My Blog List

Friday, November 8, 2019

ಅಮೆರಿಕ ಸ್ಥಳೀಯ ಚುನಾವಣೆಯಲ್ಲಿ ಕನ್ನಡಿಗನಿಗೆ ಜಯ

ಅಮೆರಿಕ ಸ್ಥಳೀಯ ಚುನಾವಣೆಯಲ್ಲಿ ಕನ್ನಡಿಗನಿಗೆ ಜಯ
ವಾಷಿಂಗ್ಟನ್​:  ಕನ್ನಡಿಗ ಸೇರಿ ಭಾರತದ ನಾಲ್ವರು ಅಮೆರಿಕ ಸ್ಥಳೀಯ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದರು. ಇವರಲ್ಲಿ ಮುಸ್ಲಿಂ ಮಹಿಳೆಯೂ ಸೇರಿರುವುದು ವಿಶೇಷ.

ಬೆಂಗಳೂರು ಮೂಲದ ಸುಹಾಸ್ಸುಬ್ರಮಣ್ಯಂ, ಭಾರತ ಮೂಲದ ಗಜಾಲಾ ಹಶ್ಮಿ ವರ್ಜಿನಿಯಾ ಸ್ಟೇಟ್​​ ಸೆನೆಟ್ಚುನಾವಣೆಯಲ್ಲಿ ಗೆದ್ದು ಬೀಗಿದರು. ಸುಹಾಸ್ತಾಯಿ ಬೆಂಗಳೂರು ಮೂಲದವರಾಗಿದ್ದು, 1979ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ನಂತರ ವೈದ್ಯರಾಗಿ ಅವರು ಸೇವೆ ಸಲ್ಲಿಸಿದ್ದರು. ಬರಾಕ್ಒಬಾಮಾ ಅಧಿಕಾರಾವಧಿಯಲ್ಲಿ ಸುಹಾಸ್ ವೈಟ್ಹೌಸ್ನಲ್ಲಿತಂತ್ರಜ್ಞಾನ ನೀತಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ವೇಳೆ ಕೆಲ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಗಜಾಲಾ ಭಾರತ ಮೂಲದವರಾಗಿದ್ದು, ಕಾಲೇಜ್ಪ್ರೊಫೆಸರ್ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ವರ್ಜಿನಿಯಾ ಸ್ಟೇಟ್ಸೆನೆಟ್ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎನ್ನುವ ಖ್ಯಾತಿಗೆ ಅವರು ಪಾತ್ರರಾದರು.

ಗೆದ್ದ
ನಂತರ ಮಾತನಾಡಿದ ಗಜಾಲಾ, “ ಗೆಲುವು ನನ್ನೊಬ್ಬಳದ್ದೇ ಅಲ್ಲ. ವರ್ಜಿನಿಯಾದಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಿದೆ. ಅದನ್ನು ನಾವು ಮಾಡುತ್ತೇವೆ,” ಎಂದು ಹೇಳಿದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​​ ಟ್ರಂಪ್ಎದುರು ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ಅವರು ಗಜಾಲಾಗೆ ಟ್ವಿಟ್ಟರ್ನಲ್ಲಿ ಅಭಿನಂದನೆ ಸಲ್ಲಿಸಿದರು.

ಕ್ಯಾಲಿಫೋರ್ನಿಯಾದಲ್ಲಿ ಮೊನೋ ರಾಜ್ಹಾಗೂ ಉತ್ತರ ಕರೋಲಿನಾದ ಡಿಂಪಲ್ಅಜ್ಮೆರಾ ಕೂಡ ಸ್ಥಳೀಯ ಚುನಾವಣೆಯಲ್ಲಿ ಗೆದ್ದಿದ್ದು ಇವರು ಕೂಡ ಭಾರತ ಮೂಲದವರು.

No comments:

Advertisement