ಗ್ರಾಹಕರ ಸುಖ-ದುಃಖ

My Blog List

Friday, November 29, 2019

ಮಲಯಾಳಿ ಕವಿ ಅಕ್ಕಿಥಮ್ಗೆ ಜ್ಞಾನಪೀಠ ಪ್ರಶಸ್ತಿಯ ಗರಿಮೆ

ಮಲಯಾಳಿ ಕವಿ ಅಕ್ಕಿಥಮ್ಗೆ ಜ್ಞಾನಪೀಠ ಪ್ರಶಸ್ತಿಯ ಗರಿಮೆ
ನವದೆಹಲಿ: ಮಲಯಾಳದ ಖ್ಯಾತ ಕವಿ ಅಕ್ಕಿಥಮ್ ಅವರು ಪ್ರಸಕ್ತ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು.

 2019 ನವೆಂಬರ್ 29ರ
 ಶುಕ್ರ ವಾರ ಕುರಿತು ಘೋಷಣೆ ಹೊರಡಿಸಿದ ಜ್ಞಾನಪೀಠ ಆಯ್ಕೆ ಸಮಿತಿ, “೫೫ನೇ ಜ್ಞಾನಪೀಠ ಪ್ರಶಸ್ತಿಗೆ ಮಲಯಾಳದ ಪ್ರಸಿದ್ಧ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ಆಯ್ಕೆ ಯಾಗಿದ್ದಾರೆಎಂದು ತಿಳಿಸಿತು.  ಕೇವಲ ಕವಿತೆಗಳು ಮಾತ್ರವಲ್ಲದೇ ನಾಟಕ, ಸ್ಮರಣ ಗ್ರಂಥಗಳು, ವಿಮರ್ಶಾ ಪ್ರಬಂಧಗಳು, ಮಕ್ಕಳ ಸಾಹಿತ್ಯ, ಸಣ್ಣಕಥೆಗಳು, ಭಾಷಾಂತರ ಕೃತಿಗಳನ್ನು ಕೂಡ ಇವರು ರಚಿಸಿದ್ದಾರೆ.

೧೯೨೬ರಲ್ಲಿ ಜನಿಸಿದ ಅಕ್ಕಿಥಮ್ ಅವರು ಈವರೆಗೆ ೫೫ ಕೃತಿಗಳನ್ನು ರಚಿಸಿದ್ದು, ಪೈಕಿ ೪೫ ಕವನ ಸಂಕಲನಗಳಾಗಿವೆ. ಖಂಡ ಕಾವ್ಯಗಳು, ಕಥಾ ಕಾವ್ಯಗಳು, ಚರಿತ ಕಾವ್ಯಗಳು ಹಾಗೂ ಕವನಗಳು ಇವುಗಳಲ್ಲಿ ಸೇರಿವೆ. ಪದ್ಮಶ್ರೀ ಪುರಸ್ಕೃತರಾಗಿರುವ ಅವರು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೩), ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೭೨ ಮತ್ತು ೧೯೮೮), ಮಾತೃಭೂಮಿ ಪ್ರಶಸ್ತಿ, ವಯಲಾರ್ ಪ್ರಶಸ್ತಿ, ಕಬೀರ್ ಸಮ್ಮಾನ್ ಸೇರಿದಂತೆ ಅನೇಕ ಸಾಹಿತ್ಯ ಸಂಬಂಧಿ ಗೌರವಗಳಿಗೂ ಪಾತ್ರ ರಾಗಿದ್ದಾರೆ. ಇವರ ಕೃತಿಗಳು ಭಾರತದ ಇತರೆ ಭಾಷೆಗಳು ಹಾಗೂ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿವೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ, ಕಾದಂಬರಿಗಾರ್ತಿ ಪ್ರತಿಭಾ ರೇ ನೇತೃತ್ವದ ತೀರ್ಪುಗಾರರ ಸಮಿತಿಯಲ್ಲಿ ಮಾಧವ್ ಕೌಶಿಕ್, ಪುರುಷೋತ್ತಮ ಬಿಳಿಮಲೆ, ಮಧುಸೂದನ್ ಆನಂದ್, ಶಮೀಮ್ ಹನಫಿ, ಹರೀಶ್ ತ್ರಿವೇದಿ, ಸುರಂಜನ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

No comments:

Advertisement