Saturday, November 23, 2019

ಶನಿವಾರ ರಾಜ್ಯಪಾಲರ ಭೇಟಿ ಇಲ್ಲ. ಕಾಂಗ್ರೆಸ್ಸಿಗೆ ಇನ್ನೂ ಅನುಮಾನ!

ಶನಿವಾರ ರಾಜ್ಯಪಾಲರ ಭೇಟಿ ಇಲ್ಲ
ಕಾಂಗ್ರೆಸ್ಸಿಗೆ
ಇನ್ನೂ ಅನುಮಾನ!
ಮುಂಬೈ:  ಶಿವಸೇನಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ - ಮೂರೂ ಪಕ್ಷಗಳು ಸರ್ಕಾರ ರಚನೆಯ ಹಕ್ಕು ಮಂಡಿಸಲು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು 2019 ನವೆಂಬರ್ 23ರ ಶನಿವಾರ ಭೇಟಿ ಮಾಡುವ ಸಾಧ್ಯತೆಗಳು ಇಲ್ಲ ಎಂದು ಕಾಂಗ್ರೆಸ್ ಮೂಲಗಳು  2019 ನವೆಂಬರ್ 22ರ ಶುಕ್ರವಾರ ರಾತ್ರಿ ತಿಳಿಸಿದವು.

ಅಂತಿಮ ಒಪ್ಪಂದಕ್ಕೆ ಮುನ್ನ ಬಗೆಹರಿಸಿಕೊಳ್ಳಬೇಕಾದ ಇನ್ನೂ ಕೆಲವು ವಿಷಯಗಳಿವೆ ಎಂದು ಕಾಂಗ್ರೆಸ್ ಮೂಲಗಳು ಹೇಳಿದ್ದು, ಶರದ್ ಪವಾರ್ ನೇತೃತ್ವದ ಎನ್ಸಿಪಿಗೆ ಪೂರ್ಣಾವಧಿಗೆ ನಿರ್ಣಾಯಕ ಖಾತೆಗಳನ್ನು ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಭಯಗಳು ಇದ್ದು, ನಿರ್ಣಾಯಕ ಖಾತೆಗಳನ್ನು ರೊಟೇಷನ್ ಪ್ರಕಾರ ಹಂಚಿಕೊಳ್ಳಬೇಕು ಎಂದು ಪಕ್ಷದ ರಾಜ್ಯ ನಾಯಕರು ಬಯಸಿದ್ದಾರೆ ಎಂದು ಮೂಲಗಳು ಹೇಳಿದವು.

ಹಿನ್ನೆಲೆಯಲ್ಲಿ ನವೆಂಬರ್  23ರ ಶನಿವಾರ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆಗಳು ಇಲ್ಲ. ಶನಿವಾರ ಹಗಲು ಇನ್ನೊಂದು ಸುತ್ತಿನ ಮಾತುಕತೆಗಳು ನಡೆದ ಬಳಿಕ ಪತ್ರಿಕಾಗೋಷ್ಠಿ ಕರೆಯಲಾಗುವುದು ಎಂದು ಮೂಲಗಳು ಹೇಳಿದವು.

ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರುನಾವು ಉದ್ಧವ್ ಠಾಕ್ರೆಅವರ ಬಳಿ ಮುಖ್ಯಮಂತ್ರಿಯಾಗುವಂತೆ ಹೇಳಿದ್ದೇವೆ. ಈವರೆಗೆ ಅವರು ಪಾತ್ರವನ್ನು ನಿರಾಕರಿಸಿಲ್ಲ. ಅವರು ಜವಾಬ್ದಾರಿ ವಹಿಸಿಕೊಂಡರೆ ರಾಜ್ಯ ಸರ್ಕಾರಕ್ಕೆ ಒಳ್ಳೆಯದು. ಅವರು ನಿರಾಕರಿಸಿ ಬೇರೆ ಯಾರನ್ನಾದರೂ ಹೆಸರಿಸಿದರೆ ನಾವು ಅದನ್ನು ಅಂಗೀಕರಿಸಬೇಕಾಗುತ್ತದೆ. ಎಲ್ಲವನ್ನೂ ನಾಳೆ ನಿರ್ಧರಿಸಲಾಗುತ್ತದೆ ಮತ್ತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.

ಮಧ್ಯೆ, ಉದ್ಧವ್ ಠಾಕ್ರೆ ಅವರನ್ನು ಸರ್ವಾನುಮತದಿಂದ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂಬ ಶರದ್ ಪವಾರ್ ಅವರ ಹೇಳಿಕೆಯ ಬೆನ್ನಲ್ಲೇ ಶಿವಸೇನಾ ಮೂಲಗಳುಇವೆಲ್ಲ ಬರೀ ಊಹಾಪೋಹಗಳು. ಯಾವುದೇ ಸ್ಪಷ್ಟ ನಿರ್ಧಾರ ಇನ್ನೂ ಆಗಿಲ್ಲಎಂದು ಹೇಳಿದವು.

No comments:

Advertisement