ಗ್ರಾಹಕರ ಸುಖ-ದುಃಖ

My Blog List

Sunday, December 1, 2019

ಛಾಯಾ ಸಮರದಲ್ಲಿ ಪಾಕ್ ಸೋಲು ಖಚಿತ: ರಾಜನಾಥ್ ಸಿಂಗ್

ಛಾಯಾ ಸಮರದಲ್ಲಿ ಪಾಕ್ ಸೋಲು ಖಚಿತ: ರಾಜನಾಥ್ ಸಿಂಗ್
ಪುಣೆ: ಭಯೋತ್ಪಾದನೆ ಮೂಲಕ ಪಾಕಿಸ್ತಾನವು ಭಾರತದ ವಿರುದ್ಧ ಛಾಯಾಸಮರ ಹೂಡಿದ್ದು, ಅದರಲ್ಲಿ ಅದು ಸೋಲುವುದು ಖಚಿತ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಇಲ್ಲಿ ಹೇಳಿದರು.


ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ೧೩೭ ನೇ ತಂಡದ ನಿರ್ಗಮನ ಪೆರೇಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.


ಇದೇ ವೇಳೆ ಭಯೋತ್ಪಾದಕರನ್ನು ಬಗ್ಗು ಬಡಿಯುತ್ತಿರುವ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಸಚಿವರುಇವರು ದೇಶದ ಶಕ್ತಿ. ಪಾಕಿಸ್ತಾನ ಈಗ ಭಯೋತ್ಪಾದನೆಯಿಂದಾಗಿ ವಿಶ್ವ ಮಟ್ಟದಲ್ಲಿ ಏಕಾಂಗಿಯಾಗಿದೆಎಂದು ಹೇಳಿದರು.


ವಿದೇಶಿ ವಿದ್ಯಾರ್ಥಿಗಳೂ ಸೇರಿದಂತೆ ೨೮೪ ಮಂದಿ ವಿದ್ಯಾರ್ಥಿಗಳು ಬಾರಿ ಪದವಿಗಳನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ಸುಖೋಯ್, ಸಾರಂಗ್ ಹೆಲಿಕಾಪ್ಟರುಗಳನ್ನು ಚಾಲನೆ ಮಾಡಿ ವಿವಿಧ ಕಸರತ್ತುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

No comments:

Advertisement