ಕೇಂದ್ರೀಯ
ಇಲಾಖೆಗಳಲ್ಲಿ ೭ ಲಕ್ಷ ಹುದ್ದೆ
ಖಾಲಿ
ನವದೆಹಲಿ: ದೇಶಾದ್ಯಂತ ಉದ್ಯೋಗ ಕೊರತೆ ಕಾಡಿರುವಂತೆಯೇ, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ
ಸುಮಾರು ೭ ಲಕ್ಷ ಹುದ್ದೆಗಳು
ಖಾಲಿ ಇರುವ ಸಂಗತಿ ಬಯಲಾಯಿತು. ೨೦೧೪ರ ಬಳಿಕ ಇಷ್ಟೊಂದು ಹುದ್ದೆಗಳು ೨೦೧೮ರವರೆಗೆ ಖಾಲಿಯಿದ್ದವು ಎಂದು ಕೇಂದ್ರ ಸಿಬಂದಿ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿತು.
ಸಿಬಂದಿ
ಸಚಿವಾಲಯ ತಿಳಿಸಿದಂತೆ, ೨೦೧೮
ಮಾ.೧ರವರೆಗೆ ೩೧.೧೮ ಲಕ್ಷ
ಸಿಬಂದಿಯಷ್ಟೇ ಕೇಂದ್ರದ ಅಧೀನ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಿಬಂದಿ ಸಾಮರ್ಥ್ಯ ಒಟ್ಟು ೩೮ ಲಕ್ಷದಷ್ಟು ಇದೆ.
೨೦೧೪ರ ಬಳಿಕ ಸುಮಾರು ೧.೫೭ ಲಕ್ಷ
ಹುದ್ದೆ ನೇಮಕಾತಿಗೆ ಸರ್ಕಾರ ಮುಂದಾಗಿದ್ದರೂ, ೨೦೧೮ರ ವೇಳೆಗೆ ೩೨.೨೩ ಲಕ್ಷದಷ್ಟು
ಸಿಬಂದಿ ಮಾತ್ರ ಹುದ್ದೆಯಲ್ಲಿದ್ದಾರೆ ಎಂದು ಮಾಹಿತಿ ತಿಳಿಸಿತು.
ರೈಲ್ವೇ
ಇಲಾಖೆ ಅತಿ ದೊಡ್ಡ ಸಂಖ್ಯೆಯಲ್ಲಿ ಸಿಬಂದಿಗಳನ್ನು ಹೊಂದಿದ್ದು, ಇದರಲ್ಲಿ ೨.೫ ಲಕ್ಷದಷ್ಟು
ಹುದ್ದೆಗಳು ೨೦೧೮ ಮಾ.೧ರ ವೇಳೆಗೆ
ಖಾಲಿ ಇದ್ದವು. ರಕ್ಷಣಾ ಖಾತೆ (ಸಿವಿಲ್)ನಲ್ಲಿ ೧.೯ ಲಕ್ಷದಷ್ಟು
ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಯಿತು.
ಇದೇ
ವೇಳೆ ೨೦೧೭-೧೮ರ ಅವಧಿಯಲ್ಲಿ ಕೇಂದ್ರ ಸರ್ಕಾರ ಸಿಬ್ಬಂದಿಗೆ ೧.೯೦ ಲಕ್ಷ
ಕೋಟಿ ರೂ. ವೇತನ, ಭತ್ಯೆಗಳನ್ನು ಪಾವತಿಸಿದೆ ಎಂದು ಇಲಾಖೆ ಹೇಳಿತು.
No comments:
Post a Comment