ಗ್ರಾಹಕರ ಸುಖ-ದುಃಖ

My Blog List

Sunday, December 29, 2019

ಬಿಜೆಪಿಯಿಂದಾಗಿ ಅಸ್ಸಾಂ ಮತ್ತೆ ಹಿಂಸೆಯ ದಾರಿಗೆ: ರಾಹುಲ್ ಗಾಂಧಿ

ಬಿಜೆಪಿಯಿಂದಾಗಿ ಅಸ್ಸಾಂ ಮತ್ತೆ ಹಿಂಸೆಯ ದಾರಿಗೆ:
ರಾಹುಲ್ ಗಾಂಧಿ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಅಸ್ಸಾಂ ರಾಜ್ಯವನ್ನು ಹಿಂಸೆಯತ್ತ ತಳ್ಳುವ ಭೀತಿಯನ್ನು ತಂದೊಡ್ಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ಡಿಸೆಂಬರ್ 28ರ ಶನಿವಾರ ಕಳವಳ ವ್ಯಕ್ತ ಪಡಿಸಿದರು.

ಬಿಜೆಪಿಯ ನೀತಿಗಳ ಪರಿಣಾಮವಾಗಿ ಅಸ್ಸಾಂ ಮತ್ತು ಹಿಂಸೆಯ ಹಾದಿಗೆ ವಾಪಸಾಗುತ್ತಿದೆ ಎಂಬ ಭೀತಿ ನನಗಿದೆಎಂದು ತಿದ್ದುಪಡಿ ಮಾಡಲಾದ ಪೌರತ್ವ ಕಾಯ್ದೆಯನ್ನು ಉಲ್ಲೇಖಿಸುತ್ತಾ ರಾಹುಲ್ ಹೇಳಿದರು.

ಅಖಿಲ
ಅಸ್ಸಾಂ ವಿದ್ಯಾರ್ಥಿ ಸಂಘ (ಎಎಎಸ್ಯು) ಪ್ರತಿನಿಧಿಗಳು ಮತ್ತು ಅಸ್ಸಾಂ ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರದ ಮಧ್ಯೆ ದಾಖಲೆ ರಹಿತ ವಲಸೆಗಾರರ ವಿರುದ್ಧ ಸಹಿ ಹಾಕಲಾದ ಅಸ್ಸಾಂ ಒಪ್ಪಂದದ ಸ್ಫೂರ್ತಿಯನ್ನು ಹಾಳುಗೆಡವಬಾರದು. ಒಪ್ಪಂದದ ಪರಿಣಾಮವಾಗಿಯೇ ಅಸ್ಸಾಮಿನಲ್ಲಿ ಶಾಂತಿ ಸ್ಥಾಪನೆಗೊಂಡಿತ್ತು ಎಂದು ಕಾಂಗ್ರೆಸ್ ನಾಯಕ ನುಡಿದರು.

ಬಿಜೆಪಿ ಎಲ್ಲಿಗೇ ಹೋಗಲಿ, ಅಲ್ಲಿ ದ್ವೇಷವನ್ನು ಹರಡುತ್ತದೆ. ಅಸ್ಸಾಮಿನಲ್ಲಿ ಯುವಕರು ಪ್ರತಿಭಟಿಸುತ್ತಿದ್ದಾರೆ, ಇತರ ರಾಜ್ಯಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ನೀವು ಏಕೆ ಗುಂಡು ಹಾರಿಸಬೇಕು ಮತ್ತು ಅವರನ್ನು ಕೊಲ್ಲಬೇಕು? ಬಿಜೆಪಿಯು ಜನರ ದನಿಯನ್ನು ಕೇಳಲು ಬಯಸುವುದಿಲ್ಲಎಂದು ಗುವಾಹಟಿಯಲ್ಲಿ ಆಸ್ವಿತ ರಖ್ಯಾರ್ ಸಾಂಬೇಕ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಹುಲ್ ಗಾಂಧಿ ನುಡಿದರು.

ರಾಜ್ಯದಲ್ಲಿ
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ರಾಹುಲ್ ಗಾಂಧಿಯವರು ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದು. ಪೌರತ್ವ ಕಾಯ್ದೆಗೆ ಸಂಸತ್ತಿನ ಅನುಮೋದನೆ ಲಭಿಸಿದ ಬಳಿಕ ಪ್ರತಿಭಟನೆಗಳು ರಾಷ್ಟ್ರದ ಇತರ ಭಾಗಗಳಿಗೂ ವ್ಯಾಪಿಸಿದೆ.

ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಂಸ್ಕೃತಿ, ಭಾಷೆ ಮತ್ತು ಅಸ್ಸಾಂ ಮತ್ತು ಈಶಾನ್ಯದ ಅಸ್ಮಿತೆಯ ಮೇಲೆ ದಾಳಿ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅವರು ನುಡಿದರು.

ದ್ವೇಷ ಮತ್ತು ಹಿಂಸೆಯ ಜೊತೆ ಎಂದಿಗೂ ಅಸ್ಸಾಂ ಪ್ರಗತಿ ಹೊಂದಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಒಂದಾಗಬೇಕು ಮತ್ತು ಬಿಜೆಪಿ ನಾಯಕರಿಗೆ ಅವರು ರಾಜ್ಯದ ಸಂಸ್ಕೃತಿ, ಭಾಷೆ, ಅನನ್ಯತೆ ಮತ್ತು ಇತಿಹಾಸದ ಅನನ್ಯತೆಯ ಮೇಲೆ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಬೇಕುಎಂದು ರಾಹುಲ್ ಗಾಂಧಿ ಹೇಳಿದರು.

No comments:

Advertisement