday, November 16, 2019

ಶಬರಿಮಲೈ: ಪ್ರಚಾರಪ್ರಿಯರಿಗೆ ಸರ್ಕಾರದ ಬೆಂಬಲವಿಲ್ಲ

ಶಬರಿಮಲೈ: ಪ್ರಚಾರಪ್ರಿಯರಿಗೆ ಸರ್ಕಾರದ ಬೆಂಬಲವಿಲ್ಲ
ನಿಲುವು ಬದಲಿಸಿದ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್
ತಿರುವನಂತಪುರಂ: ಶಬರಿಮಲೈಯು ಹೋರಾಟದ ತಾಣವಲ್ಲ ಮತ್ತು ಎಡ ಪ್ರಜಾತಾಂತ್ರಿಕ ರಂಗ (ಎಲ್ಡಿಎಫ್) ಸರ್ಕಾರವು ಪ್ರಚಾರ ಪಡೆಯುವುದಕ್ಕಾಗಿ ಶಬರಿಮಲೈ ದೇವಾಲಯ ಪ್ರವೇಶಿಸುವುದಾಗಿ ಪ್ರಕಟಣೆ ನೀಡುವವರಿಗೆ ಯಾವುದೇ ಬೆಂಬಲ, ರಕ್ಷಣೆ ಒದಗಿಸುವುದಿಲ್ಲ ಎಂದು ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು 2019 ನವೆಂಬರ್ 15ರ ಶುಕ್ರವಾರ ಸ್ಪಷ್ಟಪಡಿಸಿದರು.

ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸಲು ಯತ್ನಿಸುವ ಮಹಿಳಾ ಕಾರ್ಯಕರ್ತರಿಗೆ ಪೊಲೀಸರು ಭದ್ರತೆ ಒದಗಿಸಲಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಚಿವರುಇತ್ತೀಚೆಗಿನ ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಆದ್ದರಿಂದ ಶಬರಿಮಲೈಗೆ ಹೋಗಲು ಇಚ್ಛಿಸುವ ಮಹಿಳೆಯರುನ್ಯಾಯಾಲಯದ ಆದೇಶಪಡೆದುಕೊಳ್ಳಬೇಕುಎಂದು ಹೇಳಿದರು.

ಶಬರಿಮಲೈ ದೇವಾಲಯ ಪ್ರವೇಶಕ್ಕೆ ಋತುಮತಿ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ರದ್ದು ಪಡಿಸಿದ ತನ್ನ ಹಿಂದಿನ ಆದೇಶದ ಹಿನ್ನೆಲೆಯಲ್ಲಿ ಉದ್ಭವಿಸಿದ ಧಾರ್ಮಿಕ ವಿಷಯಗಳು ಸೇರಿದಂತೆ ವಿವಿಧ ವಿಚಾರಗಳ ಮರುಪರಿಶೀಲನೆಗೆ ಏಳು ಮಂದಿ ನ್ಯಾಯಮೂರ್ತಿಗಳ ವಿಸ್ತೃತ ಪೀಠ ರಚನೆಗೆ ಸುಪ್ರೀಂಕೋರ್ಟ್ ನವೆಂಬರ್ ೧೪ರ ಗುರುವಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡುತ್ತಿದ್ದರು.

ಶಬರಿಮಲೈಯು ಕಾರ್ಯಕರ್ತರಿಗೆ ತಮ್ಮ ಹೋರಾಟ ಪ್ರದರ್ಶನದ ತಾಣವಲ್ಲ. ಕೆಲವು ವ್ಯಕ್ತಿಗಳು ಪತ್ರಿಕಾಗೋಷ್ಠಿ ಕರೆದು ತಾವು ದೇವಾಲಯ ಪ್ರವೇಶಿಸುವುದಾಗಿ ಪ್ರಕಟಣೆ ನೀಡುತ್ತಾರೆ. ಅವರು ಕೇವಲ ಪ್ರಚಾರಕ್ಕಾಗಿ ಇದನ್ನು ಮಾಡುತ್ತಾರೆ. ಸರ್ಕಾರ ಇಂತಹ ಪ್ರವೃತ್ತಿಗಳಿಗೆ ಬೆಂಬಲ ನೀಡುವುದಿಲ್ಲಎಂದು ಕಡಕಂಪಲ್ಲಿ ಹೇಳಿದರು.

ಎಲ್ಲ ವಯೋಮಾನದ ಮಹಿಳೆಯರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂಕೋರ್ಟಿನ ೨೦೧೮ ಸೆಪ್ಟೆಂಬರ್ ೨೮ರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ಇಲ್ಲದ ಕಾರಣ ತಾವು ದೇವಾಲಯವನ್ನು ಪ್ರವೇಶಿಸುವುದಾಗಿ ಕೆಲವು ಕಾರ್ಯಕರ್ತೆಯರು ಹೇಳಿರುವ ಬಗ್ಗೆ ಗಮನ ಸೆಳೆದಾಗ, ’ಅವರು ಸುಪ್ರೀಂಕೋರ್ಟನ್ನು ಸಂಪರ್ಕಿಸಿ ಆದೇಶ ಪಡೆದುಕೊಂಡು ಬರಬಹುದುಎಂದು ಸಚಿವರು ನುಡಿದರು.

ಸುಪ್ರೀಂಕೋರ್ಟಿನ ಆದೇಶಕ್ಕೆ ಸಂಬಂಧಿಸಿದಂತೆ ಇನ್ನೂ ಗೊಂದಲಗಳಿವೆ. ಸರ್ಕಾರವು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಿದೆಎಂದು ಅವರು ಹೇಳಿದರು.

ಶಬರಿಮಲೈ ದೇಗುಲ ಪ್ರವೇಶ ಪ್ರಕರಣವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ಒಪ್ಪಿಸಲು ನವೆಂಬರ್ ೧೪ರ ಗುರುವಾರ : ಬಹುಮತದ ತೀರ್ಪು ನೀಡಿದ ಪಂಚ ಸದಸ್ಯ ಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಬಹುಮತದ ತೀರ್ಪಿಗೆ ಭಿನ್ನಮತ ವ್ಯಕ್ತ ಪಡಿಸಿ ಅಲ್ಪಮತದ ತೀರ್ಪು ನೀಡಿದ್ದರು.

: ಬಹುಮತದ ತೀರ್ಪಿನ ಬಗ್ಗ ಅತ್ಯಂತ ಮಹತ್ವದ ಭಿನ್ನಮತ ವ್ಯಕ್ತ ಪಡಿಸಿರುವುದನ್ನು ಸರ್ಕಾರ ಗಮನಿಸಬೇಕುಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಶುಕ್ರವಾರ ಹೇಳಿದರು.

ನಿಮ್ಮ ಸರ್ಕಾರಕ್ಕೆ ಗುರುವಾರ ಶಬರಿಮಲೈ ಪ್ರಕರಣದಲ್ಲಿ ಅತ್ಯಂತ ಮಹತ್ವದ್ದಾಗಿರುವ ಭಿನ್ನಮತದ ತೀರ್ಪನ್ನು ಓದಲು ಹೇಳಿ, ನಿಮ್ಮ ಪ್ರಾಧಿಕಾರಿ ಮತ್ತು ಸರ್ಕಾರಕ್ಕೆ ಅದನ್ನು ಓದಲು ಹೇಳಿಎಂದು ನ್ಯಾಯಮೂರ್ತಿ ನಾರಿಮನ್ ಅವರು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರಿಗೆ ಶುಕ್ರವಾರ ನ್ಯಾಯಾಲಯದಲ್ಲಿ ಸೂಚಿಸಿದರು.

ಶಬರಿಮಲೈ ದೇವಾಲಯ ಮತ್ತು ಮಸೀದಿಗಳಿಗೆ ಮಹಿಳೆಯರ ಪ್ರವೇಶ ಮತ್ತು ದಾವೂದಿ ಬೊಹ್ರಾ ಸಮುದಾಯದಲ್ಲಿ ಜಾರಿಯಲ್ಲಿರುವ ಮಹಿಳಾ ಜನನಾಂಗ ಛೇದನ ವಿಷಯ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳನ್ನು ವಿಸ್ತೃತ ಪೀಠವು  ಪುನರ್ ಪರಿಶೀಲನೆ ಮಾಡಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠ ಹೇಳಿತ್ತು.

ಶಬರಿಮಲೈ ದೇಗುಲದ ಮಹಿಳಾ ಪ್ರವೇಶಕ್ಕೆ ಸಂಬಂಧಿಸಿದಂತೆ ತನ್ನ ಹಿಂದಿನ ಆದೇಶದ ಪುನರ್ ಪರಿಶೀಲನೆ ಕೋರಿಕೆ ಅರ್ಜಿಗಳನ್ನು ಬಾಕಿ ಇರಿಸಲು : ಬಹುಮತದ ತೀರ್ಪಿನ ಮೂಲಕ ನಿರ್ಧರಿಸಿದ ಪೀಠವು, ’ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧಗಳು ಶಬರಿಮಲೈಗೆ ಮಾತ್ರವೇ ಸೀಮಿತವಲ್ಲ, ಇತರ ಧರ್ಮಗಳಲ್ಲೂ ಆಚರಣೆಯಲ್ಲಿವೆಎಂದು ಹೇಳಿತ್ತು.

೫೬ ಪುನರ್ ಪರಿಶೀಲನಾ ಅರ್ಜಿಗಳು, ನಾಲ್ಕು ಹೊಸ ರಿಟ್ ಅರ್ಜಿಗಳು ಸೇರಿದಂತೆ ಸುಮಾರು ೬೫ ಅರ್ಜಿಗಳು ಸುಪ್ರೀಂಕೋರ್ಟಿನ ೨೦೧೮ರ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದವು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2019 ನವೆಂಬರ್ 14ರ ಗುರುವಾರದ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ಸ್ಪಷ್ಟನೆ ಪಡೆಯುವ ಸಲುವಾಗಿ ಎಡ ರಂಗ ಸರ್ಕಾರವು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುವುದು ಎಂದು ಹೇಳಿದ್ದರು. ನ್ಯಾಯಾಲಯದ ಆದೇಶ ಏನೇ ಇದ್ದರೂ ಅದನ್ನು ಅನುಷ್ಠಾನಗೊಳಿಸಲು ಸರ್ಕಾರ ಯಾವಾಗಲೂ ಸಿದ್ಧವಿದೆ ಎಂದು ವಿಜಯನ್ ತಿಳಿಸಿದ್ದರು.

ಜನವರಿ ೨ರಂದು ಮೆಟ್ಟಿಲುಗಳ ಮೂಲಕ ಬೆಟ್ಟ ಏರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಬಿಂದು ಮತ್ತು ಕನಕದುರ್ಗ ಅವರು ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠದ ತೀರ್ಪಿಗೆ ಪ್ರತಿಕ್ರಿಯಿಸುತ್ತಾಸುಪ್ರೀಂಕೋರ್ಟ್ ತನ್ನ ಸೆಪ್ಟೆಂಬರ್ ೨೮ರ ತೀರ್ಪಿಗೆ ತಡೆಯಾಜ್ಞೆ ನೀಡದೇ ಇರುವುದು ಇತ್ತೀಚಿನ ಆದೇಶದ ಧನಾತ್ಮಕ ಅಂಶಎಂದು ಹೇಳಿದರು.

ಅಯೋಧ್ಯಾ  ತೀರ್ಪನ್ನು  ಸ್ವಾಗತಿಸಿರುವ ಸಂಘ ಪರಿವಾರವು ಪ್ರಕರಣದಲ್ಲೂ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಅಂಗೀಕರಿಸಲೇಬೇಕಾಗುತ್ತದೆ. ಸರ್ಕಾರ ಮತ್ತು ಪೊಲೀಸರು ಕೂಡಾ ಶಬರಿಮಲೈಗೆ ಹೋಗ ಬಯಸುವವರಿಗೆ ನೆರವು ಮತ್ತು ರಕ್ಷಣೆ ಕೊಡಲೇಬೇಕಾಗುತ್ತದೆಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಕನಕದುರ್ಗ ಹೇಳಿದರು.

ಹಿಂದಿನ ಆದೇಶಕ್ಕೆ ತಡೆಯಾಜ್ಞೆ ಇಲ್ಲದೇ ಹೋದರೆ ಪುನಃ ಶಬರಿಮಲೈಗೆ ಹೋಗಲು ನಾನು ಇಷ್ಟ ಪಡುತ್ತೇನೆ ಎಂದು ಅವರು ನುಡಿದರು.

ಖ್ಯಾತ ದೇವಾಲಯವು ಎರಡು ತಿಂಗಳ ವಾರ್ಷಿಕ ಯಾತ್ರಾಋತು ಆರಂಭಗೊಳ್ಳುವುದಕ್ಕೆ ಒಂದು ದಿನ ಮುಂಚಿತವಾಗಿ ನವೆಂಬರ್ ೧೬ರಂದು ತೆರೆಯಲಿದೆ.

No comments:

Advertisement